Home ಜಿಲ್ಲಾ ಸುದ್ದಿಗಳುಗದಗ-ಹರಪನಹಳ್ಳಿ ರೈಲು ಮಾರ್ಗವಾಗಲಿ: ಬಸವರಾಜ ನವಲಗುಂದ

ಗದಗ-ಹರಪನಹಳ್ಳಿ ರೈಲು ಮಾರ್ಗವಾಗಲಿ: ಬಸವರಾಜ ನವಲಗುಂದ

ರೈಲ್ವೆ ಹೋರಾಟಗಾರರಿಗೆ ವಿಕಾಸ ವೇದಿಕೆಯಿಂದ ಸನ್ಮಾನ:

by Editor
0 comments

ಚೈತನ್ಯ ನ್ಯೂಸ್ 24 ಗದಗ ಮೇ.7:
ಗದಗ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದ ಜನತೆಗೆ ವ್ಯಾಪಾರ, ಶಿಕ್ಷಣ, ಆರೋಗ್ಯ ಮುಂತಾದ ಹಲವಾರು ಕೆಲಸ ಕಾರ್ಯಗಳಿಗೆ ಅನುಕೂಲತೆ ಕಲ್ಪಿಸುವ ಗದಗ-ಹರಪನಹಳ್ಳಿ ರೈಲು ಮಾರ್ಗ ಬೇಗನ ಕೈಗೂಡಲಿ ಎಂದು ಗದಗ- ಹರಪನಹಳ್ಳಿ ಮಾರ್ಗದ ರೈಲ್ವೆ ಹೋರಾಟ ಸಮಿತಿ ಸಂಸ್ಥಾಪಕರ ಬಸವರಾಜ ನವಲಗುಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಗದಗ ಜಿಲ್ಲಾ ವಿಕಾಸ ವೇದಿಕೆಯಿಂದ ಗದಗ- ಹರಪನಹಳ್ಳಿ ಮಾರ್ಗದ ರೈಲ್ವೆ ಹೋರಾಟ ಸಮಿತಿ ಸಂಸ್ಥಾಪಕ ಬಸವರಾಜ ನವಲಗುಂದ ಸೇರಿ ಸಮಿತಿ ಸದಸ್ಯರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತಗೊಂಡು ಅವರು ಮಾತನಾಡಿದರು.
ಗದಗ – ಹರಪನಹಳ್ಳಿ ಮಾರ್ಗದ ಸಲುವಾಗಿ ನಾವು ದೆಹಲಿ, ಬೆಂಗಳೂರು, ಹುಬ್ಬಳ್ಳಿ ಮುಂತಾದ ಹಲವಾರು ರೈಲ್ವೆ ಇಲಾಖೆ ಹಾಗೂ ರೈಲ್ವೆ ಸಚಿವರಿಗೆ ಮನವಿ, ಪ್ರತಿಭಟನೆಗಳ ಮೂಲಕ ಗಮನ ಸೆಳೆದಿದ್ದೇವೆ. ಈ ಮಾರ್ಗದ ಸರ್ವೆ ಕಾರ್ಯಕ್ಕೆ ಈಗಾಗಲೇ ಕೇಂದ್ರ ಸರ್ಕಾರ 9 ಲಕ್ಷ ರೂಪಾಯಿ ಮೀಸಲು ಇಟ್ಟಿರುವುದು ಈ ಮಾರ್ಗದಲ್ಲಿ ರೈಲ್ವೆ ಆದಷ್ಟು ಬೇಗ ಓಡಾಡುವ ಭರವಸೆಯನ್ನು ಹೆಚ್ಚಿಸಿದೆ. ಸರ್ವೆ ಕಾರ್ಯ ಶೀಘ್ರ ಮುಗಿದು, ಈ ಮಾರ್ಗದಲ್ಲಿ ಜಿಲ್ಲೆಯ ಜನ ರೈಲಿನಲ್ಲಿ ಓಡಾಡುವಂತಾಗಲಿ ಎಂದು ಆಶಿಸಿದರು.
ಹೋರಾಟ ಸಮಿತಿ ಸದಸ್ಯರಿಗೆ ಸನ್ಮಾನಿಸಿದ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಅವರು ಮಾತನಾಡಿ, ಗದಗ – ಹರಪನಹಳ್ಳಿ ನೂತನ ಮಾರ್ಗವು ಬೇಗನೆ ಜನರಿಗೆ ನೀಡಲು ಹರಪನಹಳ್ಳಿ ಶಾಸಕರು ಶ್ರೀಮತಿ ಲತಾ ಮಲ್ಲಿಕಾರ್ಜುನ ಸೇರಿ ಗದಗ ಉಸ್ತುವಾರಿ ಸಚಿವರಾದ ಹೆಚ್.ಕೆ ಪಾಟೀಲರು, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಜಿಲ್ಲಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ ಅವರಿಗೆ ಅಷ್ಟೇ ಅಲ್ಲ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ಬಳ್ಳಾರಿ ಲೋಕಸಭಾ ಸದಸ್ಯರು ಆಗಿರುವ ಈ. ತುಕಾರಾಂ ಇವರಿಗೆ ಮನವಿ ಪತ್ರ ನೀಡಲಾಗಿದೆ.
ಈಗಾಗಲೇ ಈ ಬಗ್ಗೆ ಗದಗ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳ ಗಮನಕ್ಕೆ ಸಹ ಬಂದಿದ್ದು, ಈ ರೈಲು ಮಾರ್ಗದಿಂದ ಎರಡೂ ಜಿಲ್ಲೆಯ ಜನರಿಗೆ ಬಹಳಷ್ಟು ಅನುಕೂಲತೆ ಇದೆ. ಈ ಮಾರ್ಗ ಬೇಗನೇ ಪೂರ್ಣಗೊಂಡರೆ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಜನರಿಗೆ ಸಹ ಬೆಂಗಳೂರು, ಅಲ್ಲಿಂದ ಮುಂದಿನ ಪ್ರಯಾಣಕ್ಕೆ ಅನುಕೂಲ ಆಗಲಿದೆ.
ಅಷ್ಟೇ ಅಲ್ಲ, ಈ ರೈಲು ಮಾರ್ಗದಿಂದ ಗದಗ ಜಂಕ್ಷನ್‌ಗೆ ಮಹತ್ವ ಬರಲಿದೆ. ಜೊತೆಗೆ ಇಲ್ಲಿನ ಜನರಿಗೆ ಉದ್ಯೋಗ ವ್ಯಾಪಾರ ಬೆಳವಣಿಗೆಗೆ ಸಹಕಾರ ಆಗಲಿದೆ. ದಯಮಾಡಿ ಜಿಲ್ಲೆಯ ಜನರು ನಾವು ಹೋರಾಟ ಮಾಡುವ ಸಂದರ್ಭದಲ್ಲಿ ಸ್ಪಂದಿಸಲು ವಿಶ್ವನಾಥ ಖಾನಾಪೂರ ಅವರು ಮನವಿ ಮಾಡಿದರು
ನಗರಸಭೆ ಮಾಜಿ ಸದಸ್ಯರಾದ ಮಂಜುನಾಥ ಹೇಮಣ್ಣ ಮುಳಗುಂದ ಅವರು ಮಾತನಾಡಿ, ಜಿಲ್ಲೆಯ ವ್ಯಾಪಾರ ವಹಿವಾಟಿಗೆ ಈ ಮಾರ್ಗದಿಂದ ಗದಗ ಜಿಲ್ಲೆಯ ಅಭಿವೃದ್ಧಿ ಹೊಂದಲು ಅನುಕೂಲ ಆಗಲಿದೆ. ನಾವು ಸಹ ನಿಮ್ಮ ಹೋರಾಟದಲ್ಲಿ ಸದಾಕಾಲವೂ ಇರುತ್ತೇವೆ ಎಂದು ತಿಳಿಸಿದರು.
ನಗರಸಭೆಯ ಇನ್ನೋರ್ವ ಮಾಜಿ ಸದಸ್ಯರಾದ ಎಂ ಎಸ್ ಪರ್ವತಗೌಡ ಅವರು ಮಾತನಾಡಿ, ಈ ಹೊಸ ರೈಲು ಮಾರ್ಗಕ್ಕೆ ಭೂಮಿ ಸ್ವಾಧೀನ ಪ್ರಕ್ರಿಯೆ ಹಾಗೂ ಸರ್ವೆ ಕಾರ್ಯ ಬೇಗನೆ ಮುಗಿಯಲಿ. ಜೊತೆಗೆ ಮಾರ್ಗದಲ್ಲಿ ಬರುವ ನಿಲ್ದಾಣಗಳು ಆಯಾ ಊರು ಅಥವಾ ಪಟ್ಟಣಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಆಗುವಂತಿರಲಿ ಎಂದರು.
ಸಮಾರAಭದಲ್ಲಿ ಚನ್ನಕೇಶವ ಹಿರೇಮಠ, ರಜಾಕ್ ನೂರಬಾಷಾ, ಶಿವರಾಚಯ್ಯ ಹೊಸಳ್ಳಿಮಠ, ಶಿವಮೂರ್ತಯ್ಯ ಪುರಾಣಿಕಮಠ, ರವಿಗೌಡ ಎಂ. ಪಾಟೀಲ, ರಫೀಕ್ ಕಿತ್ತೂರು, ರಮೇಶ್ ಮಡಿವಾಳರ, ಅರವಿಂದ ಕಾಂಬಳೆ, ಪ್ರಹ್ಲಾದ ಮಾಂಡ್ರೆ, ವೆಂಕಟೇಶ ಕಬಾಡಿ, ಸುರೇಶ ಪವಾರ, ಪ್ರಕಾಶ್ ನಾಯರ್, ಪವನ ಜೈನ್, ಚಿಂಚಲಿ ಗ್ರಾಮದ ಹಿರಿಯರಾದ ಹುಚ್ಚಪ್ಪ ಸಂದಕದ ಸೇರಿ ಮುಂತಾದವರು ಪಾಲ್ಗೊಂಡಿದ್ದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು