ಚೈತನ್ಯ ನ್ಯೂಸ್ 24 ನವಲಗುಂದ, ಮೇ.12:
ತುಪ್ಪರಿಹಳ್ಳದ ಮೊದಲೇ ಹಂತದ ಕಾಮಗಾರಿ ಮುಗಿದ ನಂತರ ಬಾಕಿ ಉಳಿದ ಎರಡನೇ ಹಂತದ ೧೬೨ ಕೋಟಿ ಅನುದಾನದ ಟೆಂಡರ್ ಕರೆಯಲಾಗಿದೆ. ಬಹುದಿನ ಬೆಡಿಕೆಯಾದ ಕಲೇಶ್ವರ ದೇವಸ್ಥಾನಕ್ಕೆ ೫೦ ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಡ ಹಾಗೂ ವಿವಿದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶ್ರೀ ಕಲೇಶ್ವರನ ಆಶೀರ್ವಾದ ಎಲ್ಲರಿಗೂ ಇರಲಿ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ತಾಲ್ಲೂಕಿನ ಶಿರಕೋಳ ಗ್ರಾಮದ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗ್ರಾಮದ ಮೊರಬ ರಸ್ತೆಯಿಂದ ಪಿ.ಕೆ.ಪಿ.ಎಸ್. ಮೂಲಕ ನಾಯ್ಕರ ಮನೆಯಿಂದ ಹಡಪದ ಮನೆಯವರೆಗೆ ಸಿಸಿ ಗಟಾರ ಹಾಗೂ ಪೇವರ್ಸ್ ಅಳವಡಿಸುಲು ರೂ. ೫೦ ಲಕ್ಷ ಕಾಮಗಾರಿ ಹಾಗೂ ಶಿರಕೋಳ ಗ್ರಾಮ ಪಂಚಾಯತ ಹತ್ತಿರ ಬಸಿಡೋಣಿ ಅವರ ಮನೆಯಿಂದ ಮೈಲಾರದೇವರ ಸಿಬಾರಗಟ್ಟಿ ವರೆಗೆ ರೂ. ೫೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಗಟಾರ ನಿರ್ಮಾಣ ಒಟ್ಟು ೧ ಕೋಟಿ, ಹನುಮಂತ ದೇವರ ಗುಡಿಯು ಹತ್ತಿರವಿರುವ ೨೫ ಲಕ್ಷ ವೆಚ್ಚದಲ್ಲಿ ಗರಡಿ ಮನೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಬೆಳಗಾವಿ ಜಿಲ್ಲೆಯ ಕಿತ್ತೂರ ದಿಂದ ಪ್ರಾರಂಭವಾಗಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹರಿದು ಹೋಗುವ ತುಪ್ಪರಿಹಳ್ಳ ಎರಡನೇ ಹಂತದ ೧೬೨ ಕೋಟಿ ವೆಚ್ಚದ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಶಿರಕೋಳ-ಹಣಸಿ ನಡುವೆ ಇರುವ ತುಪ್ಪಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ಶಿರಕೋಳ ಗ್ರಾಮದ ಅಭಿವೃದ್ಧಿಯನ್ನು ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿರಕೋಳ ಹಿರೇಮಠದ ಪೂಜ್ಯ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಎಂ.ಎಸ್. ರೋಣದ, ಸೋಮಪ್ಪ ವಿ. ಬಳಿಗೇರ, ಸಂತೋಷ ಗುಜ್ಜಳ, ಸುರೇಶ ಯಕ್ಕುಂಡಿ, ನಿತೀನ ಗಾಣಿಗೇರ, ಎಇಇ ಎಸ್.ಎನ್. ಲಂಗೋಟಿ, ಕಲ್ಲಪ್ಪ ತಲಬಾಯಿ, ಶಿವಲೀಲಾ ಬೋರಶೇಟ್ಟರ, ಪಮೇಶ ಹೊಸವಾಳ, ಅಡಿವೆಪ್ಪ ಗಾಣಿಗೇರ, ನಾಗಯ್ಯ ಹಿರೇಮಠ, ಸಿದ್ದಪ್ಪ ಬಾರಕೇರ, ಸೋಮಣ್ಣ ನಾಯ್ಕರ, ಸಿದ್ದಪ್ಪ ತಳವಾರ, ಈರಣ್ಣ ಗುಡಗುಡಿ, ಆರ್.ಎಂ. ಹಿರೇಮಠ, ಕಲ್ಲಪ್ಪ ಬಿಸಿಡೋಣಿ, ಕಲ್ಲಪ್ಪ ಸಂಗಳದ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.