Home ಕರ್ನಾಟಕಆರೋಗ್ಯಭಾಗ್ಯ ಎಲ್ಲರಿಗೂ ಬೇಕು-ಡಾ. ಪ್ರಶಾಂತ ಧನ್ನೂರ

ಆರೋಗ್ಯಭಾಗ್ಯ ಎಲ್ಲರಿಗೂ ಬೇಕು-ಡಾ. ಪ್ರಶಾಂತ ಧನ್ನೂರ

by Editor
0 comments

ಚೈತನ್ಯ ನ್ಯೂಸ್‌ 24 ನರೇಗಲ್ಲ ಮೇ.31:

ಎಲ್ಲ ಭಾಗ್ಯಗಳಲ್ಲಿ ಮನುಷ್ಯನಿಗೆ ಆರೋಗ್ಯಭಾಗ್ಯ ಮುಖ್ಯ. ಆರೋಗ್ಯವಾಗಿದ್ದಾಗ ಮಾತ್ರ ಏನೆಲ್ಲವನ್ನೂ ಸಾಧಿಸಲು ಸಾಧ್ಯ. ಆದ್ದರಿಂದ ಆರೋಗ್ಯಭಾಗ್ಯವು ಎಲ್ಲರಿಗೂ ಬೇಕು ಎಂದು ಗದಗ ಸಂಗಮೇಶ್ವರ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಶಾಂತ ಧನ್ನೂರ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಇಂದು ಹಿರಿಯ ನಾಗರಿಕರ ಹಿತರಕ್ಷಣಾ ಸಂಘ, ನಿವೃತ್ತ ನೌಕರರ ಸಂಘ, ಬೀಚಿ ಬಳಗ ಹಾಗೂ ಕಾನಿಪದ ಸದಸ್ಯರುಗಳಿಗೆ ಆರೋಗ್ಯ ಕಾರ್ಡ್ಗಳನ್ನು ವಿತರಿಸಿ ಅವರು ಮಾತನಾಡಿದರು.
ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಜೀವನದಲ್ಲಿ ನಮಗರಿಯದೆ ಅನೇಕ ದುರ್ಘಟನೆಗಳು ಘಟಿಸುತ್ತವೆ. ಆ ಸಮಯದಲ್ಲಿ ನಾವು ಅನಿವಾರ್ಯವಾಗಿ ಆಸ್ಪತ್ರೆಗೆ ಸೇರಲೇಬೇಕಾಗುತ್ತದೆ. ಇಂದಿನ ದಿನಗಳಲ್ಲಿ ನೀವು ಆಸ್ಪತ್ರೆಯ ಖರ್ಚುವೆಚ್ಚಗಳ ಬಗ್ಗೆ ತಿಳಿದೇ ಇದ್ದೀರಿ. ನಿಮಗೆಲ್ಲರಿಗೂ ಅನುಕೂಲವಾಗಲೆಂದು ನಮ್ಮ ಆಸ್ಪತ್ರೆಯ ವತಿಯಿಂದ ಆರೋಗ್ಯ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಇವುಗಳ ಉಪಯೋಗವನ್ನು ನೀವುಗಳು ಪಡೆದುಕೊಳ್ಳಬೇಕು. ಶಸ್ತçಚಿಕಿತ್ಸೆ ಮತ್ತು ಹೆರಿಗೆಯ ಸಂದರ್ಭಗಳಲ್ಲಿ ಈ ರಿಯಾಯಿತಿಯ ಆರೋಗ್ಯ ಕಾರ್ಡ್ ಉಪಯೋಗವಾಗುತ್ತಿದ್ದು, ಮಧ್ಯಮ ವರ್ಗದವರಿಗೆ ಇದರಿಂದ ಬಹಳಷ್ಟು ಲಾಭಗಳಿವೆ ಎಂದರು.


ಸಮಾರAಭವನ್ನು ಉದ್ಘಾಟಿಸಿ ಮಾತನಾಡಿದ ಡಾ. ಕೆ. ಬಿ. ಧನ್ನೂರ ಗದಗ ಈಗ ಆರೋಗ್ಯದ ವಿಚಾರದಲ್ಲಿ ದೊಡ್ಡ ಹಬ್ ಆಗುತ್ತಿದೆ. ಸಕಲ ಸೌಲಭ್ಯಗಳೂ ಒಂದೇ ಸೂರಿನಡಿಯಲ್ಲಿ ದೊರಕುವಂತೆ ಮಾಡುವ ಗುರಿಯನ್ನಿರಿಸಿಕೊಂಡು ಸಂಗಮೇಶ್ವರ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ನಿಮಗೆ ಆರೋಗ್ಯದ ಸಮಸ್ಯೆಗಳೇನೇ ಇದ್ದರೂ ಇಲ್ಲಿ ಅವುಗಳಿಗೆ ಸೂಕ್ತ ಪರಿಹಾರವಿದೆಯೆಂದರು.
ಸ್ತಿçÃರೋಗ ತಜ್ಞೆ ಡಾ. ಅನ್ನಪೂರ್ಣಾ ಧನ್ನೂರ ಮಾತನಾಡಿ ಗದಗನ ನಮ್ಮ ಆಸ್ಪತ್ರೆಯು ಬಹುತೇಕ ಎಲ್ಲ ರೀತಿಯ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಬಂಜೆತನ ನಿವಾರಣಾ ಕೇಂದ್ರವನ್ನೂ ಪ್ರಾರಂಭಿಸಲಾಗುತ್ತಿದೆ. ಇನ್ನು ಮುಂದೆ ನೀವುಗಳು ಮಕ್ಕಳಿಲ್ಲ ಎಂಬ ಕೊರಗಿನಿಂದ ದೂರವಾಗಬಹುದೆಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ದೊಡ್ಡಯ್ಯ ಅರವಟಗಿಮಠ ಮಾತನಾಡಿ ನಮ್ಮ ಸಂಘಟನೆಗಳ ಎಲ್ಲ ಸದಸ್ಯರುಗಳಿಗೆ ಆರೋಗ್ಯ ಕಾರ್ಡ್ನ್ನು ವಿತರಿಸಿ ಡಾ. ಪ್ರಶಾಂತ ಧನ್ನೂರ ದಂಪತಿಗಳು ಉಪಕರಿಸಿದ್ದಾರೆ. ಎಲ್ಲ ಸಂಘಟನೆಗಳ ಸದಸ್ಯರ ಪರವಾಗಿ ಅವರಿಗೆ ಕೃತಜ್ಞತೆಗಳು ಎಂದರು.
ನಿವೃತ್ತ ಶಿಕ್ಷಕ ಎಂ. ಎಸ್. ಧಡೇಸೂರಮಠ, ಅಧ್ಯಕ್ಷತೆ ವಹಿಸಿದ್ದ ಹಿರಿಯ ನೌಕರರ ಸಂಘದ ಅಧ್ಯಕ್ಷ ನ್ಯಾಯವಾದಿ ವೀರಣ್ಣ ದಿಂಡೂರ ಮಾತನಾಡಿದರು. ವೇದಿಕೆಯ ಮೇಲೆ ಬೀಚಿ ಬಳಗದಧ್ಯಕ್ಷ ಶಿವಯೋಗಿ ಜಕ್ಕಲಿ, ಕಾನಿಪ ಅಧ್ಯಕ್ಷ ಆದರ್ಶ ಕುಲಕರ್ಣಿ ಉಪಸ್ಥಿತರಿದ್ದರು. ಸಭೆಯಲ್ಲಿ ಹಿರಿಯ ನಾಗರಿಕರ ಸಂಘ, ನಿವೃತ್ತ ನೌಕರರ ಸಂಘ, ಬೀಚಿ ಬಳಗ ಮತ್ತು ಕಾನಿಪದ ಸದಸ್ಯರಿದ್ದರು. ವೀರಭದ್ರಪ್ಪ ಕೆರಿಯವರ ಪ್ರಾರ್ಥಿಸಿದರು. ಮಹಾದೇವಪ್ಪ ಬೇವಿನಕಟ್ಟಿ ನಿರೂಪಿಸಿದರು. ಕಳಕಪ್ಪ ಕಳಕಣ್ಣವರ ಸ್ವಾಗತಿಸಿದರು. ಅರುಣ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ಮಲಾ ಹಿರೇಮಠ ವಂದಿಸಿದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು