Home ಜಿಲ್ಲಾ ಸುದ್ದಿಗಳುಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು: ಎಸ್ ವಿ ಸ0ಕನೂರ

ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು: ಎಸ್ ವಿ ಸ0ಕನೂರ

by Editor
0 comments

 

ಚೈತನ್ಯ ನ್ಯೂಸ್ 24 ಗದಗ ಮೇ.3:

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ವೀರಶೈವ ಧರ್ಮಪೀಠ ಜಗದ್ಗುರುಗಳ ಧರ್ಮ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಎಸ್ ವಿ ಸ0ಕನೂರ ಉದ್ಘಾಟಿಸಿ, ಮನುಷ್ಯನ ಆಸ್ತಿ ಮುಖ್ಯವಾದದ್ದು ಆರೋಗ್ಯ, ಅದಕ್ಕಿಂತ ಮಿಗಿಲಾದ ಆಸ್ತಿ ಇನ್ನೊಂದಿಲ್ಲ ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಆದ್ಯತೆಯ ನೀಡಬೇಕು ಜನರಲ್ಲಿ ಆರೋಗ್ಯ ರಕ್ಷಣೆ ಜಾಗೃತಿ ಮೂಡಿಸಲು ಸೂಡಿ ಉಕ್ತಿ ಹಿರೇಮಠ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಆರೋಗ್ಯ ತಪಾಸಣೆ ಶಿಬಿರ ಮತ್ತಿತರ ಶಿಬಿರ ಆಯೋಜಿಸುವ ಮೂಲಕ ಸಾಮಾಜಿಕ ಕಾರ್ಯ ಹಮ್ಮಿಕೊಂಡಿರುವುದು ಜನರು ಆಯುಷ್ಮಾನ್ ಭಾರತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಳಿಕ ಮಾತನಾಡಿದ ಡಾಕ್ಟರ್ ಆನಂದ್ ಪಾಂಡುರಂಗಿ ಮನುಷ್ಯ ದೈಹಿಕ ಸದೃಢವಾಗಿದ್ದರೆ ಏನನ್ನಾದರೂ ಸಾಧಿಸಬಹುದು ಸುಖ ಜೀವನ ನಡೆಸಲು ಸಾಧ್ಯ ಎಂದರು. ಡಾಕ್ಟರ್ ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಯುವ ಪೀಳಿಗೆ ಮೊಬೈಲ್ ಗೀಳಿಗೆ ಹೆಚ್ಚು ಅಂಟಿಕೊಂಡಿದ್ದು ದುರ್ದೈವ ಸದೃಢ ಆರೋಗ್ಯಕ್ಕಾಗಿ ವ್ಯಾಯಾಮ, ಅಧ್ಯಾತ್ಮ, ಆದರ್ಶ, ಜೀವನದಲ್ಲಿ ಅಳವಡಿಸ ಕೊಳ್ಳಬೇಕೆಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಪೇಧಮೂರ್ತಿ ಪುಟ್ಟಯ್ಯ ಶಾಸ್ತ್ರಿಗಳು ಅರಳಲಿ ಮಠ. ಯಜುರ್ವೇದ ವೈದಿಕ ವೃಂದ ಡಾಕ್ಟರ್ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು. ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಫಕೀರೇಶ್ವರ ಶಿವಾಚಾರ್ಯರು, ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು. ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯರು. ಡಾಕ್ಟರ್ ಎಸ್ ಆರ್ ರಾಮೆಗೌಡರ ಅವರಿಗೆ ವೈದ್ಯರತ್ನಾಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗದಗ ಡಿ ಹೆಚ್ ಓ ಎಸ್ ಎಸ್ ನೀಲಗುಂದ ಧಾರವಾಡ ಡಿ ಎಚ್ ಓ ಡಾಕ್ಟರ್ ಹೊನ್ನಕೇರಿ ಹಾಗೂ ಸೂಡಿ ಗ್ರಾಮಸ್ಥರು ಸೂಡಿ ಸುತ್ತಮುತ್ತಲಿನ ಗ್ರಾಮದವರು ಭಾಗವಹಿಸಿದ್ದರು
ರಕ್ತದಾನ ಶಿಬಿರದಲ್ಲಿ ಒಟ್ಟು 52 ಯೂನಿಟ್ ರಕ್ತ ಸಂಗ್ರಹ ವಾಗಿದೆ. ಗಜೇಂದ್ರಗಡ ಪೊಲೀಸ್ ಸಬ್ ಇನ್ಸೆಕ್ಟರ್ ಪ್ರಕಾಶ್ ಡಿ. ರಕ್ತದಾನ ಮಾಡುವ ಮೂಲಕ ಸಿಬಿರಕ್ಕೆ ಚಾಲನೆ ನೀಡಿದರು ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಯುವಕರು ಯುವತಿಯರು ರಕ್ತದಾನ ಮಾಡಿದರು. ಆರೋಗ್ಯ ತಪಾಸಣೆಯಲ್ಲಿ ಒಟ್ಟು 1200 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು