Home ಕರ್ನಾಟಕಗುರು ಬಲದಿಂದ ಬಾಳು ಸುಭದ್ರ : ಶ್ರೀ ರಂಭಾಪುರಿ ಜಗದ್ಗುರುಗಳು

ಗುರು ಬಲದಿಂದ ಬಾಳು ಸುಭದ್ರ : ಶ್ರೀ ರಂಭಾಪುರಿ ಜಗದ್ಗುರುಗಳು

by Editor
0 comments

ಚೈತನ್ಯ ನ್ಯೂಸ್ 24 ರಾಣೆಬೆನ್ನೂರು-ಮೇ-12.
ಶಿವನ ಸಾಕಾರ ರೂಪ ಶ್ರೀ ಗುರು. ಗುರು ದರ್ಶನವಾದರೆ ಶಿವದರ್ಶನವಾಯಿತೆಂಬ ನಂಬಿಕೆಯಿದೆ. ಜಗ ಬೆಳಗಲು
ಸೂರ್ಯ ಬೇಕು. ಬಾಳು ಬೆಳಗಲು ಗುರು ಬೇಕು. ಗುರುಬಲದಿಂದ ಮನುಷ್ಯನ ಬಾಳು ಸುಭದ್ರಗೊಳ್ಳುವದೆಂದು
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು..
ಅವರು ಸೋಮವಾರ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರ
ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಬ್ರಹ್ಮ ಸೃಷ್ಟಿಮಾಡಬಲ್ಲ. ವಿಷ್ಣು ಸಂರಕ್ಷಣೆ ಮಾಡಬಲ್ಲ. ಮಹೇಶ್ವರ ದುಷ್ಟ ಶಕ್ತಿ ನಾಶ ಮಾಡಬಲ್ಲ. ಈ ಮೂರು
ಗುಣಗಳು ಶ್ರೀ ಗುರುವಿನಲ್ಲಿ ಅಡಕವಾಗಿವೆ. ಶ್ರೀ ಗುರು ಮನಸ್ಸು ಮಾಡಿದರೆ ಹೊಸದನ್ನು ನಿರ್ಮಿಸಬಲ್ಲ ಮತ್ತು
ಸಂರಕ್ಷಿಸಬಲ್ಲ. ಗುರುವಿನ ಕೋಪ ತಾಪಕ್ಕೆ ಬಲಿಯಾದರೆ ನಾಶ ನಿಶ್ಚಿತ. ಗುರು ಕಾರುಣ್ಯ ಸಂಪ್ರಾಪ್ತಿಗಾಗಿ ಎಲ್ಲರೂ
ಹಾತೊರೆಯುತ್ತಾರೆ. ಗುರು ನರನೆಂದವಗೆ, ಲಿಂಗ ಶಿಲೆ ಎಂದವನಿಗೆ, ಕರುಣ ಪ್ರಸಾದ ಎಂಜಲು ಎನ್ನುವವರಿಗೆ ನಾಯಕ
ನರಕ ತಪ್ಪದೆಂದು ಸರ್ವಜ್ಞ ಕವಿ ಎಲ್ಲರನ್ನು ಎಚ್ಚರಿಸಿದ್ದಾನೆ. ಅರೇಮಲ್ಲಾಪುರ ಗ್ರಾಮ ಚಿಕ್ಕದಾದರೂ ಇಲ್ಲಿರುವ ಜನರ ಭಕ್ತಿ
ಶ್ರದ್ಧೆ ಅಪಾರ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರ ಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ
ಅರೇಮಲ್ಲಾಪುರ ಗ್ರಾಮದಲ್ಲಿ ನೆಲೆಗೊಂಡಿರುವು ತಮ್ಮೆಲ್ಲರ ಸೌಭಾಗ್ಯವೆಂದು ಹರುಷ ವ್ಯಕ್ತಪಡಿಸಿದರು.


ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಕಾಲ ಕಾಲಕ್ಕೆ ಉತ್ತಮ
ಮಳೆಯಾಗಲಿ. ಉತ್ತಮ ಬೆಳೆ ಬೆಲೆ ಬಂದು ರೈತರು ಸುಖವಾಗಿ ಬಾಳಲಿ. ದೇಶ ಕಾಯುವಯೋಧ ಅನ್ನ ನೀಡುವ ರೈತ
ಇವರನ್ನುಯಾರೂ ಮಯಾಬಾರದು. ಅರೇಮಲ್ಲಾಪುರ ಸದ್ಭಕ್ತರ ಭಕ್ತಿ ಅತ್ಯಂತ ಶ್ರೇಷ್ಠವಾದದ್ದು. ಸರ್ವರಿಗೂ ಭಗವಂತ
ಸುಖ ಶಾಂತಿ ಅನುಗ್ರಹಿಸಲೆಂದು ಶುಭ ಹಾರೈಸಿದರು. ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ||ಚನ್ನಸಿದ್ಧರಾಮ ಪಂಡಿತಾರಾಧ್ಯ
ಜಗದ್ಗುರುಗಳು ಆಶೀರ್ವಚನ ನೀಡಿ ಬೆಳಕು ನೀಡುವ ಸೂರ್ಯ ಸಿರಿವಂತರ ಮತ್ತು ಬಡವರ ಮನೆ ಮೇಲೆ
ಸಮಾನವಾದ ಬೆಳಕು ಬೀರುವ ತರ ಶ್ರೀ ಗುರುವು ಸರ್ವ ಜಾತಿ ಜನಾಂಗದವರನ್ನು ಸಮಾನ ಮನೋಭಾವನೆಯಿಂದ
ಕAಡು ಆಧ್ಯಾತ್ಮದ ಅರಿವು ಉಂಟು ಮಾಡುತ್ತಾನೆ. ಜಾತಿಗಿಂತ ನೀತಿ ಶ್ರೇಷ್ಠವೆಂದು ಭಾವಿಸಿ ಬಾಳಿದರೆ ಬದುಕಿನಲ್ಲಿ ಉನ್ನತಿ
ಸುಲಭ ಸಾಧ್ಯವಾಗುವುದು. ಅರೇಮಲ್ಲಾಪುರ ಸಕಲ ಸದ್ಭಕ್ತರು ಗುರು ಪೀಠಗಳಲ್ಲಿ ಅಪಾರ ಅಭಿಮಾನ ಶ್ರದ್ಧೆ
ಯಿಂದಿರುವುದು ತಮಗೆ ತೃಪ್ತಿ ತಂದಿದೆ ಎಂದರು. ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ಡಾ|| ಚಂದ್ರಶೇಖರ ಜಗದ್ಗುರುಗಳು
ತಮ್ಮ ಆಶೀರ್ವಚನದಲ್ಲಿ ವೀರಶೈವ ಧರ್ಮ ವಿಶಾಲವಾದ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಿದೆ. ಜಾತಿಗಿಂತ ನೀತಿ
ದೊಡ್ಡದೆಂದು ಗೌರವಿಸಿದ್ದಾರೆ. ವೀರಶೈವ ಧರ್ಮದ ಮೂಲ ಪೀಠಾಚಾರ್ಯರು ಪಂಚ ಸೂತ್ರಗಳನ್ನು ಬೋಧಿಸಿ
ಉದ್ಧರಿಸಿದ್ದಾರೆ. ಪಡ್ವಿಡಿ, ವೃಷ್ಠಿ, ಲಂಬನ, ಮುಕ್ತಾಗುಚ್ಛ ಮತ್ತು ಪಂಚವರ್ಣ ಈ ಸೂತ್ರಗಳು ವೀರಶೈವ ಧರ್ಮ
ಬಾಂಧವರಿಗೆ ಅನ್ವಯಿಸುತ್ತವೆ. ಪ್ರಪಂಚ ಮತ್ತು ಪಾರಮಾರ್ಥಿಕ ಅರಿತು ಬಾಳುವುದೇ ವೀರಶೈವ ಧರ್ಮದ ಗುರಿಂದ್ದಾಗಿದೆ.
ಜೀವನ ವಿಕಾಸಕ್ಕೆ ಪಂಚಸೂತ್ರಗಳ ಅರಿವು ಎಲರಲ್ಲಿ ಜಾಗೃತಗೊಳ್ಳಬೇಕಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ನೂತನ ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರುಗಳು ಆಶೀರ್ವಚನ ನೀಡಿ ಮಾನವ ಜೀವನ ಮೌಲ್ಯಗಳು
ಯಾವಾಗಲೂ ಶಾಶ್ವತ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಜೀವನ ಮೌಲ್ಯಗಳು ಕುಸಿಯುತ್ತಿವೆ. ಭೌತಿಕ
ಸಂಪನ್ಮೂಲಕ್ಕಿ0ತ ಆಧ್ಯಾತ್ಮ ಆದರ್ಶಗಳ ಪರಿಪಾಲನೆ ಅಗತ್ಯವಾಗಿದೆ. ಅರೇಮಲ್ಲಾಪುರ ಗ್ರಾಮದ ಭಕ್ತರ ಭಕ್ತಿ
ಶ್ರೇಷ್ಠವಾದುದೆಂದರು.

ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಸಮಾರಂಭವನ್ನು ಉದ್ಘಾಟಿಸಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ
ಮಹೋತ್ಸವ ಗ್ರಾಮದಲ್ಲಿ ನಡೆದದ್ದು ಇಲ್ಲಿಯ ಜನರ ಸೌಭಾಗ್ಯ. ಪೂಜ್ಯರ ಆಶೀರ್ವಾದದಿಂದ ಈ ಭಾಗದ ಜನರ ಬದುಕು
ಬಲಗೊಳ್ಳಲಿ ಎಂದರು. ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಎಚ್.ಎಸ್.ಶಿವಶಂಕರ್, ವಿರೂಪಾಕ್ಷಪ್ಪ ಬಳ್ಳಾರಿ,
ಹಿರಿಯ ನ್ಯಾಯವಾದಿ ಪಿ.ಆರ್.ಕುಪ್ಪೇಲೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನೇತೃತ್ವ ವಹಿಸಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭೌತಿಕ ಸಿರಿ
ಸಂಪತ್ತು ನಮ್ಮೊಂದಿಗೆ ಬರಲಾರದು. ಆಧ್ಯಾತ್ಮದ ಜ್ಞಾನ ಸಂಪತ್ತುಯಾವಾಗಲೂ ಶಾಶ್ವತ. ಶ್ರೀ ಜಗದ್ಗುರು ಪಂಚ
ಪೀಠಾಧೀಶ್ವರರು ಸರ್ವ ಜನಾಂಗಕ್ಕೂ ಆದರಣೀಯ ಸ್ಥಾನಮಾನಗಳನ್ನು ಹೊಂದಿದ್ದಾರೆ. ಅರೇಮಲ್ಲಾಪುರ ಗ್ರಾಮದ ಎಲ್ಲ
ಜನತೆ ಭಕ್ತಿ ಶ್ರದ್ಧೆ ಅಭಿಮಾನದಿಂದ ಜಗದ್ಗುರುಗಳೈವರನ್ನು ಬರಮಾಡಿಕೊಂಡಿರುವುದು ತಮ್ಮೆಲ ್ಲರ ಧರ್ಮನಿಷ್ಠೆ-
ಸ್ವಾಭಿಮಾನಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು. ಈ ಅಪೂರ್ವ ಸಮಾರಂಭದಲ್ಲಿ ಹೊನ್ನಾಳಿ ಹಿರೇಕಲ್ಮಠ,
ಹಾವೇರಿ ಕರ್ಜಗಿಮಠ, ಅಕ್ಕಿಆಲೂರು ಹಿರೇಮಠ, ದಿಂಡದಹೆಳ್ಳಿ ಹಿರೇಮಠ, ಲಿಂಗದಹೆಳ್ಳಿ ಹಿರೇಮಠ, ಹಾವೇರಿ
ಬಣ್ಣದಮಠ, ರಾಣೆಬೆನ್ನೂರು- ಹಿರೇಮಠ, ಮಳಲಿ ಸಂಸ್ಥಾನಮಠ, ಮಣಕೂರು, ನಾಗವಂದ, ಹಿರೇಮಣಕಟ್ಟಿ, ಗಂಜಿಗಟ್ಟಿ,
ಕೂಡಲ, ಹರಪನಹೆಳ್ಳಿ, ರಾಂಪುರ ಬೃಹನ್ಮಠದ ಶ್ರೀಗಳವರು ಉಪಸ್ಥಿತರಿದ್ದು ಸಮಾರಂಭದ ಘನತೆ ಗೌರವ ಹೆಚ್ಚಿಸಿದರು.
ಕೆ.ಸಿ.ನಾಗರಜ್ಜಿ ಸಂಗಡಿಗರಿ0ದ ಸಂಗೀತ ಕಾರ್ಯಕ್ರಮ ಜರುಗಿತು. ಝೀ ಟಿ.ವಿ.ಸರಿಗಮ ಖ್ಯಾತಿಯ ದಿಯಾ
ಹೆಗಡೆ ವಿಶೇಷ ಅಹ್ವಾನಿತರಾಗಿದ್ದರು.
ಇದೇ ಸಂದರ್ಭದಲ್ಲಿ ಕಲ್ಮೇಶ್ವರ ದೇವರ ಮರು ಪ್ರಾಣ ಪ್ರತಿಷ್ಠಾಪನೆ, ಕರಗಲ್ಲು ಸ್ಥಾಪನೆ, ಸಾಮೂಹಿಕ ವಿವಾಹ
ಸಮಾರಂಭ ಸಂಭ್ರಮದಿ0ದ ಜರುಗಿತು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ, ಶ್ರೀ ಕಾಶೀ ಉಭಯ
ಜಗದ್ಗುರುಗಳವರ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಪುನೀತರಾದರು.
ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು