ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.13:
ಮೇ ೧೦ರಿಂದ ೧೨ರವರೆಗೆ ನಡೆದ ರಹಿಮಾನ್ ಶ್ಯಾವಲಿಯವರ ವಿಜೃಂಭಣೆಯ ಉರುಸು ಇಂದು ಸಂಜೆ ಸಂಭ್ರಮದ ತೆರೆ ಕಂಡಿತು. ನರೇಗಲ್ಲ ಸುತ್ತಲಿನ ಗ್ರಾಮಗಳಲ್ಲದೆ ನೆರೆಯ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತರು ಈ ಉರುಸಿನಲ್ಲಿ ಪಾಲ್ಗೊಂಡು ರಹಿಮಾನ್ ಶಾವಲಿ ಅಜ್ಜನವರ ಗದ್ದುಗೆಯ ಮತ್ತು ಹಜರತ್ ಮಂಜೂರ ಹುಸೇನ್ ಶಾವಲಿಯವರ ದರ್ಶನಾಶೀರ್ವಾದ ಪಡೆದುಕೊಂಡು ಧನ್ಯರಾದರು.
ಮೇ. ೧೦ ರಂದು ಸಂಜೆ ೬ ಗಂಟೆಗೆ ಕೋಚಲಾಪೂರ ಗ್ರಾಮದಿಂದ ಲಕ್ಷಿö್ಮದೇವಿಯ ಪಲ್ಲಕ್ಕಿ ಹಾಗೂ ಗಂಧದ ಮೆರವಣಿಗೆ ಹೊರಡುವ ಮೂಲಕ ಉರುಸಿಗೆ ವಿದ್ಯುಕ್ತ ಚಾಲನೆ ದೊರಕಿತು. ಡೊಳ್ಳು, ಕರಡಿ ಮಜಲು ಮತ್ತು ಇತರೆ ವಾದ್ಯ ವೃಂದದ ಮೂಲಕ ಬಂದ ಲಕ್ಷö್ಮಮ್ಮನ ಮೆರವಣಿಗೆಯು ಭಕ್ತರ ಕಣ್ಮನಗಳನ್ನು ತಣಿಸಿತು.
ಮೇ. ೧೧ರಂದು ಬೆಳಗ್ಗೆ ೬ ರಿಂದ ೧೦ರವರೆಗೆ ಸಾಧು-ಸಂತರಿಗೆ ಅನ್ನಸಂತರ್ಪಣೆ ಜರುಗಿತು. ಸಂಜೆ ನಡೆದ ಹಜರತ್ ಮಂಜೂರ ಹುಸೇನ್ ಶಾವಲಿಯವರ ಭವ್ಯ ಮೆರವಣಿಗೆಯು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಭಕ್ತರ ಹೃನ್ಮನಗಳಿಗೆ ತಂಪನ್ನೆರೆಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಭಕ್ತರು ಶಿಸ್ತಿನಿಂದ ಸಾಲಾಗಿ ನಿಂತು ಶ್ರೀಗಳವರ ದರ್ಶನಾಶೀರ್ವಾದವನ್ನು ಪಡೆದು ಪುನೀತರಾದರು. ದರಗಾದಿಂದ ಹೊರಟ ಮೆರವಣಿಗೆಯು ಹಳೆ ಬಜಾರ್ ಮೂಲಕ ಶ್ರೀ ಗಣೇಶ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಕೊಂತಿ ಮಲ್ಲಪ್ಪನ ದೇವಸ್ಥಾನ, ಮುಖ್ಯ ರಸ್ತೆ, ಹೊಸ ಬಸ್ ನಿಲ್ದಾಣದ ಮೂಲಕ ಮತ್ತೆ ಮುಖ್ಯ ರಸ್ತೆಯಲ್ಲಿ ಸಾಗಿ ಹಳೆ ಬಸ್ ನಿಲ್ದಾಣದ ಮೂಲಕ ಮರಳಿ ದರಗಾಕ್ಕೆ ಬಂದು ತಲುಪಿದಾಗ ಭಕ್ತರು ಹರ್ಷೋದ್ಘಾರದ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಉರುಸಿನ ನಿಮಿತ್ಯ ಶ್ರೀ ಕಟ್ಟಿಬಸವೇಶ್ವರ ನಾಟ್ಯ ಸಂಘದವರು ಅಭಿನಯಿಸಿದ ಧರ್ಮದ ನುಡಿ ಬೆಂಕಿಯ ಕಿಡಿ ನಾಟಕವನ್ನೂ ಆಶೀರ್ವದಿಸಿದ ಶ್ರೀಗಳವರು ನರೇಗಲ್ಲ ಪಟ್ಟಣದಲ್ಲಿನ ಹಿಂದೂ-ಮುಸ್ಲಿ0 ಭಾವೈಕ್ಯತೆ ಇತರರಿಗೆ ಮಾದರಿಯಾಗಿದೆ. ಇದು ಅನುಗಾಲವೂ ಹೀಗೆಯೆ ನಡೆಯಲಿ ಎಂದು ಹಾರೈಸಿದರು.
ನಂತರ ಜರುಗಿದ ದೀಪೋತ್ಸವ ಮತ್ತು ಮದ್ದು ಸುಡುವ ಕಾರ್ಯಕ್ರಮ ಭಕ್ತರಿಗೆ ಭರಪೂರ ಮನರಂಜನೆ ನೀಡಿತು. ಇಂದು ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಮರಿ ಉರುಸು ಜರುಗುವುದರೊಂದಿಗೆ ಈ ವರ್ಷದ ವಿಜೃಂಭಣೆಯ ಉರುಸು ಸಂಭ್ರಮದ ತೆರೆ ಕಂಡಿತು.
ಫೋಟೋ ಶೀರ್ಷಿಕೆ
13-ಎನ್‌ಆರ್‌ಜಿಎಲ್2-ಸೋಮವಾರ ಸಂಜೆ ದರಗಾದ ಶ್ರೀ ಮಂಜೂರ ಹುಸೇನ್ ಶಾವಲಿ ಅಜ್ಜನವರ ಮೆರವಣಿಗೆಯು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿAದ ಜರುಗಿತು.
ವಿಜೃಂಭಣೆಯ ಉರುಸಿಗೆ ಸಂಭ್ರಮದ ತೆರೆ; ಭಕ್ತರ ಮನ ಸೆಳೆದ ಮೆರವಣಿಗೆ
146
previous post