ಚೈತನ್ಯ ನ್ಯೂಸ್ 24 ರೋಣ ಮೇ.22:
ವಿಶೇಷ ವರದಿ: ಎಸ್ ವಿ ಸಂಕನಗೌಡ್ರ
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವಂತೆ ಗ್ರಾಮೀಣ ಜೀವನದ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿರುವುದು ಕಂಡು ಬರುತ್ತಿದೆ. ವಿದ್ಯಾರ್ಥಿಗಳು ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೇ, ತಮ್ಮ ಮಣ್ಣಿನ ಸಂಸ್ಕೃತಿ, ಪರಂಪರೆ ಮತ್ತು ಗ್ರಾಮೀಣ ಬದುಕಿನ ಸೊಗಡನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಾಚಾರ್ಯ ಸಿಬಿ ಪೊಲೀಸ್ ಪಾಟೀಲ್ ಮಾತನಾಡಿದರು

ಈ ಕಾರ್ಯಕ್ರಮವು ರೋಣ ನಗರದ ಕೆಎಸ್ಎಸ್ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ 18.05.2026 ರಿಂದ 21 5 2026 ರ ವರೆಗೆ ಸಾಂಪ್ರದಾಯಿಕ ವಾರ ಹಾಗೂ ಗ್ರಾಮೀಣ ಸೊಗಡು ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಗ್ರಾಮೀಣ ವಾತಾವರಣದಲ್ಲಿ ಬೆಳೆದ ಮಕ್ಕಳು ಪ್ರಕೃತಿಗೆ ಹತ್ತಿರವಾಗಿರುತ್ತಾರೆ. ಹಕ್ಕಿಗಳ ಕಲರವ, ಹೊಲಗದ್ದೆಗಳ ಸೌಂದರ್ಯ, ರೈತರ ಪರಿಶ್ರಮ, ಹಬ್ಬ-ಹರಿದಿನಗಳ ಆಚರಣೆ ಇವೆಲ್ಲವು ಜೀವನದ ನೈಜ ಮೌಲ್ಯಗಳನ್ನು ಕಲಿಸುತ್ತವೆ. ಇವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿನಯ, ಶ್ರಮದ ಮಹತ್ವ ಮತ್ತು ಸಹಜ ಬದುಕಿನ ಅರಿವು ಮೂಡಿಸುತ್ತವೆ ಎಂದು ಮಾತನಾಡಿದರು

ಈ ಸಮಯದಲ್ಲಿ ಗ್ರಾಮೀಣ ಸೊಗುಡನ್ನು ಬೆಳೆಸಲು ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಕರ್ಷಕ ಉಡುಪುಗಳನ್ನು ಧರಿಸಿ ಚಕ್ಕಡಿ ಹಾಗೂ ಎತ್ತುಗಳೊಂದಿಗೆ ಮೆರವಣಿಗೆ ಮಾಡಲಾಯಿತು
ಈ ಸಮಯದಲ್ಲಿ ವೇದಿಕೆ ಮೇಲೆ ಸ್ಥಾನಿಕ ಮುಖ್ಯಸ್ಥರಾದ ಐಬಿ ದಂಡಿನ, ಶ್ರೀಮತಿ ಎ ಎಚ್ ನಾಯ್ಕರ್, ಉಪನ್ಯಾಸಕರಾದ ಎಂಎಸ್ ದಳವಾಯಿ, ಎಸ್ ವಿ ಸಂಕನಗೌಡ್ರ, ಎಂ ವೈ ಕಿತ್ಲಿ, ಡಾ ಎಸ್ಆರ್ ನದಾಫ್, ಯುಬಿ ಬಸನಗೌಡ್ರ, ಎಂ ಹೆಚ್ ನಾಯ್ಕರ್, ಕೆಕೆ ಕಲ್ಲಪ್ಪನವರ, ಆರ್ ಎಸ್ ಗೌಡರ್, ಬಿಎಸ್ ಜಂಗಣ್ಣವರ್, ಜಂತ್ಲಿ ಹಾಗೂ ಉಪನ್ಯಾಸಕಿಯರಾದ ಜ್ಯೋತಿ ಮಲ್ಲಾಪುರ್, ಲಲಿತಾ ನಂದೆಪ್ ಗೌಡ್ರು, ವಿಜಯಲಕ್ಷ್ಮಿ ಮೇಡಂ, ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

ಬಾಕ್ಸ್ ……..
ಗ್ರಾಮೀಣ ಸೊಗಡು ಹಾಗೂ ಸಾಂಪ್ರದಾಯಿಕ ವಾರ ಕಾರ್ಯಕ್ರಮ ತುಂಬಾ ಅತ್ಯುತ್ತಮವಾಗಿತ್ತು ಇದುವರೆಗೂ ನನ್ನ ವಿದ್ಯಾರ್ಥಿ ಜೀವನದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ನಾನು ನೋಡೇ ಇರಲಿಲ್ಲ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಪ್ರಾಚಾರ್ಯರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಅಭಿನಂದನೆಗಳು
ವಿದ್ಯಾರ್ಥಿ ಪ್ರತಿನಿಧಿ ವಿಶ್ವನಾಥ್ ಕುರಿ
ಬಾಕ್ಸ್ ………..
ಇಂತಹ ಕಾರ್ಯಕ್ರಮಗಳಿಂದ ನಾವು ವಿದ್ಯಾರ್ಥಿಗಳಲ್ಲಿ ಸಾಂಪ್ರದಾಯಿಕತೆಯ ಮಹತ್ವ ಹಾಗೂ ನಮ್ಮ ದೇಶಿಯ ಉಡುಪುಗಳ ಕೌಶಲ್ಯಗಳನ್ನು ಹಾಗೂ ಅವುಗಳ ಮಹತ್ವತೆಯನ್ನು ತಿಳಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಸತತ ನಾಲ್ಕು ದಿನಗಳ ಕಾಲ ವಿದ್ಯಾರ್ಥಿಗಳು ಉತ್ತಮವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಸಿಬಿ ಪೊಲೀಸ್ ಪಾಟೀಲ್ ಪ್ರಾಚಾರ್ಯರು, ಕೆಎಸ್ಎಸ್ ಕಾಲೇಜ್ ರೋಣ

ಬಾಕ್ಸ್ ………
ಇಂದು ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ನಮ್ಮ ಮಹಾವಿದ್ಯಾಲಯಕ್ಕೆ ಅತ್ಯಂತ ಸಂತೋಷವನ್ನು ತಂದಿದೆ ವಿದ್ಯಾರ್ಥಿಗಳ ಈ ನಡೆಯನ್ನು ನೋಡಿದಾಗ ಅರ್ಥವಾಗುತ್ತದೆ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಆಸಕ್ತಿದಾಯಕ ಎಂದು ತಿಳಿದು ಬರುತ್ತದೆ ಪ್ರಸ್ತುತ ದಿನಮಾನದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯವಶ್ಯಕವಾಗಿವೆ
ಯು ಬಿ ಬಸನಗೌಡ್ರ, ಉಪನ್ಯಾಸಕರು ಕೆಎಸ್ಎಸ್ ಕಾಲೇಜ್ ರೋಣ