Home ಕರ್ನಾಟಕಶ್ರೀ ಅನ್ನದಾನೇಶ್ವರ ಪ ಪೂ ಮಹಾವಿದ್ಯಾಲಯದ ದಾಖಲೆಯ ಫಲಿತಾಂಶ: 

ಶ್ರೀ ಅನ್ನದಾನೇಶ್ವರ ಪ ಪೂ ಮಹಾವಿದ್ಯಾಲಯದ ದಾಖಲೆಯ ಫಲಿತಾಂಶ: 

by Editor
0 comments
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.4:
ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ೨೦೨೫-೨೬ ಸಾಲಿನ ಫಲಿತಾಂಶವು ಶೇ. ೯೮.೭೧% ದೊರಕಿದ್ದು. ಕಲಾ ವಿಭಾಗದಲ್ಲಿ ಹುಲಿಗೆಮ್ಮ ೬೦೦ ಕ್ಕೆ ೫೮೯ ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದರೆ ವಾಣಿಜ್ಯ ವಿಭಾಗದಲ್ಲಿ ಸಹನಾ ೬೦೦ಕ್ಕೆ ೫೮೦ ಹಾಗೂ ವಿಜ್ಞಾನ ವಿಭಾಗದಲ್ಲಿ ಜ್ಯೋತಿ ೬೦೦ಕ್ಕೆ ೫೮೩ ಅಂಪದೊAದಿಗೆ ವಿಭಾಗವಾರು ಪ್ರಥಮಿಗರಾಗಿ ಹೊರಹೊಮ್ಮೊದ್ದಾರೆ
ಮಹಾವಿದ್ಯಾಲಯದಲ್ಲಿ ಒಟ್ಟು ೧೦೧೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ ೯೯೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೧೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಮಹಾವಿದ್ಯಾಲಯದ ಒಟ್ಟು ಫಲಿತಾಂಶವು ಶೇ. ೯೮.೭೧% ರಷ್ಟಾಗಿದೆ. ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ ೩೬೧ ವಿದ್ಯಾರ್ಥಿಗಳು ತೇರ್ಗಡೆಹೊಂದಿದರೆ, ಪ್ರಥಮ ಶ್ರೇಣಿಯಲ್ಲಿ ೫೬೬ ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ ೬೫ ವಿದ್ಯಾರ್ಥಿಗಳು, ತೃತೀಯ ಶ್ರೇಣಿಯಲ್ಲಿ ೦೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶ ಈ ಕೆಳಗಿನಂತಿದೆ.
ಕಲಾವಿಭಾಗ: ಕಲಾವಿಭಾಗದಿಂದ ಪರೀಕ್ಷೆಗೆ ಒಟ್ಟು ೨೭೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೨೬೪ ವಿದ್ಯಾರ್ತಿಗಳು ಉತ್ತೀರ್ಣರಾಗಿ ೯ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಕಲಾವಿಭಾಗದ ಒಟ್ಟು ಫಲಿತಾಂಶ ೯೬.೦೭ ಆಗಿದೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಒಟ್ಟು ೨೧೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೨೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕೇವಲ ಓರ್ವ ವಿದ್ಯಾರ್ಥಿ ಮಾತ್ರ ಅನುತ್ತೀರ್ಣನಾಗುವ ಮೂಲಕ ೧೦೦ ಪ್ರತಿಶತ ಫಲಿತಾಂಶ ಕೈತಪ್ಪಿದೆ ಇದರಿಂದ ವಾಣಿಜ್ಯ ವಿಭಾಗದ ವಿಭಾಗದ ಒಟ್ಟು ಫಲಿತಾಂಶ ೯೯.೫೩ ಆಗಿದೆ.
ವಿಜ್ನಾನ ವಿಭಾಗ: ವಿಜ್ನಾನ ವಿಭಾಗದಿಂದ ಪರೀಕ್ಷೆಗೆ ಒಟ್ಟು ೫೨೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೫೨೧ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಇದರಿಂದ ವಿಜ್ನಾನ ವಿಭಾಗದ ಒಟ್ಟು ಫಲಿತಾಂಶ ೯೯.೪೩ ಆಗಿದೆ
ಮಹಾವಿದ್ಯಾಲಯದ ಒಟ್ಟು ಫಲಿತಾಂಶ: ೯೮.೭೧%
ವಿಭಾಗವಾರು ಪ್ರಶಸ್ತಿ ಸಹಿತ ಪ್ರಥಮ ಸ್ಥಾನ ಪಡೆದ ಮೊದಲ ಮೂರು ವಿದ್ಯಾರ್ಥಿಗಳು
ಕಲಾ ವಿಭಾಗ : ೧) ಹುಲಿಗೆಮ್ಮ (೫೮೯/೬೦೦) ಶೇ. ೯೮.೧೬
೨) ಭೀಮವ್ವ ಜೋಗಿನ್ (೫೭೮/೬೦೦) ಶೇ. ೯೬.೩೩
೩) ವಂದನಾ ತೊಂಡಿಹಾಳ್ (೫೭೪/೬೦೦) ಶೇ. ೯೫.೬೬
ವಾಣಿಜ್ಯ ವಿಭಾಗ :
೧) ಸಹನಾ (೫೮೦/೬೦೦) ಶೇ.೯೬.೬೬
೨) ಪ್ರಶಾಂತ  (೫೭೭/೬೦೦) ಶೇ.೯೬.೧೬
೨) ಮಂಜುನಾಥ ತಾಳಿಕೋಟಿ (೫೭೭/೬೦೦ ಶೇ. ೯೬.೧೬
೩) ಶ್ರೇಯಾ ಯಲ್ಲಪ್ಪ ಕನಾಜ (೫೭೫/೬೦೦ ಶೇ. ೯೫.೮೩
ವಿಜ್ಞಾನ ವಿಭಾಗ:
೧) ಜ್ಯೋತಿ (೫೮೩/೬೦೦) ಶೇ ೯೭.೧೬
೨) ಐಶ್ವರ್ಯ ಗೋಸಗೊಂಡ (೫೮೨/೬೦೦) ಶೇ. ೯೭
೩) ವೀರೆಶ ಅಂಗಡಿ (೫೭೯/೬೦೦) ಶೇ. ೯೬.೫೦
೨೦೨೬ ರ ಫೆಬ್ರುವರಿ/ಮಾರ್ಚ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಷಯವಾರು ಫಲಿತಾಂಶದ ವಿವರ
ಕನ್ನಡ ವಿಷಯಕ್ಕೆ ೯೨೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೯೨೮ ವಿದ್ಯಾರ್ಥಿಗಳು ತೇರ್ಗಡೆಹೊಂದುವ ಮೂಲಕ ೧೦೦ ರಷ್ಟು ಫಲಿತಾಂಶ ಮಾಡಿದೆ, ಇಂಗ್ಲೀಷ ವಿಷಯಕ್ಕೆ ೧೦೧೦ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ ೧೦೦೨ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು ೮ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, ಹಿಂದಿ ವಿಷಯದಲ್ಲಿ ೮೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೮೨ ವಿದ್ಯಾರ್ಥಿಗಳು ತೇರ್ಗಡೆಹೊಂದುವ ಮೂಲಕ ೧೦೦ ರಷ್ಟು ಫಲಿತಾಂಶ ಪಡೆದಿದ್ದಾರೆ. ಇತಿಹಾಸ ವಿಷಯದಲ್ಲಿ ೪೦೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೪೦೦ ವಿದ್ಯಾರ್ಥಿಗಳು ತೇರ್ಗಡೆಹೊಂದುವ ಮೂಲಕ ೧೦೦ ರಷ್ಟು ಫಲಿತಾಂಶ ಪಡೆದಿದ್ದಾರೆ, ಅರ್ಥಶಾಸ್ತçದಲ್ಲಿ ೪೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೪೮೩ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ ೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, ಭುಗೋಳಶಾಸ್ತç ವಿಷಯದಲ್ಲಿ ೧೬೧ಕ್ಕೆ ೧೬೧ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು ಶೆ.೧೦೦ ರಷ್ಟು ಫಲಿತಾಂಶ ಹೊಂದಿದ್ದಾರೆ. ವ್ಯವಹಾರ ವಿಷಯದಲ್ಲಿ ೨೧೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೨೧೩ ವಿದ್ಯಾರ್ಥಿಗಳು ತೇರ್ಗಡೆಹೊಂದುವ ಮೂಲಕ ೧೦೦ ರಷ್ಟು ಫಲಿತಾಂಶ ಮಾಡಿದ್ದಾರೆ ಸಮಾಜಶಾಸ್ತçದಲ್ಲಿ ೧೧೨ಕ್ಕೆ ೧೧೨ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ರಾಜ್ಯಶಾಸ್ತçದಲ್ಲಿ ೨೧೮ಕ್ಕೆ ೨೧೮ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ, ಲೆಕ್ಕಶಾಸ್ತçದಲ್ಲಿ ೨೧೩ಕ್ಕೆ ೨೧೩ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ,  ಭೌತಶಾಸ್ತçದಲ್ಲಿ ೫೨೪ಕ್ಕೆ ೫೨೩ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದರೆ ಓರ್ವ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ, ರಸಾಯನ ಶಾಸ್ತçದಲ್ಲಿ ೫೨೪ಕ್ಕೆ ೫೨೩ , ಗಣೀತ ಶಾಸ್ತçದಲ್ಲಿ ೫೨೪ಕ್ಕೆ ೫೨೩, ಜೀವಶಾಸ್ತçದಲ್ಲಿ ೫೨೪ಕ್ಕೆ ೫೨೪, ಗಣಕ ವಿಜ್ನಾನದಲ್ಲಿ ೮೬ಕ್ಕೆ ೮೬,ಹಾಗೂ ಶಿಕ್ಷಣಶಾಸ್ತçದಲ್ಲಿ ೫೫ಕ್ಕೆ ೫೫ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ
 ಒಟ್ಟಾರೆ ಮಹಾವಿದ್ಯಾಲಯದಲ್ಲಿ ಪರೀಕ್ಷೆಗೆ ಹಾಜರಾದ ೧೦೧೦ ವಿದ್ಯಾರ್ಥಿಗಳಲ್ಲಿ ೯೯೭ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಗ್ರಾಮೀಣ ಭಾಗದ ಕಾಲೇಜು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು