ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.12:
ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ತಾಳ್ಮೆ, ಭಕ್ತಿ ಮತ್ತು ದಾಸೋಹ ಸಂಸ್ಕೃತಿ ಇಡೀ ಮಾನವಕುಲಕ್ಕೆ ಮಾದರಿ ಎಂದು ಶಿಕ್ಷಕ ವಿ ಎ ಕುಂಬಾರ ಹೇಳಿದರು. ಅವರು ಸಮೀಪದ ಕೋಚಲಾಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಪ್ಪ ಅರ್ಪಣೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಬಳಿಕ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶರಣರ ಜೀವನ ಚರಿತ್ರೆಯನ್ನು ಓದಿ ಸಂಸ್ಕಾರವಂತರಾಗಬೇಕು. ಮಲ್ಲಮ್ಮನವರು ಕೌಟುಂಬಿಕ ಸಂಕಷ್ಟಗಳ ನಡುವೆಯೂ ತೋರಿದ ತಾಳ್ಮೆ ಮತ್ತು ಶಿವನ ಮೇಲಿಟ್ಟಿದ್ದ ಅಚಲ ಭಕ್ತಿ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಬಳಿಕ ಮುಖ್ಯ ಶಿಕ್ಷಕಿ ಸರ್ವಮಂಗಳಾ ಕೊಟ್ಟೂರಶಟ್ಟರ ಮಾತನಾಡಿ ವಿಧ್ಯಾರ್ಥಿಗಳು ಮಲ್ಲಮ್ಮನಂತೆ ಎಂತಹ ಕಷ್ಟ ಬಂದರೂ ದೃತಿಗೆಡದೆ ತನ್ನ ಕಾಯಕ ಮತ್ತು ಭಕ್ತಿಯನ್ನು ಮುಂದುವರಿಸಬೇಕು ಹಾಗೂ ಹಸಿದವರಿಗೆ ಅನ್ನ ನೀಡುವುದು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ನಿಜವಾದ ಭಕ್ತಿ ಎಂದು ಮಲ್ಲಮ್ಮನವರು ತೋರಿಸಿಕೊಟ್ಟಿದ್ದಾರೆ. ಅವರು ಹಾಕಿದ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡೋಣ ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಇತ್ತರರು ಇದ್ದರು