Home ಜಿಲ್ಲಾ ಸುದ್ದಿಗಳುಕೂಲಿಕಾರರು ಎರಡು ಬಾರಿ ಹಾಜರಾತಿ ಕಡ್ಡಾಯವಾಗಿ ಹಾಕಿಸಿ: ಚಂದ್ರಶೇಖರ ಬಿ ಕಂದಕೂರು ಹೇಳಿಕೆ

ಕೂಲಿಕಾರರು ಎರಡು ಬಾರಿ ಹಾಜರಾತಿ ಕಡ್ಡಾಯವಾಗಿ ಹಾಕಿಸಿ: ಚಂದ್ರಶೇಖರ ಬಿ ಕಂದಕೂರು ಹೇಳಿಕೆ

ರಾಜೂರು, ಶಾಂತಗೇರಿ ಗ್ರಾ.ಪಂ.ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಭೇಟಿ, ಕಾಮಗಾರಿ ಪರಿಶೀಲನೆ

by Editor
0 comments

ಚೈತನ್ಯ ನ್ಯೂಸ್ 24 ಗಜೇಂದ್ರಗಡ: ಮೇ.13:

ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರು ಎರಡು ಬಾರಿ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಹಾಜರಾತಿ ಹಾಕಿಸದೆ ಹೋದರೆ ಕೂಲಿ ಪಾವತಿಯಾಗುವುದಿಲ್ಲ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ತಾಲೂಕಿನ ರಾಜೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿರುವ ಮೊದಲನೇ ದಿನದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎನ್.ಎಂ.ಆರ್. ನಲ್ಲಿ ಹೆಸರು ಇರುವ ಕೂಲಿಕಾರರು ಮಾತ್ರ ಕೆಲಸಕ್ಕೆ ಬನ್ನಿ ಎನ್.ಎಂ.ಆರ್. ನಲ್ಲಿ ಹೆಸರು ಇಲ್ಲ ಅಂದರೆ ಕೆಲಸಕ್ಕೆ ಬಾರಬಾರದು. ಕೂಲಿಕಾರರು ಎರಡು ಹಾಜರಾತಿ ಹಾಕುವವರೆಗೂ ಕೆಲಸದ ಸ್ಥಳದಲ್ಲಿಯೇ ಇರಬೇಕು. ಒಂದು ಹಾಜರಾತಿ ಎರಡನೇ ಹಾಜರಾತಿ ಹಾಕಿಸದಿದ್ದರೆ ನಿಮ್ಮಗೆ ಕೂಲಿ ಹಣ ಪಾವತಿಯಾಗುವುದಿಲ್ಲ. ತಮಗೆ ಕೊಟ್ಟಿರುವ ಅಳತೆಯಂತೆ ಕೆಲಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಕೆಲಸ ಸಿಗಲಿದೆ. ಆದ್ದರಿಂದ ಎಲ್ಲರೂ ಸರಿಯಾಗಿ ಕೆಲಸ ನಿರ್ವಹಿಸಿ 370 ರೂಪಾಯಿ ಕೂಲಿಮೊತ್ತ ಪಡೆಯಬೇಕು ಎಂದು ತಿಳಿಸಿದರು.
ತಾ.ಪಂ. ಗ್ರಾಮೀಣ ಉದ್ಯೋಗ ಖಾತ್ರಿಯ ಸಾಹಾಯಕ ನಿರ್ದೇಶಕರಾದ ವಿಶ್ವನಾಥ ರಾಠೋಡ ಅವರು ಮಾತನಾಡಿ, ಕೂಲಿಕಾರರು 10*10*2 ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರೂಪಾಯಿ ತಮ್ಮ ಖಾತೆಗೆ ನೇರವಾಗಿ ಪಾವತಿಯಾಗಲಿದೆ. ಕೂಲಿಕಾರರು ದಿನಕ್ಕೆ ಎರಡು ಬಾರಿ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ಒಂದು ಪೋಟೋದಲ್ಲಿದ್ದು ಎರಡನೇ ಪೋಟೋದಲ್ಲಿ ಗೈರಾಗುವ ಕೂಲಿಕಾರ ಖಾತೆಗೆ ಹಣ ಪಾವತಿಯಾಗುವುದಿಲ್ಲ. ಕೂಲಿಕಾರರು ಎರಡು ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಕೂಲಿಕಾರರು ಸರಿಯಾಗಿ ಕೆಲಸ ಮಾಡುವುದರ ಜೊತೆಗೆ ಪಂಚಾಯತ್ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು. ಕಾಯಕ ಬಂಧುಗಳು ಕೂಲಿಕಾರರಿಗೆ ಸರಿಯಾಗಿ ಅಳತೆ ಪ್ರಮಾಣ ಹಾಜರಾತಿ ಯನ್ನು ಹಾಕಿಸಬೇಕು ಎಂದು ಹೇಳಿದರು.


ನರೇಗಾ ಯೋಜನೆಯಡಿ ಕೂಲಿಕಾರರು ಬೇಸಿಗೆ ಅವಧಿಯಲ್ಲಿ ಕೂಲಿ ಕೆಲಸ ಪಡೆದುಕೊಂಡು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಯೋಜನೆಯಡಿ ಪಡೆಯುವ ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಿಗೆ ಬೀಜ ಗೊಬ್ಬರ ಖರೀದಿಗೆ ಸಹಾಯಕವಾಗುತ್ತದೆ. ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು ಎಂದು ತಿಳಿಸಿದರು.
ಬಾಕ್ಸ್..
ಕೂಲಿಕಾರರೊಂದಿಗೆ ಗುದ್ಲಿ ಹಿಡಿದ ಕಟ್ಟಿ ಕಡಿದ ಇಒ
ರಾಜೂರು ಗ್ರಾಮದಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ. ಇಒ ಚಂದ್ರಶೇಖರ ಕಂದಕೂರ ಅವರು ಕೂಲಿಕಾರರ ಜೊತೆಗೆ ಅವರು ಗುದ್ಲಿ ಹಿಡಿದು ಕಟ್ಟೆ ಕಡಿದು ಕೂಲಿಕಾರರ ಗಮನ ಸೆಳೆದರು. ಈ ವೇಳೆ ಕೂಲಿಕಾರರ ಜೊತೆಗೆ ಸಂವಾದ ನಡೆಸಿ, ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜೂರು ಗ್ರಾ.ಪಂ. ಪಿಡಿಒ ಎಸ್.ಎಸ್. ತೊಂಡಿಹಾಳ, ಶಾಂತಗೇರಿ ಗ್ರಾ.ಪಂ. ಪಿಡಿಒ ಎಸ್.ಕೆ. ಕವಡೆಲಿ, ಕಾರ್ಯದರ್ಶಿ ರಾಜು ಗಾರಗಿ, ತಾಂತ್ರಿಕ ಸಂಯೋಜಕರ ಪ್ರಕಾಶ ಮ್ಯಾಕಲ್, ಪಂಚಾಯತ್ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದಾರು

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು