Home ಜಿಲ್ಲಾ ಸುದ್ದಿಗಳುಸಹೃದಯಿ ಚನ್ನು ಪಾಟೀಲರ ಸಂಸ್ಮರಣೋತ್ಸವ ಜೂ. ೧೯ರಂದು

ಸಹೃದಯಿ ಚನ್ನು ಪಾಟೀಲರ ಸಂಸ್ಮರಣೋತ್ಸವ ಜೂ. ೧೯ರಂದು

by Editor
0 comments

ಚೈತನ್ಯ ನ್ಯೂಸ್‌ 24 ಜೂ.19:

ಸಹೃದಯಿ, ಸಜ್ಜನ ರಾಜಕಾರಣಿ ಚನ್ನು ಪಾಟೀಲರ ಸಂಸ್ಮರಣೋತ್ಸವ ಮತ್ತು ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್‌ದ ೫ನೇ ವಾರ್ಷಿಕೋತ್ಸವವು ನಾಳೆ ಜೂನ್ ೧೯ರಂದು ಸಮೀಪದ ಸೂಡಿಯ ಶ್ರೀ ಅನ್ನದಾನೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥಾಪಕ ಉಮೇಶ ಪಾಟೀಲ ತಿಳಿಸಿದರು.
ಪಟ್ಟಣದ ಆನಂದ ಕೊಟಗಿಯವರ ಮನೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿವರಗಳನ್ನು ನೀಡಿದರು.
ಸಂಸ್ಮರಣೋತ್ಸವದೊAದಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವೂ ಜರುಗಲಿದ್ದು, ಕುದರಿಮೋತಿಯ ಶ್ರೀ ವಿಜಯಮಹಾಂತೇಶ್ವರ ಸ್ವಾಮೀಜಿ ಪಾವನ ಸಾನಿಧ್ಯ ವಹಿಸಲಿದ್ದಾರೆ.   ದಿವ್ಯಸಾನಿಧ್ಯವನ್ನು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ರೋಣದ ಶ್ರೀ ಗುರುಪಾದ ಸ್ವಾಮೀಜಿ, ಜಿಗೇರಿಯ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ರೋಣದ ಡಾ. ವಿಶ್ವನಾಥ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಮಾಜಿಮುಖ್ಯಮ0ತ್ರಿ ಬಸವರಾಜ ಬೊಮ್ಮಾಯಿ ಸಮಾರಂಭವನ್ನು ಉದ್ಘಾಟಿಸಲಿದ್ದು, ನರಗುಂದ ಶಾಸಕ, ಮಾಜಿ ಸಚಿವ ಸಿ. ಸಿ. ಪಾಟೀಲ ಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಸಚಿವ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್. ವಿ. ಸಂಕನೂರ, ಕೂಡಲಸಂಗಮದ ಜಿ. ಜಿ. ಪಾಟೀಲ, ನಿವೃತ್ತ ಅಧಿಕಾರಿ ಗಂಗಾಧರ ಅಡಗತ್ತಿ, ಹುಬ್ಬಳ್ಳಿಯ ಮಲ್ಲಿಕಾರ್ಜುನ ಬಾಳಿಕಾಯಿ, ನಿವೃತ್ತ ಮುಖ್ಯೋಪಾಧ್ಯಾಯ ಸಿ. ವಿ. ವಂಕಲಕು0ಟಿ, ನಿವೃತ್ತ ಶಿಕ್ಷಕ ಎಸ್. ಎಲ್. ಹಂಚಿನಾಳ, ನಿವೃತ್ತ ಶಿಕ್ಷಕ ಸಿ. ಆರ್. ಗುದಗಿ, ಕೊಪ್ಪಳ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ, ಪ್ರವಚನಕಾರ ಕಲ್ಲಿನಾಥಶಾಸ್ತಿçಗಳು ಹಿರೆಅಳಗುಂಡಿಯ ಸಂಗಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಜಿಪಂ ಮಾಜಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ವಹಿಸಲಿದ್ದಾರೆ ಎಂದು ಉಮೇಶ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ದೊಡ್ಡೂರು, ವೀರಣ್ಣ ಗುಜಮಾಗಡಿ, ಆನಂದ ಕೊಟಗಿ, ವಿನಾಯಕ ಹೊಸಮನಿ, ಅರುಣಕುಮಾರ ಮಠದ, ರವಿ ಕೋನನ್ನವರ ಇನ್ನಿತರರಿದ್ದರು.

You may also like

Leave a Comment

ಗ್ಯಾರಂಟಿ ಪರಿಷ್ಕರಣೆಗೆ ಮುಂದಾಗಿರುವುದು ಒಳ್ಳೆಯ ನಿರ್ಧಾರ :  ಶ್ರೀ ರಂಭಾಪುರಿ ಜಗದ್ಗುರುಗಳು   ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾ ಕಿರಣ: ಶ್ರೀ ರಂಭಾಪುರಿ ಜಗದ್ಗುರುಗಳು   ಸಹೃದಯಿ ಚನ್ನು ಪಾಟೀಲರ ಸಂಸ್ಮರಣೋತ್ಸವ ಜೂ. ೧೯ರಂದು   ಶ್ರೀ ದತ್ತ ದೇವಸ್ಥಾನದಲ್ಲಿ ಅಧಿಕ ಮಾಸದ ಭಜನೆ ಸಂಪನ್ನ   ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ