Home Uncategorizedಶಾಸಕ-ಸಂಸದರ ಜೊತೆ ಸಂವಾದಕ್ಕೆ ನರೇಗಲ್ಲ ಗ್ರಾಮಸ್ಥರ ನಿರ್ದಾರ

ಶಾಸಕ-ಸಂಸದರ ಜೊತೆ ಸಂವಾದಕ್ಕೆ ನರೇಗಲ್ಲ ಗ್ರಾಮಸ್ಥರ ನಿರ್ದಾರ

by Editor
0 comments

ಚೈತನ್ಯ ನ್ಯೂಸ್ ೨೪ ನರೇಗಲ್ಲ ಮೇ.೩:
ಪಟ್ಟಣದ ಸಂತೆ ಬಜರ‍್ನ ಗಣೇಶ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಪಟ್ಟಣಕ್ಕೆ ಮೂಲ ಸೌಲಭ್ಯ ಪಡೆಯಲು ಶಾಸಕ-ಸಂಸದರ ಸಂವಾದ ನಡೆಸಲು ನರ‍್ಧರಿಸಲಾಯಿತು.
ಗದಗ-ಕೃಷ್ಣಾವರ ರೈಲು ಜಾರಿಗೆ ಆಗ್ರಹಿಸಿ ಗದಗ-ವಾಡಿ ಹೋರಾಟ ಸಮಿತಿಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ನರ‍್ಧಾರ ಮಾಡಲಾಯಿತು. ಹಾಲಕೆರೆಯ ಅನ್ನದಾನ ಮಹಾಸ್ವಾಮಿಗಳಿಂದ ಶೈಕ್ಷಣಿಕವಾಗಿ ಒಂದಿಷ್ಟು ಅಭಿವೃದ್ಧಿ ಕಂಡಿರುವ ನರೇಗಲ್ ಪಟ್ಟಣವು, ಮೊದಲು ರೋಣ ತಾಲೂಕಿನಲ್ಲಿದ್ದು, ಈಗ ಗಜೇಂದ್ರಗಡ ತಾಲೂಕಿನಲ್ಲಿರುವ ನರೇಗಲ್ಲ ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ತೀರ ಹಿಂದುಳಿದಿದೆ. ಸಭೆಯಲ್ಲಿದ್ದ ಎಲ್ಲರೂ ಒಕ್ಕೊರಲಿನಿಂದ ಖಂಡಿಸಿದರು.ಹೋರಾಟ ಸಮಿತಿಯ ಸದಸ್ಯ ಡಾ. ಆರ್.ಕೆ ಗಚ್ಚಿನಮಠ ಮಾತನಾಡಿ, ನಾವು ನಮ್ಮ ಪಟ್ಟಣಕ್ಕೆ ಬರಬೇಕಿದ್ದ ಎಲ್ಲ ಸರಕಾರಿ ಸೌಲಭ್ಯ ಹೇಗೆಲ್ಲ ಕಳೆದುಕೊಂಡೆವು, ಅದಕ್ಕೆ ನಮ್ಮೆಲ್ಲರ ನರ‍್ಲಕ್ಷ್ಯ ಎಂಬುದರೆ ವಿವರಿಸಿದರು. ಹೋರಾಟ ಸಮಿತಿ ಸದಸ್ಯ ಅಶೋಕ ಬೇವಿನಕಟ್ಟಿ ಮಾತನಾಡಿ, ಗದಗ-ವಾಡಿ ರೈಲು ಹೋರಾಟ ಸಮಿತಿ ಕೈಗೊಂಡ ಕ್ರಮಗಳನ್ನು ವಿವರಿಸುತ್ತಾ, ನರೇಗಲ್ ಅಭಿವೃದ್ಧಿ ನರ‍್ಲಕ್ಷ್ಯ ಖಂಡಿಸಿ ಹೋರಾಟದ ಅಂಗವಾಗಿ ನಡೆಸಿದ ನರೇಗಲ್ಲ ಬಂದ್ಗೆ ಸರ‍್ವಜನಿಕರು ನೀಡಿದ ಸಹಕಾರ ಚೆನ್ನಾಗಿತ್ತು. ಆದರೆ, ಅದು ಸಾಕಾಗಲಿಲ್ಲ. ಹೋರಾಟದ ಜೋಶ್ ಮುಂದುವರೆದಿದ್ದರೆ ಖಂಡಿತ ರೈಲು ಸಾಧ್ಯವಾಗುತ್ತಿತ್ತೋ ಪಡೆಯಲು ಏನೋ
ಈಗಲಾದರೂ ನಾವೇಲ್ಲರೂ ನಮ್ಮ ರಸ್ತೆ, ರೈಲು ತರಲು ಮತ್ತೆ ಹೋರಾಟ ಪ್ರಾರಂಭಿಸಬೇಕು ಎಂದರು.
ಮುಖಂಡ ಬಸವರಾಜ ವಂಕಲಕುಂಟಿ ಮಾತನಾಡಿ, ನರೇಗಲ್ಲ ಪಟ್ಟಣಕ್ಕೆ ಸಂರ‍್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಇದರಿಂದ ಹಳ್ಳಿಗಳಿಂದ ಬರುವ ಪಕ್ಕದ ಗ್ರಾಮಸ್ಥರು ನರೇಗಲ್ಲಿಗೆ ಬಾರದಂತಾಗಿದೆ. ಪಟ್ಟಣದ ರ‍್ಥಿಕತೆ ಕುಸಿದಿದೆ. ಇದನ್ನು ಸರಿಪಡಿಸುವ ಕರ‍್ಯವಾಗಬೇಕಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಸರ‍್ವಜನಿಕರು ರಸ್ತೆಗಳ ಬಗ್ಗೆ, ಗದಗ-ಕೃಷ್ಣಾವರ ರೈಲು, ಕಚೇರಿ ಸನಿಹದರಲ್ಲಿಯೆ ನೆಮ್ಮದಿ ಕೇಂದ್ರ ಸ್ಥಳಾಂತರ ಎಂಬುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ನರೇಗಲ್ಲದೊಡ್ಡಹೋಬಳಿಯಾಗಿದ್ದು, ಇಲ್ಲಿ ಸಬ್ರಜಿಸ್ಟ್ರಾರ್ ವಾರದಲ್ಲಿ ಮೂರು ದಿನವಾದರೂ ಕರ‍್ಯ ನರ‍್ವಹಿಸುವಂತಾಗಬೇಕು. ವಿನಾಕಾರಣ ನರೇಗಲ್ಲದ ಜನತೆ ತಾಲೂಕಾ ಕೇಂದ್ರಕ್ಕೆ ತಿರುಗಾಡದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂಬ ಸಲಹೆ ಕೇಳಿಬಂದವು. ಕೊನೆಗೆ ಇದಕ್ಕೆಲ್ಲ ಒಂದು ಇದಕ್ಕೆಲ್ಲ ಒಂದು ನರ‍್ದಿಷ್ಟ ಪರಿಹಾರ ಸಿಗಬೇಕೆಂದರೆ ಶಾಸಕರು ಮತ್ತು ಸಂಸದರ ಸಂವಾದ ರ‍್ಪಡಿಸಬೇಕು ಎಂದು ಸಭೆಯಲ್ಲಿ ನರ‍್ಧರಿಸಿದರು.
ಹೊನ್ನಾಪೂರ, ಉಮೇಶ ಸಂಗನಾಳ ಮಠ, ಶರಣಪ್ಪ ರ‍್ಮಾಯತ, ವೀರಯ್ಯ ಚೌಕಿಮಠ, ಮಹೇಶ ಜೋಳದೆ, ಶರಣಪ್ಪ ಕಲಾಲಬಂಡಿ ಸೇರಿದಂತೆ ವಿವಿಧ ಸಂಘಟನೆಗಳ ಈವೇಳೆ ಶಿವಪುತ್ರಪ್ಪ ಸಂಗನಾಳ, ದೊಡ್ಡಯ್ಯ ಅರವಟಗಿಮಠ, ನಿಂಗಪ್ಪ ಅಧ್ಯಕ್ಷರು ಸದಸ್ಯರು, ನಿವೃತ್ತ ಸೈನಿಕರ ಸಂಘದ ಸದಸ್ಯರು ಇದ್ದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು