Home ಕರ್ನಾಟಕಮೆಕ್ಯಾನಿಕಲ್ ಸಮಸ್ಯೆಗೆ ನೆಲಕ್ಕುರುಳಿದ ಗಾಳಿ ವಿದ್ಯುತ್ ಉತ್ಪಾದನಾ ಫ್ಯಾನ

ಮೆಕ್ಯಾನಿಕಲ್ ಸಮಸ್ಯೆಗೆ ನೆಲಕ್ಕುರುಳಿದ ಗಾಳಿ ವಿದ್ಯುತ್ ಉತ್ಪಾದನಾ ಫ್ಯಾನ

ತಿಪ್ಪನಾಳ ಗ್ರಾಮದಲ್ಲಿ ಘಟನೆ | ಅದೃಷ್ಟವಶಾತ್  ತಪ್ಪಿದ  ಅನಾಹುತ 

by Editor
0 comments

ಚೈತನ್ಯ ನ್ಯೂಸ್ 24 ಯಲಬುರ್ಗಾ: ಮೇ.17:
ತಾಲೂಕಿನ ಗಾಣಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪನಾಳ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಅಳವಡಿಸಲಾಗಿದ್ದ ಗಾಳಿ ವಿದ್ಯುತ್ ಉತ್ಪಾದನಾ ಫ್ಯಾನ (ವಿಂಡ್ ಫ್ಯಾನ) ಶುಕ್ರವಾರ ತಡರಾತ್ರಿ ಏಕಾಏಕಿ ನೆಲಕ್ಕುರುಳಿದ ಘಟನೆ ನಡೆದಿದೆ. ಘಟನೆಯಿಂದ ಕೆಲಕಾಲ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.


ತಾಳಕೇರಿ ರಸ್ತೆಯಲ್ಲಿರುವ ಕಾಮಣ್ಣ ಹೊಸಮನಿ ಅವರಿಗೆ ಸೇರಿದ ಜಮೀನಿನಲ್ಲಿ ಈ ಫ್ಯಾನ ಅಳವಡಿಸಲಾಗಿತ್ತು. ಸುಜಾಲ-ಸೆರಂಟಿಕಾ ಕಂಪನಿಗೆ ಸೇರಿದ ಈ ಫ್ಯಾನ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ತಾಂತ್ರಿಕ ದೋಷ ಮತ್ತು ಓವರ್‌ಲೋಡ್‌ನ ಪರಿಣಾಮವಾಗಿ ಫ್ಯಾನ ನೆಲಕ್ಕುರುಳಿರುವ ಸಾಧ್ಯತೆ ವ್ಯಕ್ತವಾಗಿದೆ.


ತಡರಾತ್ರಿ ದೊಡ್ಡ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬೆಳಗಿನ ಜಾವ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಯಲಬುರ್ಗಾ ಪಿಎಸ್ಐ ಅವರು ಸ್ಥಳ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.


ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎನ್ನಲಾಗಿದೆ. ಜಮೀನಿನ ಭಾಗದಲ್ಲಿ ಫ್ಯಾನ ಉರುಳಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.


ಘಟನೆಯ ನಿಖರ ಕಾರಣ ಕುರಿತು ತಾಂತ್ರಿಕ ತಜ್ಞರಿಂದ ಪರಿಶೀಲನೆ ನಡೆಯುತ್ತಿದ್ದು, ಕಂಪನಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾದ ಇಂತಹ ಗಾಳಿ ವಿದ್ಯುತ್ ಘಟಕಗಳ ನಿರ್ವಹಣೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು