Home ಕರ್ನಾಟಕಗುರು ಕಾರುಣ್ಯದಿಂದ ಶಿಷ್ಯ ಪರಂಪರಗೆ ಬೆಳಕು : ಫಕೀರ ಸಿದ್ಧರಾಮಶ್ರೀ

ಗುರು ಕಾರುಣ್ಯದಿಂದ ಶಿಷ್ಯ ಪರಂಪರಗೆ ಬೆಳಕು : ಫಕೀರ ಸಿದ್ಧರಾಮಶ್ರೀ

by Editor
0 comments

ಚೈತನ್ಯ ನ್ಯೂಸ್ 24, ನವಲಗುಂದ  ಮೇ.15:

ಆಧ್ಯಾತ್ಮದಲ್ಲಿ ಗುರು ಕಾರುಣ್ಯದಿಂದ ಬೆಳಗುವ ಶಿಷ್ಯ ಪರಂಪರೆಯಿಂದಲೇ ಧರ್ಮ ರಕ್ಷಣೆಗೆ ದಾರಿದೀಪವಾಗಿದ್ದು, ಶಿಷ್ಯ ಪರಂಪರೆಯಿಂದ ಸ್ಥಾಪಿತವಾದ ಮಠದಗಳು ಸಮಾಜದಲ್ಲಿನ ಅಂಕು, ಡೊಂಕುಗಳನ್ನು ತಿದ್ದುವ ಮೂಲಕ ಭಕ್ತ ವೃಂದವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿವೆ ಎಂದು ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಮಠದ ಶ್ರೀ ಫಕೀರಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ಬುಧವಾರ ರಾತ್ರಿ ಪಟ್ಟಣದ ಹಿರೇಮಠದ ಗುರು ಪಟ್ಟಾಧಿಕಾರ ಮಹೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಸ್ವಾಮಿಜಿಯಾದವ್ರು ತಮ್ಮ ಪೂರ್ವಾಶ್ರಮವನ್ನು ತೊರೆದು ಸನ್ಯಾಸವನ್ನು ಸ್ವೀಕರಿಸಿ ತಮ್ಮ ಆತ್ಮ ಜ್ಞಾನದ ಮೂಲಕ ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡಿದಾಗ ಮಾತ್ರ ಸನ್ಯಾಸತ್ವದ ಸಾತ್ವಿಕತೆಗೆ ಮೆರಗು ಬರಲು ಸಾಧ್ಯ ಈ ನಿಟ್ಟಿನಲ್ಲಿ ಇಂದು ಪಂಚ ಪೀಠಾಧಿಕಾರಿಗಳ ಸಮ್ಮುಖದಲ್ಲಿ ನೂತನವಾಗಿ ಪೀಠಾರೋಹಣ ಮಾಡಿದ ಶ್ರೀ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯರು ಭಕ್ತಿ ಮಾರ್ಗದೊಂದಿಗೆ ಸಮಾಜದಲ್ಲಿ ಧರ್ಮ ಬೋಧನೆ ನಡೆಸಿಕೊಂಡು ಹೋಗಬೇಕೆಂದರು.

ಹಿರೇಮಠದ ನೂತನ ಪೀಠಾಧಿಕಾರಿಗಳಾದ ಶ್ರೀ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪೂರ್ವ ಜನ್ಮದ ಸುಕೃತ ಮತ್ತು ಸಿದ್ದೇಶ್ವರ ಶಿವಾಚಾರ್ಯರ ಆಶೀರ್ವಾದದಿಂದ ಶ್ರೀ ಮಠದ ಪಟ್ಟಾಧ್ಯಕ್ಷನಾಗಿರುವೆ. ವೀರಶೈವ ಧರ್ಮ ಪರಂಪರೆಯ ಆದರ್ಶ ಮೌಲ್ಯಗಳ ಸಂರಕ್ಷಣೆ-ಗುರುಸ್ಥಲದ ಮಹತ್ವವನ್ನು ಅರಿತು ಭಕ್ತ ಸಂಕುಲಕ್ಕೆ ಮಾರ್ಗದರ್ಶನ ಮಾಡುವೆ. ಹೊರಗಿನ ಸಿರಿ ಸಂಪತ್ತಿಗಿಂತ ಆಧ್ಯಾತ್ಮ ಸಂಪತ್ತು ದೊಡ್ಡದು. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಕೃಪಾಶೀರ್ವಾದದಿಂದ ಶ್ರೀ ಮಠದ ಅಭಿವೃದ್ಧಿ, ಭಕ್ತರಿಗೆ ಸಂಸ್ಕಾರ ಮತ್ತು ಗುಣಾತ್ಮಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತೇನೆಂದು ಸಂಕಲ್ಪ ಕೈಕೊಂಡರು.

ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್.ಎಚ್‌.ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಕಳೆದ 12 ದಿನಗಳಿಂದ ಪಟ್ಟಣದಲ್ಲಿ ಜರುಗಿದ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ನಿತ್ಯ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಪೀಠಾಧಿಕಾರ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದು, ಬರುವ ದಿನಗಳಲ್ಲಿ ನೂತರ ಶ್ರೀಗಳ ನೇತೃತ್ವದಲ್ಲಿ ಹಿರೇಮಠವು ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರವಾಗಲಿ ಎಂದರು.

ನಂತರ ಹನಮಂತ ಲಮಾಣಿ ತಂಡದವರಿದಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿದವು.

ಪಂಚಗ್ರಹ ಹಿರೇಮಠದ ಹಿರಿಯ ಸ್ವಾಮಿಜಿ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ನರಗುಂದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಜಿ, ಮಾಜಿ ಸಚಿವ ಕೆ.ಎನ್.ಗಡ್ಡಿ, ಬಿ.ಬಿ.ಗಂಗಾಧಮಠ, ಅಂದಾನಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ವ್ಹಿ.ಟಿ.ಕರಿಸಕ್ರಣ್ಣವರ(ಭೋವಿ), ಸಿದ್ದಲಿಂಗಯ್ಯ ಹಿರೇಮಠ, ಪಾಂಡಪ್ಪ ಕೋನರಡ್ಡಿ, ವಿರೇಶ ಕೂಗು, ಬಿ.ಸಿ.ಪೂಜಾರ, ಗಂಗಪ್ಪ ಹಳ್ಳದ, ಯಲ್ಲಪ್ಪ ಭೋವಿ, ಅಪ್ಪಣ್ಣ ಹಳ್ಳದ, ಎ.ಬಿ.ಕೊಪ್ಪದ ಮತ್ತಿತರರು ಇದ್ದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು