ಚೈತನ್ಯ ನ್ಯೂಸ್ ನರೇಗಲ್ಲ ಮೇ.೬:
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತ ಸತತ ೧೮ ವರ್ಷಗಳಕಾಲ ಸುದೀರ್ಘಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಪಿ ಆರ್ ಬಿಲ್ಲಹದ್ದಣ್ಣವರ ಶಿಕ್ಷಕಿಯರ ಸೇವೆ ಅನುಪಮವಾದದ್ದು, ಅಂತಹ ಶಿಕ್ಷಕಿಯರು ನಮ್ಮೆಲ್ಲರ ಜೊತೆಗೆ ಸೇವೆ ಸಲ್ಲಿಸಿದ್ದೇ ನಮಗೆಲ್ಲ ಹೆಮ್ಮೆ ಈಗ ಅವರು ನಿವೃತ್ತಿ ಹೊಂದಿರಬಹುದು ಆದರೆ ಶಿಕ್ಷಣ ಸಂಸ್ಥೆಯ ಮೇಲಿನ ಕಾಳಜಿ ಮಕ್ಕಳ ಮೇಲಿನ ಪ್ರೀತಿ ಅವರನ್ನು ಮತ್ತೇ ಈ ಶಾಲೆಯಲ್ಲಿ ಗೌರವ ಸೇವೆ ಸಲ್ಲಿಸುವಂತೆ ಮಾಡಲಿದೆ ಎಂದು ಕನ್ನಡ ಸಹಶಿಕ್ಷಕ ಎಂ ಕೆ ಬೇವಿನಕಟ್ಟಿ ತಿಳಿಸಿದರು.
ಅವರು ಸ್ಥಳೀಯ ಕೆ ಎಸ್ ಎಸ್ ಪ್ರೌಢಶಾಲೆಯ ಆವರಣದಲ್ಲಿ ಎ.೩೦ ರಂದು ನಿವೃತ್ತಿಹೊಂದಿದ ಪಿ ಆರ್ ಬಿಲ್ಲಹದ್ದಣ್ಣವರ ಶಿಕ್ಷಕಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕಿ ಪಿ ಆರ್ ಬಿಲ್ಲಹದ್ದಣ್ಣವರ ಮಕ್ಕಳ ಪ್ರೀತಿಯ ಶಿಕ್ಷಕಿಯಾಗಿ ತೃಪ್ತಿಕರ ಸೇವೆ ಸಲ್ಲಿಸಿದ್ದ ಅವರ ಸೇವೆ ಇಡೀ ಸಂಸ್ಥೆಯಲ್ಲಿಯೇ ಹೆಸರುವಾಸಿಯಾಗಿದೆ, ಇವರ ಸೇವೆಯನ್ನು ಅದ್ಯಕ್ಷರಾದಿಯಾಗಿ ಆಡಳಿತ ಮಂಡಳಿಯವರು ಶ್ಲಾಘಿಸುತ್ತಿರುವುದು ಅವರ ಪ್ರಾಮಾಣಿಕ ಸೇವೆಗೆ ಹಿಡಿದ ಕೈಗನ್ನಡಿ ಎಂದು ಅವರು ತಿಳಿಸಿದರು
ಈ ಸಂದರ್ಭದಲ್ಲಿ ಕೆ ಎಸ್ ಎಸ್ ಪ ಪೂ ಮಹಾವಿದ್ಯಾಲಯದ ಸಿಬ್ಬಂದಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು. ಈವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಪಿ ಆರ್ ಬಿಲ್ಲಹದ್ದಣ್ಣವರ ಈ ಸಂಸ್ಥೆಯಲ್ಲಿ ಸೇವೆಸಲ್ಲಿಸಿದ್ದು ನನ್ನ ಸುದೈವ ಇಲ್ಲಿರುವ ಎಲ್ಲ ಶಿಕ್ಷಕ ಸಮುದಾಯ ಸಹೋದರ ಸಹೋದರಿಯರಾಗಿ ಬೆರೆತು ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇ ತಿಳಿಯದಂತಾಗಿದೆ. ಇಂತಹ ಎಲ್ಲ ಶಿಕ್ಷಕರನ್ನು ಬಿಟ್ಟು ಹೊರಟಿರುವುದೇ ಬೇಸರದ ಸಂಗತಿ ಆದರೆ ಮುಂಬರುವ ದಿನಮಾನಗಳಲ್ಲಿ ಮಕ್ಕಳ ಮೇಲಿನ ಪ್ರೀತಿಯಿಂದ ಸಮಯ ಸಿಕ್ಕಾಗಲೆಲ್ಲ ಈ ಶಾಲೆಗೆ ಬಂದು ಪ್ರಾಮಾಣಿಕ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾದ್ಯಾಯ ಪಿ ಎನ್ ಹಿರೇಮಠ ಮಾತನಾಡಿ ತಾವು ಹಿರಿಯರಾಗಿ ನಮಗೆಲ್ಲಾ ಸಮಯೋಚಿತ ಮಾರ್ಗದರ್ಶನ ಮಾಡುತ್ತ ಎಲ್ಲ ರೀತಿಯಿಂದ ಸಹಕರಿಸಿ ಇಂದು ನಿವೃತ್ತಿಯಾಗುತ್ತಿರುವ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೆ ಎಸ್ ಎಸ್ ಪ ಪೂ ಮಹಾವಿದ್ಯಾಲಯದ ಶಿವಾನಂದ ಗೊಗೇರಿ, ಶಿಕ್ಷಕರಾದ ಅರ್ಕಸಾಲಿ, ಚಿನ್ನೂರ, ಉಣಕಲ್ಲ, ವೆಂಕಟಾಪುರ, ಶಿಕ್ಷಕಿ ಉಪ್ಪಿನ, ಬೋಧಕೇತರ ಸಿಬ್ಬಂದಿ ಹನಮಂತ ಉಮಚಗಿ ಉಪಸ್ದಥಿತರಿದ್ದರು.
ಶಿಕ್ಷಕರ ಸೇವೆ ಅನುಪಮ : ಮಹದೇವ ಬೇವಿನಕಟ್ಟಿ :
ಪಿ ಆರ್ ಬಿಲ್ಲಹದ್ದಣ್ಣವರ ಶಿಕ್ಷಕಿ ನಿವೃತ್ತಿ: ಗೌರವದಿಂದ ಬೀಳ್ಕೊಟ್ಟ ಸಿಬ್ಬಂದಿ:
265