Home ಜಿಲ್ಲಾ ಸುದ್ದಿಗಳುಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

by Editor
0 comments

ಚೈತನ್ಯ ನ್ಯೂಸ್ 24 ಮುಳಗುಂದ ಮೇ.23:

ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ವಿದ್ಯುತ್ ಲೈನ ಒಂದು ವಾರದಿಂದ ಪ್ರಾರಂಭ ಮಾಡದೇ ಸತಾಯಿಸಿದ ಹೆಸ್ಕಾಂ ಸಿಬ್ಬಂದಿ ವಿರುದ್ಧ ಪಟ್ಟಣ ಘಟಕದ ಹಸಿರು ಸೇನೆ ರೈತ ಸಂಘದ ಸದಸ್ಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಕಳೆದ ಕೆಲ ತಿಂಗಳಿ0ದ ಪಟ್ಟಣಕ್ಕೆ ವಿದ್ಯುತ್ ಕೊರತೆಯಾಗುತ್ತಿದ್ದು, ಬೇಕಾ ಬಿಟ್ಟಿಯಾಗಿ ವಿದ್ಯುತ್ ಕಡಿತವಾಗುತ್ತಿದೆ. ಈಗಂತೂ ಕಳೆದ ಒಂದು ವಾರದಿಂದ ಹೋದ ವಿದ್ಯುತ್ ಮರಳಿ ಬಂದಿಲ್ಲ. ರೈತರ ತೋಟದಲ್ಲಿನ ಬೆಳೆಗಳು ಒಣಗುತ್ತಿವೆ. ಹೈನುಗಾರಿಕೆಯ ದನಗಳಿಗೆ ಕುಡಿಸಲು ನೀರಿಲ್ಲ. ಮಳೆ ಗಾಳಿಯ ಸಲುವಾಗಿ ನಾವು ಕಂಬಗಳು ಬಿದ್ದಿದ್ದರಿಂದ ಇಲ್ಲಿಯವರೆಗೆ ನಾವು ಹೇಗೋ ನಿಭಾಯಿಸಿದ್ದೇವೆ ಆದರೆ ಸುಮ್ಮನೆ ಕುಳಿತ ನಮ್ಮನ್ನು ಕಡೆಗಣಿಸುತ್ತಿದ್ದಾರೆ.
ಕಂಬದಲ್ಲಿನ ಒಂದು ಕಪ್ ಹೋಗಿ ತಿಂಗಳುಗಳಾಗಿವೆ. ಒಂದು ಕಪ್ ಹಾಕಲಾರದಷ್ಟು ಇಲಾಖೆ ಬಡವಾಯಿತೇ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ರೈತರು ಮುಂದಿಟ್ಟರು.
ನಂತರ ಸ್ಥಳಕ್ಕಾಗಮಿಸಿದ ಎಇಇ ನಾಗರಾಜ ಕುರಿಯವರನ್ನು ಸಹ ರೈತರು ತರಾಟೆಗೆ ತಗೆದುಕೊಂಡರು. ನಂತರ ಸಮಜಾಯಿಸಿ ಹೇಳಿದ ಇಂಜನೀಯರ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ರೈತರ ಸಮಸ್ಯೆಗಳನ್ನು ಸಿಬ್ಬಂದಿಯಿ0ದ ಪಟ್ಟಿ ಮಾಡಿಸಿ ಒಂದು ವಾರದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಕಿರಣ ಬಟ್ಟೂರ, ಮಲ್ಲಪ್ಪ ಹೊಸಕಟ್ಟಿ, ಪ್ರಭು ಲದ್ದಿ, ವಿಜಯ ಹುಲಕೋಟಿ, ಕುಮಾರ ಬಟ್ಟೂರ ಇತರರು ಇದ್ದರು.
ಬಾಕ್ಸ:
ಕೆಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ ಇನ್ನೂ ಕೆಲ ಸಮಸ್ಯೆಗಳು ಬಂದಿಲ್ಲ. ಅವುಗಳನ್ನು ಒಂದು ವಾರದಲ್ಲಿ ಬಗೆಹರಿಸುತ್ತೇವೆ. ಯಾವದೇ ಸಮಸ್ಯೆ ಇದ್ದರೂ ನೇರವಾಗಿ ಮಾತನಾಡಿ ತಿಳಿಸಿ ಹೇಳಿ ನಾನು ಬಗೆ ಹರಿಸುತ್ತೇನೆ.
-ನಾಗರಾಜ ಕುರಿ ಎಇಇ ಹೆಸ್ಕಾಂ ಗದಗ.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು