ಚೈತನ್ಯ ನ್ಯೂಸ್ ೨೪ ಬಾಳೆಹೊನ್ನೂರು ಜೂ.೬:
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೬-ಜೂನ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತೆ ಇರುತ್ತದೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ತಿಳಿಸಿದ್ದಾರೆ.
ದಿನಾಂಕ ೬ರಂದು ಕುಂದಗೋಳ ತಾಲೂಕ ತರ್ಲಘಟ್ಟದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೋಪುರ ಕಳಸಾರೋಹಣ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೭ ಮತ್ತು ೮ರಂದು ಹುಬ್ಬಳ್ಳಿ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ದಿನಾಂಕ ೧೦ರಂದು ಶಿವಮೊಗ್ಗ ಜಿಲ್ಲೆ ಸೂಗೂರಿನಲ್ಲಿ ಶ್ರೀ ಪಟ್ಟದ ಬಸವೇಶ್ವರ ಮಂಡಲ ಪೂಜಾ ಧರ್ಮ ಸಮಾರಂಭ, ೧೧ರಂದು ಭದ್ರಾವತಿ ತಾಲೂಕ ಎಡೇಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜಾ-ಸಭೆ ನಡೆಸುವರು. ದಿನಾಂಕ ೧೪ ಮತ್ತು ೧೫ರಂದು ಮಹಾರಾಷ್ಟçದ ಸೋಲ್ಲಾಪುರದಲ್ಲಿ ಶ್ರೀ ಕಾಶೀ ಜಗದ್ಗುರುಗಳ ಅಧಿಕ ಮಾಸದ ಪೂಜಾನುಷ್ಠಾನ ಮಂಗಲ ಸಮಾರಂಭ, ೨೧ರಂದು ಕೊರಟಗೆರೆ ತಾಲೂಕ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಧರ್ಮ ಜಾಗೃತಿ ಸಮಾರಂಭ, ೨೩ರಂದು ಗುಬ್ಬಿ ತಾಲೂಕ ನಿಟ್ಟೂರಿನಲ್ಲಿ ಇಷ್ಟಲಿಂಗ ಮಹಾಪೂಜಾ, ೨೭ರಂದು ರಾಮನಗರ ಜಿಲ್ಲೆ ಅವ್ವೇರಹಳ್ಳಿ ರೇವಣಸಿದ್ಧೇಶ್ವರ ಬೆಟ್ಟದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೨೯ರಂದು ಪೌರ್ಣಿಮೆಯ ನಿಮಿತ್ಯ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು.
ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಧರ್ಮಾಭಿಮಾನಿಗಳು ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.