Home Uncategorizedಜೈಂಟ್ ವ್ಹೀಲ್ ಮುರಿದು ಬಿದ್ದು 22 ಜನರಿಗೆ ಗಾಯ, ಇಬರು ಗಂಭೀರ:

ಜೈಂಟ್ ವ್ಹೀಲ್ ಮುರಿದು ಬಿದ್ದು 22 ಜನರಿಗೆ ಗಾಯ, ಇಬರು ಗಂಭೀರ:

ಗದುಗಿನ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ

by Editor
0 comments

ಚೈತನ್ಯ ನ್ಯೂಸ್ 24  ಗದಗ ಮೇ.4:

ಐತಿಹಾಸಿಕ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಅಳವಡಿ ಸಲಾಗಿದ್ದ ಜೈಂಟ್ ವೀಲ್ ಮುರಿದುಬಿದ್ದು ಮಗು ಸೇರಿದಂತೆ 22ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬ್ರೇಕ್ ಡ್ಯಾನ್ಸ್ ಹೆಸರಿನ ಜೈಂಟ್ ವೀಲ್ ನಲ್ಲಿ ಹಲವರು ಆಟವಾಡುತ್ತಿದ್ದರು. ಸಾವಿರಾರು ಜನರು ವೀಕ್ಷಣೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಯಿತು. ಈ ಬೃಹತ್ ಆಟಿಕೆ ಯಂತ್ರವೊಂದು ತಾಂತ್ರಿಕ ದೋಷದಿಂದ ಮುರಿದು ಬಿದ್ದ ಪರಿಣಾಮ ಅದರಲ್ಲಿ ಆಟವಾಡುತ್ತಿದ್ದವರಲ್ಲಿ 22ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ತೀರಾ ಗಂಭೀರ ವಾಗಿದೆ. ತಕ್ಷಣವೇ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಈ ರೀತಿಯ ಬೃಹತ್ ಆಟಿಕೆಗಳ ಅಳವಡಿಕೆಗೆ ಅವಕಾಶ ಕೊಟ್ಟಿದ್ದನ್ನು ಖಂಡಿಸಿ, ಸ್ಥಳೀಯರು ಮಠದ ಮುಂದೆಯೇ ಪ್ರತಿಭಟನೆ ನಡೆಸಿದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು