ಚೈತನ್ಯ ನ್ಯೂಸ್ 24 ಗಜೇಂದ್ರಗಡ ಮೇ. 08:
ಶಾಸಕ ಜಿ.ಎಸ್.ಪಾಟೀಲ ಮಾರನಬಸರಿ ಗ್ರಾಮದ ಮಲೆ ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧರಾಗಿದ್ದಾರೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಗುರುವಾರ ರೋಣ ಗ್ರಾಮದ ಜಕ್ಕಲಿ ಹಾಗೂ ಮಾರನಬಸರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಬ್ರಚ್‌ನಿಂದ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯ 31 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
2013 ಹಾಗೂ 18ನೇ ಸಾಲಿನಲ್ಲಿ ಶಾಸಕ ಜಿ.ಎಸ್ ಪಾಟೀಲರು ನರೇಗಲ್ಲ ಹಾಗೂ ಕಳಕಾಪೂರ ರಸ್ತೆಯನ್ನು ನಿರ್ಮಿಸಿದ್ದಾರೆ.ಗ್ರಾಮದಲ್ಲಿ ಸಿಸಿ ರಸ್ತೆ, ಯಾತ್ರಾ ನಿವಾಸ, ಶಾದಿಮಹಲ್, ಜಕ್ಕಲಿಯಿಂದ ಕೊಪ್ಪದ ಕ್ರಾಸ್ ವರೆಗೆ ಡಬಲ್ ರಸ್ತೆ, ಹಾಲುಮತದ ಸಮುದಾಯ ಭವನ ಸೇರಿದಂತೆ ಕೋಟ್ಯಾಂತರ ರೂ. ಗಳ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಇತಿಹಾಸವಾಗಿದೆ ಎಂದ ಅವರು, ಪ್ರೌಢ ಶಾಲಾ ನಿರ್ಮಾಣಕ್ಕೂ ತಮ್ಮ ಕಾಳಜಿ ತೋರಿಸಿದ್ದಾರೆ ಎಂದರು. ಈಗ ಮತ್ತೆ ಅಧಿಕಾರಕ್ಕೆ ಬಂದ ನಂತರ ಗ್ರಾಮದಲ್ಲಿ 70 ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಿದ್ದಾರೆ.20 ಲಕ್ಷ ರೂ.ಗಳ ವೆಚ್ಚದಲ್ಲಿ ಗ್ರಂಥಾಲಯವನ್ನು ನಿರ್ಮಿಸುವ ಜೊತೆಗೆ ಗ್ರಂಥಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಪರಿವರ್ತನೆಗೊಳಿಸಿದ್ದಾರೆ. 10 ಲಕ್ಷ ರೂ.ಗಳ ವೆಚ್ಚದಲ್ಲಿ ಸಿದ್ದನಕೊಳ್ಳದ ಸಿದ್ದ ಶ್ರೀಗಳ ಸಮುದಾಯ ಭವನವನ್ನು ನಿರ್ಮಿಸಲು ಚಾಲನೆ ಕೊಟ್ಟಿದ್ದಾರೆ. ಗ್ರಾಮ ದೇವತೆಯ ಸಮುದಾಯ ಭವನಕ್ಕೂ ಅನುದಾನವನ್ನು ಒದಗಿಸಿದ್ದು.ಅವರು ಗ್ರಾಮದ ಮೇಲೆ ಇಟ್ಟಿರುವ ನಂಬಿಕೆಯನ್ನು ಸಾದರಪಡಿಸುತ್ತದೆ ಎಂದರು.
ಗ್ರಾಮದಲ್ಲಿರುವ ಪುಟ್ಟರಾಜ ಕವಿ ಗವಾಯಿಗಳ ಸಮುದಾಯ ಭವನ ಅರ್ಧಕ್ಕೆ ನಿಂತಿದ್ದು, ಶೀಘ್ರ ಸಮುದಾಯ ಭವನದ ಕಾರ್ಯವನ್ನು ಸಂಪೂರ್ಣಗೊಳಿಸಲಾಗುವುದು. ಕೆಂಚಮ್ಮ ದೇವಸ್ಥಾನ ಮತ್ತು ಬಸವೇಶ್ವರ ದೇವಸ್ಥಾನಗಳ ಜಿರ್ಣೋದ್ಧಾರ ಕಾರ್ಯಗಳಿಗೂ ಸಹ ಶಾಸಕರು ಚಾಲನೆ ನಿಡಲಿದ್ದಾರೆ. ಗ್ರಾಮಸ್ಥರ ಇಚ್ಛೆಯಂತೆ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನರೇಗಲ್ಲ ರಸ್ತೆಯಿಂದ ವಾಲ್ಮೀಕಿ ವಠಾರಕ್ಕೆ ತೆರಳುವ ರಸ್ತೆ ಸುಧಾರಣೆಗೆ ಸಂಬಂಧಪಟ್ಟಂತೆ ಶಾಸಕರ ಗಮನಕ್ಕೆ ತರುವ ಮೂಲಕ ಶೀಘ್ರ ಅನುದಾನವನ್ನು ಒದಗಿಸಲಾಗುವುದು. ಗ್ರಾಮದಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸಿ ಹಂತಹಂತವಾಗಿ ಕಾರ್ಯಗಳನ್ನು ನೆರವೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಇದೇ ಸಂಧರ್ಭದಲ್ಲಿ ಗ್ರಾಮಸ್ಥರು ಗ್ಯಾರಂಟಿ ಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಅವರಿಗೆ ಸನ್ಮಾನಿಸಿದರು. ನರೇಗಲ್ಲ ಬ್ಲಾಕ್ ಕ್ರಾಂಗ್ರೆಸ್ ಸಮಿತಿ ಅದ್ಯಕ್ಷ ಶರಣಪ್ಪ ಬೆಟಗೇರಿ, ಶರಣಪ್ಪ ಕುರಿ, ರೈಮಾನಸಾಬ ಮೋತಖಾನ್, ಅಡಿ ಅಡಿವೇಪ್ಪ ಜಗಳೂರ, ಮರ್ತುಜಸಾಬ ಮೋತಖಾನ್, ಶಂಕ್ರಪ್ಪ ಸರ್ವಿ , ಉಮೇಶಗೌಡ ಪಾಟೀಲ, ಎಸ್ ಎಚ್ ಹಾದಿಮನಿ, ಎ.ಸಿ.ಪಾಟೀಲ, ಶಿವಪ್ಪ ಜಾಲಿಹಾಳ, ಈರಪ್ಪ ನಿಡಗುಂದಿ, ನಬಿಸಾಬ ಹುಡೇದ, ಕಾಧಿರಸಾಬ ಕಳಕಾಪೂರ, ಹನ್ಮಂತಪ್ಪ ತಳವಾರ, ಡಿ.ಡಿ.ದೋಟಿಹಾಳ, ರಿಯಾಜ ಆಲೂರ, ಮಹ್ಮದ ಸವಡಿ, ವೀರಣ್ಣ ಶಾಖಾ, ರವಿ ಅಬ್ಬಿಗೇರಿ, ಸಂತೋಷ ಅಬ್ಬಿಗೇರಿ, ಕಲ್ಲಪ್ಪ ಸಂಗಟಿ, ಚಂದ್ರಶೇಖರಯ್ಯ ವಸ್ತ್ರದ, ಯಲ್ಲಪ್ಪ ಡೊಳ್ಳಿನ, ಅಲ್ಲಾಸಾಬ ಮೋತಖಾನ್ ಇದ್ದರು