ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11:
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ದೇವದ್ರವ್ಯವಾಗಿದೆ. ಮಕ್ಕಳ ಮನೋವಿಕಾಸದ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಅವರಿಗೆ ಸೂಕ್ತ ವಾತಾವರಣ ತಲ್ಪಿಸುವುದು ರ‍್ಕಾರದ ಹೊಣೆಯಾಗಿದೆ’ ಎಂದು ಮಕ್ಕಳ ಸಾಹಿತಿ ತಯಬಲಿ ಹೊಂಬಳ ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಎಂ ಎಸ್ ಹುಲ್ಲೂರ್ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಾರಂಭವಾದ ಎರಡು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಕತೆಗಳು ಮಕ್ಕಳಿಗೆ ಮೌಲ್ಯದ ಕತೆಗಳನ್ನು ಹೇಳುವ ಮತ್ತು ಕೇಳುವ ಅವಕಾಶಗಳಿಂದ ಮಕ್ಕಳು ವಂಚತರಾಗುತ್ತಿರುವ ವಿಷಾದದ ಸಂಗತಿ’ ಎಂದರು
‘ಪಠ್ಯಪುಸ್ತಕದ ಓದಿನ ಜತೆಗೆ ಬೌದ್ಧಿಕ ಮತ್ತು ಭಾವನಾತ್ಮಕ ವಿಕಾಸಕ್ಕೆ ಒತ್ತು ಕೊಡುವ ಹಿನ್ನೆಲೆಯಲ್ಲಿ ಶಾಲೆ ಮತ್ತು ಮನೆಯ ಪರಿಸರ ನಿರ್ಮಾಣವಾಗಬೇಕು. ತಮ್ಮ ಜೀವಾನುಭವಗಳನ್ನು ಬರೆಯುವಂತೆ ಸಮುದಾಯ ಪ್ರೇರೇಪಿಸಬೇಕು ಎಂದು ತಿಳಿಸಿದರು
‘ಗುಬ್ಬಚ್ಚಿಗೂಡು’ ಮಕ್ಕಳ ಪತ್ರಿಕೆಯ ಪ್ರಧಾನ ಸಂಪಾದಕ ಶಂಕರ ಹಲಗತ್ತಿ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ‘ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ನೆರವಾಗುವಂತಹ ಅವಕಾಶ ಗಳನ್ನು ಹಿರಿಯರು ಕಲ್ಪಿಸಬೇಕು. ಮಕ್ಕಳ ಮೇಲಿನ ಶೋಷಣೆ ತಡೆಯುವ ದಿಸೆಯಲ್ಲಿ ಜಾಗೃತಿ ಮೂಡಿಸು ವುದು ಇಂದಿನ ಜರೂರು’ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಆರ್.ಎಸ್.ಬುರಡಿ ಮಾತನಾಡಿ, ‘ಮಕ್ಕಳ ಬಾಲ್ಕ ಸಂತಸ ಮಯವಾಗಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಮಹತ್ವದ್ದಾ ಗಿದೆ. ಮಕ್ಕಳು ಮಹಾಮಾನವರಾಗಿ ಬೆಳೆಯುವ ನಿಟ್ಟಿನಲ್ಲಿ ಒಟ್ಟು ವ್ಯವಸ್ಥೆ ಕರ‍್ಯ ನರ‍್ವಹಿಸಬೇಕು’ ಎಂದು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷರ ಬದುಕು ಬರಹ ಮತ್ತು ಸಾಧನೆಯನ್ನು ಡಾ. ನಿಂಗು ಸೊಲಗಿ ವಿವರಿಸಿ, ‘ಮಕ್ಕಳ ಸಾಹಿತ್ಯದಲ್ಲಿ ಒಲವನ್ನು ಬೆಳೆಸಿಕೊಂಡು ೫೪ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳ ಲೋಕವನ್ನು ಸುಂದರಗೊಳಿ ಸಿದ್ದಾರೆ, ಕತೆ, ಕಾವ್ಯ, ಕಾದಂಬರಿ ಪ್ರಕಾರ ಗಳಲ್ಲಿ ಮಾಡಿದ ಸೇವೆ ಅನುಪಮ ವಾದುದು ಎಂದು ಹೇಳಿದರು.
ಬರಹ ಮತ್ತು ಸಾಧನೆಯನ್ನು ಡಾ. ನಿಂಗು ಸೊಲಗಿ ವಿವರಿಸಿ, ‘ಮಕ್ಕಳ ಸಾಹಿತ್ಯದಲ್ಲಿ ಒಲವನ್ನು ಬೆಳೆಸಿಕೊಂಡು ೫೪ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳ ಲೋಕವನ್ನು ಸುಂದರಗೊಳಿ ಸಿದ್ದಾರೆ, ಕತೆ, ಕಾವ್ಯ, ಕಾದಂಬರಿ ಪ್ರಕಾರ ಗಳಲ್ಲಿ ಮಾಡಿದ ಸೇವೆ ಅನುಪಮ ವಾದದ್ದು ಎಂದು ಹೇಳಿದರು
ಡಯಟ್ ಪ್ರಾಚರ‍್ಯ ಜಿ.ಎಂ. ಮುಂದಿನಮನಿ, ವಿಜಯ ಕಲಾ ಸಂಸ್ಥೆಯ ಅಶೋಕ ಅಕ್ಕಿ, ಪ್ರಾಚರ‍್ಯ ಸಿ.ವಿ, ಬಡಿಗೇರೆ, ಸಾಹಿತಿ ಚಂದ್ರಶೇಖರ ವಸ್ತ್ರದ ಇದ್ದರು.
ರಕ್ಷಿತಾ ಗಿಡ್ನಂದಿ ನಿರೂಪಿಸಿದರು, ಬಸವರಾಜ ನೆಲ್ಜೆರಿ ಸ್ವಾಗತಿಸಿದರು, ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು ವೈಷ್ಣವಿ ರಾಠೋಡ ಅವರಿಂದ ನೃತ್ಯ, ಸರಸ್ವತಿ ಸಾಧನ ಕೇಂದ್ರದ ಮಕ್ಕಳಿಂದ ಗೀತಗಾಯನ ಜರುಗಿತು. ಗೀತಗಾಯನ ಜರುಗಿತು ಕಾರ್ಯಕ್ರಮಕ್ಕೂ ಮುನ್ನ ಸಾಯಿಬಾಬಾ ಮಂದಿರದಿAದ ವಿಜಯ ಕಲಾ ಮಹಾವಿದ್ಯಾಲಯದ ವರೆಗೆ ಭುವನೇಶ್ವರಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.