ಚೈತನ್ಯ ನ್ಯೂಸ್ 24 ಮುಳಗುಂದ ಮೇ.27:
ಮುಂಗಾರು ಪೂರ್ವ ಸ್ವಲ್ಪ ಮಳೆಯಾಗಿದ್ದು ಈಗ ಸಧ್ಯ ರೈತರು ಬಿತ್ತನೆಗೆ ತಯಾರಾಗಿದ್ದಾರೆ. ಮುಂಗಾರು ಪ್ರವೇಶವಾಗುವ ಈ ಸಂದರ್ಭದಲ್ಲಿ ಜೂನ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಬೇಕು ಎಂದು ಗದಗ ಸಹಾಯಕ ಕೃಷಿ ಅಧಿಕಾರಿ ಎಫ್.ಸಿ ಗುರಿಕಾರ ತಿಳಿಸಿದರು.
ಸೋಮವಾರ ಅವರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ೬೦ ಸಾವಿರ ಹೆಕ್ಟೇರ ಭೂಮಿಯಲ್ಲಿ ಹೆಸರು, ೪೦ ಸಾವಿರ ಹೆಕ್ಟೇರ ಗೋವಿನ ಜೋಳ, ೨೦೦೦ ಹೆಕ್ಟೇರ ಬಿಟಿ ಹತ್ತಿ, ೧೫೦೦೦ ಹೆಕ್ಟೇರ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿ ರಸಾಯನಿಕ ಗೊಬ್ಬರ ಅಲಭ್ಯವಾಗುತ್ತಿದ್ದು, ರೈತರು ಡಿಎಪಿ ಬದಲಾಗಿ ಪರ್ಯಾಯ ಸಾವಯವ ಗೊಬ್ಬರ ಉಪಯೋಗ ಮಾಡಬೇಕು. ಬೀಜದ ಕೊರತೆ ಈ ವರ್ಷದಲ್ಲಿ ಆಗದು. ರೈತರು ಯಾವದೊಂದೇ ಕಂಪನಿಯ ಗೊಬ್ಬರಕ್ಕೆ ಅಂಟಿಕೊಳ್ಳಬೇಡಿ. ಎಲ್ಲ ಕಂಪನಿಯ ಗೊಬ್ಬರಗಳಲ್ಲಿಯೂ ಒಂದೇ ರಸಾಯನಿಕ ಇರುವದರಿಂದ ಯಾವ ಕಂಪನಿಯದನ್ನಾದರೂ ಖರೀದಿಸಬಹುದು.
ಸದ್ಯ ಪಟ್ಟಣದಲ್ಲಿ ೨೧ ಕ್ವಿಂ ಹೆಸರು ಬೀಜ, ೧.೨೦ ಕೆಜಿ ತೊಗರಿ ಬೀಜಗಳು ಸಧ್ಯದಿಂದಲೇ ಲಭ್ಯವಿದ್ದು, ನಂತರ ಹಂತ ಹಂತವಾಗಿ ಇತರೇ ಬೀಜಗಳು ಬರುತ್ತವೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಖಾಸೀಮ ಹಾದಿಮನಿ, ರೈತರಾದ ದೇವಪ್ಪ ಗುಂಜಾಳ, ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಪ್ರಭು ಲದ್ದಿ, ಮಹಾಂತೇಶ ಗುಂಜಾಳ, ಶಂಕ್ರಯ್ಯ ಹಿರೇಮಠ, ಮಹಮ್ಮದಲಿ ಶೇಖ, ಮಂಜು ಕಬಾಡಿ, ಮುತ್ತಪ್ಪ ಬಳ್ಳಾರಿ, ಮಹಾಂತೇಶ ಲಾಳಿ, ಚನ್ನಪ್ಪ ಕಣವಿ ಇತರರು ಇದ್ದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಸಹಾಯಕ ಕೃಷಿ ಅಧಿಕಾರಿ ಎಫ್.ಸಿ. ಗುರಿಕಾರ ವಿತರಣೆಗೆ ಚಾಲನೆ ನೀಡಿದರು.