ಚೈತನ್ಯ ನ್ಯೂಸ್ 24, ಶಿವಮೊಗ್ಗ ಮೇ.14:
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ. ಶಿವಮೊಗ್ಗ ನಗರದ ಇತಿಹಾಸ ಬೆಳೆದುಕೊಂಡ ಬಂದ ಪರಂಪರೆ ಅತ್ಯಂತ ಅಪೂರ್ವವಾದ್ದು. ಜಿಲ್ಲೆಯಾದ್ಯಂತ ಅನೇಕ ಆಚಾರ್ಯ ಪುರುಷರು ಶಿವಶರಣರು ಸಂಜನಿಸಿ ಆಧ್ಯಾತ್ಮಿಕ ಸಂಪತ್ತನ್ನು ಹೆಚ್ಚಿಸಿದಂಥ ಪವಿತ್ರ ನಾಡು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು. ನಗರದ ಅರಕೆರೆಯ ಶ್ರೀ ರಂಭಾಪುರೀಶ್ವರ ನಿವಾಸದಲ್ಲಿ ಮಾಧ್ಯಮದವರ ಜೊತೆಗೆ ಅವರು ಮಾತನಾಡುತ್ತಿದ್ದರು.
೩೪ ವರ್ಷಗಳ ಹಿಂದೆ ವೀರಶೈವ ಧರ್ಮ ಪರಂಪರೆಯಲ್ಲಿ ಬಂದAಥ ಅಂದಿನ ಎಲ್ಲ ಜಗದ್ಗುರುಗಳನ್ನು ಬರಮಾಡಿಕೊಂಡು ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಧರ್ಮ ಸಮಾರಂಭ ನಡೆದಿತ್ತು. ಅಂದಿನ ಆ ಸಮಾರಂಭದಲ್ಲಿ ಅಂದೂ ಕೂಡ ನಾವು ಪಾಲ್ಗೊಂಡು ಭಕ್ತ ಸಮುದಾಯಕ್ಕೆ ಶುಭವನ್ನು ಹಾರೈಸಿದ್ದೆವು. ೩೪ ವರ್ಷಗಳ ನಂತರ ಮತ್ತೊಮ್ಮೆ ಈ ನಗರದಲ್ಲಿ ಮೇ ೧೭ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯವಾದಂಥ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬೃಹತ್ ಧಾರ್ಮಿಕ ಸಮ್ಮೇಳನ ಹಮ್ಮಿಕೊಂಡಿರುವುದು ಈ ನಗರದ ಎಲ್ಲ ಭಕ್ತರ ಸದ್ಭಕ್ತಿ ಪೀಠಗಳ ಮೇಲಿಟ್ಟಿರುವಂಥ ಅಭಿಮಾನವೇ ಇದಕ್ಕದೆಲ್ಲ ಕಾರಣ. ಶಿವಮೊಗ್ಗ ನಗರಕ್ಕೂ ರಂಭಾಪುರಿ ಪೀಠಕ್ಕೂ ಅತ್ಯಂತ ನಿಕಟ ಸಂಬAಧವಿದೆ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ನಗರದ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಕಾರ ಹಾಕಿ ಆಶೀರ್ವಾದ ಮಾಡಿದ ನೆನಪು ಈ ನಗರದ ಜನತೆ ಮರೆತಿಲ್ಲ. ಇಂದು ಅದೇ ಪರಂಪರೆಯಲ್ಲಿ ಬಂದ0ತಹ ಪ್ರಸ್ತುತ ಜಗದ್ಗುರುಗಳ ಐತಿಹಾಸಿಕವಾದಂಥ ದಸರಾ ಧರ್ಮ ಸಮ್ಮೇಳನ ಇಲ್ಲಿ ನಡೆದಿರುವಂತಹದು ಒಂದು ದಾಖಲೆ ನಿರ್ಮಿಸಿದೆ. ಇಂದು ಸಮಾನ ಪೀಠಗಳಾದಂತಹ ಶ್ರೀ ಉಜ್ಜಯಿನಿ, ಶ್ರೀ ಹಿಮತ್ಕೇದಾರ, ಶ್ರೀ ಶ್ರೀಶೈಲ, ಶ್ರೀ ಕಾಶೀ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸುವ ಸತ್ಯ ಸಂಕಲ್ಪ ಕೈಗೊಂಡಿರುವುದು ಶಿವಮೊಗ್ಗ ನಗರದ ಜನತೆಗೆ ಅಷ್ಟೇ ಅಲ್ಲ ರಾಜ್ಯದ ಎಲ್ಲ ಜನತೆಗೆ ಅತ್ಯಂತ ಸಂತೋಷ ಉಂಟು ಮಾಡಿದೆ.

ಇದೇ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ೫೦ ವರ್ಷಗಳನ್ನು ಪೂರೈಸಿದಂಥ ರೈತಪರ ಹೋರಾಟಗಾರರಾದ ಮೇಲಾಗಿ ಪುರಸಭಾ ಸದಸ್ಯತ್ವದಿಂದ ಹಿಡಿದು ರಾಜ್ಯದ ಪ್ರಭಾವಿ ಮುಖ್ಯಮಂತ್ರಿಯಾಗಿ ಯಾರೂ ಮಾಡದಂಥ ಅದ್ಭುತ ಕಾರ್ಯಗಳನ್ನು ಮಾಡಿರುವ ಮಾಜಿ ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಕೃತಜ್ಞತಾ ಸಮಾರಂಭ ಹಮ್ಮಿಕೊಂಡುರುವುದೂ ಕೂಡಾ ಸ್ತುತ್ಯವಾದ ಕಾರ್ಯವಾಗಿದೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯ ಮಂತ್ರಿಯಾಗಿ ಇಡೀ ಅಖಂಡ ಕರ್ನಾಟಕದ ಬೆಳವಣಿಗೆಗೆ ಶ್ರಮಿಸಿದವರು. ಭಾಗ್ಯಲಕ್ಷಿö್ಮ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯ ಮಾಡಿ ಜನಮನವನ್ನು ಗೆದ್ದವರು. ವಿಶೇಷವಾಗಿ ಶಿವಮೊಗ್ಗ ನಗರಕ್ಕೆ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ ಬಹಳಷ್ಟು ದೊಡ್ಡದು. ಅವರನ್ನು ಎಷ್ಟು ಸ್ಮರಿಸಿದರೂ ಕೂಡಾ ಬಹಳ ಕಡಿಮೆಯೇ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ನಮ್ಮೆಲ್ಲರ ಕಣ್ಣಿಗೆ ಕಾಣುತ್ತವೆ. ಅಂಥ ಮಹನೀಯರಿಗೆ ಕೃತಜ್ಞತಾ ಸಮಾರಂಭ ಹಮ್ಮಿಕೊಂಡಿರುವುದು ಒಂದು ಮಹತ್ವದ ಕಾರ್ಯಕ್ರಮವಾಗಿದೆ.

ಇದರ ಹಿಂದಿನ ದಿನ ಈ ನಗರದಲ್ಲಿ ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ನಡೆಯುತ್ತಿರುವುದು ಯೋಗಾಯೋಗ. ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘ ಅತ್ಯಂತ ಅಲ್ಪ ಆದಾಯದಿಂದ ಪ್ರಾರಂಭಗೊAಡು ಇಂದು ಬಹು ದೊಡ್ಡ ಪ್ರಮಾಣದಲ್ಲಿ ಈ ಸಂಸ್ಥೆ ಬೆಳೆದಿರುವುದಕ್ಕೆ ಆಯಾ ಕಾಲ ಘಟ್ಟಗಳಲ್ಲಿ ಆ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಜನತೆಗೆ ಒಳ್ಳೆಯ ಸೇವೆಯನ್ನು ಕೊಟ್ಟಿದ್ದಾರೆ. ನೂರು ವರುಷ ತುಂಬಿರುವ ಸಂದರ್ಭದಲ್ಲಿ ಶ್ರೀ ರಂಭಾಪುರಿ ಶ್ರೀ ಕಾಶೀ ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದೇವೆ. ಈ ಎರಡೂ ಅಭೂತಪೂರ್ವ ಸಮಾರಂಭದಲ್ಲಿ ನಾಡಿನಾದ್ಯಂತ ಜನ ಹರಿದು ಬರುವ ಸನ್ನಿವೇಶ ಇದೆ.
ಒಟ್ಟಾರೆ ಈ ಕಾರ್ಯಕ್ರಮ ಹೊಸ ಮನ್ವಂತರವನ್ನು ಸೃಷ್ಟಿ ಮಾಡುವುದಷ್ಟೇ ಅಲ್ಲ ವೀರಶೈವ-ಲಿಂಗಾಯತ ಧರ್ಮದ ಸಂಘಟನೆ ಆಗಬೇಕೆನ್ನುವುದು ಜಗದ್ಗುರುಗಳ ಸದಿಚ್ಛೆಯಾಗಿದೆ. ವೀರಶೈವ ಧರ್ಮ ಜಾತಿ ಜಾತಿಗಳಾಗಿ ಹಂಚಿ ಹೋಗುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಒಳ ಜಾತಿಗಳು ಒಂದಾಗಿ ಚೆಂದಾಗಿ ಧರ್ಮದ ಮೂಲ ವಾಹಿನಿಯಲ್ಲಿ ಸಾಗಬೇಕೆನ್ನುವುದು ಪೀಠಾಚಾರ್ಯರ ಸದಾಶಯವಾಗಿದೆ. ಆ ನಿಟ್ಟಿನಲ್ಲಿ ಶಿವಮೊಗ್ಗ ನಗರದ ಎಲ್ಲ ಪ್ರತಿನಿಧಿಗಳು ಮತ್ತು ಸಮಾಜದ ಅವರೆಲ್ಲರೂ ಕೂಡ ಒಂದಾಗಿ ಚೆಂದಾಗಿ ಈ ಬಹು ದೊಡ್ಡ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದಾರೆ. ಇದು ಅತ್ಯಂತ ಯಶಸ್ವಿಯಾಗಿ ಜರುಗುವುದರಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಕೂಡ ಈ ಭಾಗದ ಜನತೆ ಅಷ್ಟೇ ಅಲ್ಲ. ನಾಡಿನ ಎಲ್ಲಾ ಭಾಗದ ಜನ ಹೆಚ್ಚಿನ ಸಂಖ್ಯೆಯಲ್ಲಿ ಈ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಂಡು ಜಗದ್ಗುರು ಪಂಚ ಪೀಠಾಧೀಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಬಯಸುತ್ತಿದ್ದೇವೆ. ಈ ನಾಡಿನ ಸಮಸ್ತ ಜನತೆಗೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮತ್ತು ೧೨ನೇ ಶತಮಾನದ ಬಸವಾದಿ ಶಿವಶರಣರು ಸರ್ವರಿಗೂ ಕೂಡಾ ಆಯುಷ್ಯ ಆರೋಗ್ಯ ಭಾಗ್ಯ ಸಕಲ ಸುಖ ಸಂಪದಗಳನ್ನು ನೀಡಲೆಂದು ಹಾರೈಸುತ್ತಿದ್ದೇವೆ ಎಂದರು.