Home ಜಿಲ್ಲಾ ಸುದ್ದಿಗಳುನಾಟಕಗಳು ಮಾನವನ ಜೀವನದ ಪ್ರತಿಬಿಂಬ: ಸಮಾಜಕ್ಕೆ ಹಿಡಿಯುವ ಕನ್ನಡಿ: ಪಿಎಸ್ ಐ ಐಶ್ವರ್ಯ ನಾಗರಾಳ

ನಾಟಕಗಳು ಮಾನವನ ಜೀವನದ ಪ್ರತಿಬಿಂಬ: ಸಮಾಜಕ್ಕೆ ಹಿಡಿಯುವ ಕನ್ನಡಿ: ಪಿಎಸ್ ಐ ಐಶ್ವರ್ಯ ನಾಗರಾಳ

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.12:
ನಾಟಕಗಳು ಮಾನವನ ಜೀವನದ ಪ್ರತಿಬಿಂಬವಾಗಿದ್ದು, ಸಮಾಜಕ್ಕೆ ಕನ್ನಡಿ ಹಿಡಿಯುವ, ಮನರಂಜನೆ ನೀಡುವ ಮತ್ತು ಜ್ಞಾನವನ್ನು ಹಂಚುವ ಶಕ್ತಿಯುತ ಮಾಧ್ಯಮವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ನಾಟಕಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಎಂದು ನರೇಗಲ್ಲ ಠಾಣಾಧಿಕಾರಿ ಐಶ್ವರ್ಯ ನಾಗರಾಳ ತಿಳಿಸಿದರು.
ಅವರು ಮೇ.೧೧ ರ ರಾತ್ರಿ ೧೦.೩೦ಕ್ಕೆ ಚಾಲನೆಗೊಳ್ಳಲಿರುವ ಧರ್ಮದನುಡಿ ಬೆಂಕಿಯ ಕಿಡಿ ಎಂಬ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು


ನಾಟಕಗಳು ಸಮಾಜದಲ್ಲಿನ ಸಮಸ್ಯೆಗಳು, ಅನ್ಯಾಯಗಳು ಮತ್ತು ಜೀವನದ ಮೌಲ್ಯಗಳನ್ನು ಜನರಿಗೆ ಪರಿಚಯಿಸುತ್ತವೆ. ಇವು ಕೇವಲ ಮನರಂಜನೆಯ ಸಾಧನವಲ್ಲ, ಬದಲಾಗಿ ಶಿಕ್ಷಣದ ಮಾಧ್ಯಮವಾಗಿಯೂ ಕರ‍್ಯನರ‍್ವಹಿಸುತ್ತವೆ. ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳು ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ತಿಳಿಸುತ್ತವೆ. ವೃತ್ತಿ ರಂಗನಾಟಕಗಳು ಕೇವಲ ಪ್ರರ‍್ಶನವಲ್ಲದೆ, ಸಾಮಾಜಿಕ ಅಂತರ್ ಸಂಬಂಧಗಳನ್ನು ಬಲಪಡಿಸುತ್ತವೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ಎಂದು ಅವರು ತಿಳಿಸಿದರು.
ನನಗೂ ನಾಟಕವೆಂದರೆ ತುಂಬಾ ಆಸಕ್ತಿ ಚಿಕ್ಕವಳಿದ್ದಾಗ ನೋಡಿದ್ದು, ಮತ್ತೆ ಅವಕಾಶವೇ ಸಿಕ್ಕಿರಲಿಲ್ಲ. ನನ್ನ ಪುಣ್ಯವೋ ಏನೋ ನಾನು ಮತ್ತೆ ನಾಟಕ ನೋಡುವ ಅವಕಾಶ ಒದಗಿಬಂದಿದೆ. ಇಲ್ಲಿರುವ ಪ್ರೇಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದೀರಿ, ತಾವೆಲ್ಲ ನಾಟಕವನ್ನು ನೋಡುವದರ ಜೊತೆಗೆ ಖುಷಿಪಡಿ, ಇತರರಿಗೆ ತೊಂದರೆ ಯಾಗದಂತೆ ವರ್ತಿಸಿ, ನಾವು ಪೊಲೀಸರು ಎನ್ನುವರೀತಿಯಲ್ಲಿ ನಮ್ಮ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ನೀವೆಲ್ಲಾ ವರ್ತಿಸದಂತೆ ಶಾಂತಿಯುತವಾಗಿ ನಾಟಕ ವೀಕ್ಷಿಸಿ ಎಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ನ್ಯಾಯವಾದಿ ಉಮೇಶ ಸಂಗನಾಳಮಠ ಮಾತನಾಡಿ ನಾಟಕಗಳು ಸಾಹಿತ್ಯದ ಒಂದು ಮುಖ್ಯ ಪ್ರಕಾರವಾಗಿ, ಭಾಷೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಉತ್ತೇಜಿಸುತ್ತವೆ.
ನಾಟಕಗಳು ಜನರ ಬದುಕಿನೊಳಗೆ ಹಾಸುಹೊಕ್ಕಾಗಿ, ಹೊಸ ಚಾಲನೆ ನೀಡುವ ಕೆಲಸ ಮಾಡುತ್ತಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೌಲ್ಯಗಳನ್ನು ಅಳವಡಿಸಿಕೊಂಡು ಗ್ರಾಮೀಣ ಭಾಗಗಳಲ್ಲಿ ನಡೆಯುವಂತಹ ಸಾಮಾಜಿಕ ಕರ‍್ಯಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು. ಈ ನಾಟಕಕ್ಕೆ ಬಹುಪಾಲು ಜನರು ತನು, ಮನ ಧನ ದಿಂದ ಸಹಕರಿಸಿದ್ದರ ಫಲವಾಗಿ ಇಂದು ನಾಟಕ ಎಶಸ್ವಿಯಾಗಿ ಜರುಗಲು ಕಾರಣವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮಲ್ಲನಗೌಡ ಪಾಯಪ್ಪಗೌಡ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾದ್ಯಾಯರಾದ ಅರುಣ ಕುಲಕರ್ಣಿ, ಬಸವರಾಜ ಕಲಾಲಬಂಡಿ, ಪ ಪಂ ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಮುಖಂಡ ಪರಪ್ಪ ಬೆಡಗಲ್ಲ, ಶಂಕ್ರಪ್ಪ ದೊಡ್ಡಣ್ಣವರ, ಪ್ರಕಾಶ ಕೊತಬಾಳ, ಉಮೇಶ ಕರಮುಡಿ, ಪ್ರಕಾಶ ಪಾಯಪ್ಪಗೌಡ್ರ, ಶ್ರೀಕಾಂತ ಹೊಸಮನಿ, ಮುತ್ತಪ್ಪ ಮಾವಿನಕಾಯಿ, ಮಲ್ಲಪ್ಪ ಮಾರನಬಸರಿ ಸೇರಿದಂತೆ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಿಎಸ್ ಐ ಐಶ್ವರ್ಯ ನಾಗರಾಳರನ್ನೊಳಗೊಂಡAತೆ ಗಣ್ಯಮಾನ್ಯರನ್ನು ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕ ಮಹದೇವ ಬೇವಿನಕಟ್ಟಿ ನಿರೂಪಿಸಿ ವಂದಿಸಿದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು