Home ಕರ್ನಾಟಕಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ : ಶ್ರೀ ರಂಭಾಪುರಿ ಜಗದ್ಗುರುಗಳು

ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ : ಶ್ರೀ ರಂಭಾಪುರಿ ಜಗದ್ಗುರುಗಳು

by Editor
0 comments
ಚೈತನ್ಯ ನ್ಯೂಸ್ 24 ಗಜೇಂದ್ರಗಡ/ರೋಣ-ಮೇ-೧೦.
  ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬದುಕು ಬಂಗಾರ. ಮರೆತು ಮಲಗಿದರೆ ಬದುಕು ಬಂಧನಕಾರಿ. ಮಹಾತ್ಮರ ಸಂದೇಶಗಳು ಎಲ್ಲರಿಗೂ ದಾರಿದೀಪ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
  ಅವರು ಭಾನುವಾರ ಸೂಡಿ ಜುಕ್ತಿ ಹಿರೇಮಠದ ನೂತನ ರಥದ ಲೋಕಾರ್ಪಣೆ ಮತ್ತು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಬದುಕಿಗೆ ಸಂಪತ್ತು ಅಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ರಾಷ್ಟçಪ್ರಜ್ಞೆ ಅಗತ್ಯ. ಮಾನವನಿಗೆ ಯೋಗ್ಯ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಜ್ಞಾನ ಕ್ರಿಯಾತ್ಮಕವಾದ ಶಿವಾದ್ವೆöÊತ ಸಿದ್ಧಾಂತವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಅವರು ಸಾಮಾಜಿಕ ಸಂವೇದನಾಶೀಲ ಮೌಲ್ಯಗಳನ್ನು ಬೆಳೆಸಿದ್ದನ್ನು ಮರೆಯಲಾಗದು. ಇತಿಹಾಸ ನಿನ್ನೆ ಸುಖ ಇತ್ತೆಂದು ಹೇಳುತ್ತದೆ. ವಿಜ್ಞಾನ ನಾಳೆ ಸುಖ ಇದೆಯೆಂದು ಹೇಳುತ್ತದೆ. ಆದರೆ ಧರ್ಮ ಸತ್ಯ ಮತ್ತು ಪ್ರಾಮಾಣಿಕವಾಗಿ ಬದುಕಿದರೆ ಇದೇ ಜನ್ಮದಲ್ಲಿ ಸುಖ ಇದೆಯೆಂದು ಹೇಳುತ್ತದೆ. ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ನಿರಂತರ ಶ್ರಮ ಸಾಧನೆಯಿಂದ ಅದ್ಭುತ ಕಾರ್ಯಗಳನ್ನು ಮಾಡಿದ್ದಾರೆ. ನೂತನ ರಥ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳ ಶ್ರಮಪಟ್ಟಿದ್ದನ್ನು ಕಾಣುತ್ತೇವೆ. ಶ್ರೀಗಳವರ ನಿರಂತರ ಧರ್ಮ ಕಾರ್ಯ ಕಂಡು ಅತ್ಯಂತ ಸಂತೋಷವಾಗಿದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀ ಪೀಠದಿಂದ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮಠ ಮಂದಿರಗಳು ನಮ್ಮ ಸಂಸ್ಕೃತಿಯ ಸಂರಕ್ಷಣೆಯ ಕೇಂದ್ರಗಳಾಗಿವೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ಅಧರ್ಮದ ಕವಚ ಹೊತ್ತ ಮನುಷ್ಯನ ವಿಚಾರಗಳು ಬಹಳ ಕಾಲ ಬಾಳಲಾರವು. ಸೂಡಿ ಶ್ರೀಗಳ ಶ್ರಮ ಭಕ್ತರ ಸಹಕಾರ ಇಂದಿನ ಎಲ್ಲ ಸಂಭ್ರಮಕ್ಕೆ ಕಾರಣವಾಗಿದೆ ಎಂದರು. ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ||ಚನ್ನಸಿದ್ಧರಾಮ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಅತಿ ಶತ್ರುಗಳನ್ನು ನಿಯಂತ್ರಿಸಬಹುದು. ಆದರೆ ಮತಿ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟ. ನದಿಯ ನೀರು ಎಷ್ಟು ತುಂಬಿದರೂ ಅದು ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಅದು ಖಾಲಿಯಾಗುವುದಿಲ್ಲ. ವೀರಶೈವ ಧರ್ಮ ವಿಶ್ವ ಬಂಧುತ್ವದ ಮೂಲಕ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸುತ್ತ ಬಂದಿದೆ. ಸೂಡಿಯಲ್ಲಿ ಜರುಗಿದ ಈ ಸಮಾರಂಭ ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು. ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ಡಾ|| ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಧರ್ಮದ ದಾರಿ ಮೋಕ್ಷಕ್ಕೆ ಹೆದ್ದಾರಿ. ಮೋಹದ ದಾರಿ ತೊರೆದರೆ ಮೋಕ್ಷದ ದಾರಿ ದೊರಕುತ್ತದೆ. ಸಂಪತ್ತು ಬೆಳೆದಂತೆಲ್ಲಾ ಮಾನವೀಯ ಸಂಬAಧಗಳು ಸಡಿಲಗೊಳ್ಳಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಬೋಧಿಸಲ್ಪಟ್ಟ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಭವಿ ಭಕ್ತನಾಗುವ, ಅಂಗ ಲಿಂಗವಾಗುವ, ದೇಹ ದೇವಾಲಯವಾಗುವ ವಿಶಿಷ್ಠ ಸಂಸ್ಕೃತಿ ಹೊಂದಿದೆ. ಸೂಡಿ ಶ್ರೀಗಳವರ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳು ಭಕ್ತ ಸಂಕುಲಕ್ಕೆ ಹರುಷ ಉಂಟು ಮಾಡಿವೆ ಎಂದರು. ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ನೂತನ ಜಗದ್ಗುರು ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ನಾಗರೀಕತೆ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ನಾಶಗೊಳ್ಳಬಾರದು. ರಾಷ್ಟç ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು. ಸೂಡಿಯ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ವಿದ್ಯಾ ವಿನಯ ಸಂಪನ್ನರಾಗಿ ವೀರಶೈವ ಧರ್ಮ ಸಂಸ್ಕೃತಿ ಸಂವರ್ಧಿಸುವ ಕಾರ್ಯದ ಮೂಲಕ ಎಲ್ಲರ ಮೆಚ್ಚಗೆಗೆ ಪಾತ್ರರಾಗಿದ್ದಾರೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ನಿವೃತ್ತ ಪೋಲೀಸ ಮಹಾ ನಿರ್ದೇಶಕ ಶಂಕರ ಬಿದರಿ ಅವರು ಮಾತನಾಡಿ ಭೌತಿಕ ಜೀವನ ಸಮೃದ್ಧಗೊಂಡAತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಸಂಸ್ಕಾರದಿAದ ಬದುಕು ಉಜ್ವಲಗೊಳ್ಳುತ್ತದೆ. ಗುರಿಯಿಲ್ಲದ ಗುರಿ ಸಾಧಿಸದ ಜೀವನ ನಿರರ್ಥಕವಾಗುತ್ತದೆ. ಮನುಷ್ಯನ ದೈಹಿಕ ವಿಕಾಸಕ್ಕೆ ನೀರು ಅನ್ನ ಮುಖ್ಯವಾಗಿರುವಂತೆ ಬದುಕನ್ನು ವಿಕಾಸಗೊಳಿಸುವ ಶಕ್ತಿ ಧರ್ಮಕ್ಕಿದೆ. ಸೂಡಿಯಲ್ಲಿ ಹಮ್ಮಿಕೊಂಡ ಎಲ್ಲಾ ಕಾರ್ಯಗಳು ಅತ್ಯಂತ ವೈಭವದಿಂದ ಜರುಗುತ್ತಿವೆ. ಇದಕ್ಕೆಲ್ಲ ಸೂಡಿ ಕೊಟ್ಟೂರು ಬಸವೇಶ್ವರರ ಶ್ರಮ ಮತ್ತು ಭಕ್ತರ ಸಹಕಾರ ದೊಡ್ಡದೆಂದು ಹರುಷ ವ್ಯಕ್ತಪಡಿಸಿದರು. ಅವರು ನೂತನ ರಥಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದರು. ದಾನಿಗಳ ನಾಮಫಲಕ ಅನಾವರಣಗೊಳಿಸಿದ ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಭಾರತೀಯ ಉತ್ಕೃಷ್ಟ ಸಾಹಿತ್ಯ ಸಂಪತ್ತನ್ನು ಮರೆಯಲಾಗದು. ಆಚಾರ್ಯರ ಮತ್ತು ಋಷಿ ಮುನಿಗಳ ಆಧ್ಯಾತ್ಮಿಕ ಚಿಂತನಗಳು ಮನುಷ್ಯ ಜೀವನದ ಉಜ್ವಲತೆಗೆ ಕಾರಣವಾಗಿವೆ. ಸೂಡಿ ಪಟ್ಟಾಧ್ಯಕ್ಷರು ಸಾರ್ಥಕ ಸಮಾರಂಭ ಹಮ್ಮಿಕೊಂಡಿರುವುದು ಎಲ್ಲ ಭಕ್ತರೂ ಸಂತಸಗೊAಡಿದ್ದಾರೆ ಎಂದರು. ಗ್ರಂಥ ಬಿಡುಗಡೆ ಮಾಡಿದ ಅ.ಭಾ.ವೀ.ಶಿ.ಸಂಸ್ಥೆ ಗೌರವಾಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಸಕಲರ ಬಾಳಿನಲ್ಲೂ ಹೊಸ ಶಕ್ತಿ ಮೂಡಿಸಿದೆ. ದಾನಿಗಳ ದಾನ ಸತ್ಪಾತ್ರಕ್ಕೆ ತಲುಪಿರುವುದೆಂಬ ಆತ್ಮ ಸಂತೃಪ್ತಿ ತಮ್ಮದಾಗಿದೆ ಎಂದರು. ನೇತೃತ್ವ ವಹಿಸಿದ ಸೂಡಿ ಜುಕ್ತಿಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸೂಡಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿAದ ಜರುಗಿದ್ದು ಎಲ್ಲ ಭಕ್ತ ಮಂಡಳಿಗೆ ಹರುಷವಾಗಿದೆ. ೫೦ ವರುಷಗಳಿಂದ ನಡೆದುಕೊಂಡು ಬರುತ್ತಿರುವ ಜಾತ್ರೆಯಲ್ಲಿ ಈ ವರುಷ ಭವ್ಯ ಸುಂದರ ರಥ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳುತ್ತಿರುವುದು ಎಲ್ಲಿಲ್ಲದ ಹರುಷ ತಂದಿದೆ. ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಆಶೀರ್ವಾದ ಅನವರತ ಕಾಲ ಇರಲೆಂದು ಬಯಸಿದರು. ಬನ್ನಿಕೊಪ್ಪದ ಡಾ|| ಸುಜ್ಞಾನದೇವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
  ಡಾ|| ಸಂಗಮೇಶ ಸವದತ್ತಿಮಠ ಇವರಿಗೆ “ಭಾಷಾ ಭಾಸ್ಕರ” ಪ್ರಶಸ್ತಿಯಿತ್ತು ಜಗದ್ಗುರುಗಳು ಶುಭ ಹಾರೈಸಿದರು. ನೂತನ ರಥ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಮತ್ತು ಗಣ್ಯರಿಗೆ ಜಗದ್ಗುರುಗಳೈವರು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಎಸಳೂರು ಚನ್ನಸಿದ್ಧೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ರೋಣದ ಮಿಥುನ್ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.
ಗದುಗಿನ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಎಂ.ಸAಗಮೇಶ ಉತ್ತಂಗಿ ಇವರಿಂದ ಭಕ್ತಿಗೀತೆ ಜರುಗಿತು. ಲಲಿತಾ ವಿಜಯಕುಮಾರ ಬಾಳಿಹಳ್ಳಿಮಠ ಮತ್ತು ಶಾರದಾ ಶಿವಾನಂದಯ್ಯ ನಿರೂಪಿಸಿದರು. ಸೂಡಿ ಶಿವಬಸವ ಬೆಲ್ಲದ ವಂದನಾರ್ಪಣೆ ಸಲ್ಲಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ, ಶ್ರೀ ಕಾಶೀ ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿAದ ಜರುಗಿತು. ಸಹಸ್ರಾರು ಭಕ್ತರು ಜಗದ್ಗುರುಗಳ ಆಶೀರ್ವಾದ ಪಡೆದರು. ಸಮಾರಂಭದ ನಂತರ ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು