ಪ್ರವೇಶ ಪ್ರಕಟಣೆ:
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದಲ್ಲಿ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ದಾನದ ರೂಪದಲ್ಲಿ ನೀಡಲಾಗಿರುವ ಭೂಮಿಯಲ್ಲಿ ಸ್ಥಾಪಿಸಲಾದ ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ, ಬಿಕಾಂ, ಬಿಎಸ್ಸಿ, ಬಿಎ ಪದವಿಗಳಿಗೆ ಪ್ರವೇಶಗಳು ಆರಂಭವಾಗಿವೆ.
ಅದರಲ್ಲೂ ಗದಗ ಜಿಲ್ಲೆಯಲ್ಲಿ ಬಿಸಿಎ ವಿಭಾಗದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿರುವ ಹಾಗೂ ವಿವಿಧ ಟೆಕ್ನಾಲಾಜಿ ಬಗ್ಗೆ ವರ್ಕ್ಶಾಪ್, ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಒದಗಿಸಿ ಹೆಸರು ಮಾಡುತ್ತಿರುವ ಇಲ್ಲಿನ ಬಿಸಿಎ ಪದವಿಗೆ ಈಗಾಗಲೇ ಪ್ರವಶೇಗಳು ಭರದಿಂದ ಸಾಗಿವೆ.
ಸರ್ಕಾರಿ ಕಾಲೇಜು ಎಂದರೆ ತಾತ್ಸರದ ಭಾವನೆ ತೋರುವ ಕಾಲಘಟ್ಟದಲ್ಲಿ, ಜನರು ಬೆನ್ನುತಟ್ಟುವ ಶಿಕ್ಷಣ ನೀಡುತ್ತಿರುವ ಕಾರಣ ಅದೇರೀತಿ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವ ಕಾರಣ ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಾಗುತ್ತಿದೆ.
2025-26ನೇ ಸಾಲಿನಲ್ಲಿ ನರೇಗಲ್ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ವಿವಿಧ ಕಂಪನಿಗಳ ಕ್ಯಾಂಪಸ್ ಸಂದರ್ಶನದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಗದಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲೂ ಕೆಲವು ಬಿಸಿಎ ವಿದ್ಯಾರ್ಥಿಗಳು ಪುಣೆ ಮೂಲದ ಕಾರ್ಪೊರೇಟ್ ಕಂಪನಿಯಲ್ಲಿ ಇಂಜಿನಿಯರಿಂಗ್ ಹುದ್ದೆಗೆ ₹3.75 ಲಕ್ಷ ಪ್ಯಾಕೇಜ್ಗೆ ಆಯ್ಮೆಯಾಗುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ನಮ್ಮ ಕಾಲೇಜಿನಲ್ಲಿ ಎಐ, ಎಂಎಲ್ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಲ್ಯಾಬ್ ಇದೆ. ಡಿಜಿಟಲ್ ಕ್ಲಾಸ್ರೂಮ್ ಇದೆ. ಇವುಗಳನ್ನು ಒಂದು ಸಲ ಕಾಲೇಜಿಗೆ ಬಂದು, ಭೇಟಿ ಮಾಡಿ ಖಾತರಿ ಪಡಿಸಿಕೊಳ್ಳಿರಿ ನಂತರ ಇಷ್ಟವಾದರೆ ನಿಮ್ಮ ಮಕ್ಕಳನ್ನು ನಮ್ಮ ಸರ್ಕಾರಿ ಕಾಲೇಜಿನಲ್ಲಿ ಆಡ್ಮಿಷನ್ ಮಾಡಿಸಿ.
ಸ್ಥಳೀಯವಾಗಿ ಸರ್ಕಾರಿ ಕಾಲೇಜಿನಲ್ಲಿ ಅತೀ ಕಡಿಮೆ ಫೀ ನಲ್ಲಿ ಸಿಗುವ ಗುಣಮಟ್ಟದ ಬಿಸಿಎ ಪದವಿಯನ್ನು ಬಿಟ್ಟು ದೂರದ ಖಾಸಗಿ ಸಂಸ್ಥೆಗಳಿಗೆ ಎಪ್ಪತ್ತು ಸಾವಿರ, ಎಂಭತ್ತು ಸಾವಿರ, ಲಕ್ಷವೆಂದು ಖರ್ಚು ಮಾಡುವ ಬದಲು ಒಂದು ಸಲ ನಮ್ಮ ಸರ್ಕಾರಿ ಕಾಲೇಜಿಗೆ ಬಂದು ನೋಡಿ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಿರಿ.
ನಮ್ಮಲ್ಲಿ ಬಿಸಿಎಗೆ 6 ಜನ ನುರಿತು, ಉತ್ತಮ ಪದವಿ ಪಡೆದಿರುವ ಸಿಬ್ಬಂದಿಗಳು ಇದ್ದಾರೆ. ನಮ್ಮ ಕಾಲೇಜಿನ ಸಿಬ್ಬಂದಿಗಳು M.Tech, BE, MCA, MSc(CS) ಜೊತೆಗೆ NET, SET, PhD qualified ಸಹ ಆಗಿದ್ದಾರೆ. ಸಣ್ಣಪುಟ್ಟ ಕೊರತೆಯ ನಡುವೆಯೂ ಎಲ್ಲಾ ಸಿಬ್ಬಂದಿಗಳು ಈಗಿನ ತಂತ್ರಜ್ಞಾನವನ್ನು ಬಳಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ತಕ್ಕಂತೆ ಬೋಧನೆ ಮಾಡುತ್ತಾರೆ ಅದಕ್ಕಾಗಿ ನಮ್ಮ ಸರ್ಕಾರಿ ಕಾಲೇಜಿನಲ್ಲಿ ಆಡ್ಮಿಷನ್ ಮಾಡಿಸಿ.
ಇಲ್ಲಿನ ನಮ್ಮ ಸರ್ಕಾರಿ ಕಾಲೇಜಿನಲ್ಲಿ ಕೇವಲ 40 (ನಲವತ್ತು) ವಿದ್ಯಾರ್ಥಿಗಳನ್ನು ಮಾತ್ರ ಪ್ರವೇಶ ಪಡೆಯಬಹುದು. ಈಗಾಗಲೇ ಅರ್ಧದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮಾನ್ವಿ, ಕುಷ್ಟಗಿ, ಬಂಡಿ, ಯಲಬುರ್ಗಾ, ಹೊಳೆಆಲೂರು, ಗಜೇಂದ್ರಗಡ, ನರಗುಂದ ನವಲಗುಂದ, ಲಕ್ಷ್ಮೇಶ್ವರ, ಡೋಣಿ, ಗದಗ, ಮುಧೋಳ, ರೋಣ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದ್ದರಿಂದ ಆದಷ್ಟು ಬೇಗ ನಿರ್ಧಾರ ಕೈಗೊಂಡು ಆಡ್ಮಿಷನ್ ಮಾಡಿಸಿ.
ದ್ವಿತೀಯ ಪಿಯುಸಿ ಕಾಮರ್ಸ್, ಸೈನ್ಸ್ ಪಾಸಾದ ಅಥವಾ ಡಿಪ್ಲೊಮಾ ಪಾಸಾದ ವಿದ್ಯಾರ್ಥಿಗಳು ಬಿಸಿಎಗೆ ಪ್ರವೇಶ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನನ್ನ ನಂಬರ್: 7676296140, 7338244533 ಗೆ ಸಂಪರ್ಕ ಮಾಡಿರಿ
ಧನ್ಯವಾದಗಳು
—
ಚಂದ್ರು ಎಂ. ರಾಥೋಡ್
ಮಾಹಿತಿಗಾಗಿ ಸಂಪರ್ಕಿಸಿ: 7676296140