ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.13:
ಪಟ್ಟಣದ ಶ್ರೀ ರಹಿಮಾನ್ ಶಾವಲಿ ದರಗಾದ ಉರುಸಿನ ಅಂಗವಾಗಿ ಶ್ರೀ ಗಣೇಶ ದೇವಸ್ಥಾನದ ರಂಗಮAಟಪದಲ್ಲಿ ಸೋಮವಾರ ರಾತ್ರಿ ಶ್ರೀ ಕಟ್ಟಿಬಸವೇಶ್ವರ ನಾಟ್ಯ ಸಂಘದವರಿAದ ಅಭಿನಯಿಸಲ್ಪಟ್ಟ ನಾಟಕ ಧರ್ಮದ ನುಡಿ ಬೆಂಕಿಯ ಕಿಡಿ ನಾಟ್ಯ ರಸಿಕರ ಮನಸೂರೆಗೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಸಂಗೀತ, ಅಭಿನಯ, ನಿರ್ದೇಶನ, ನೃತ್ಯ ಎಲ್ಲ ವಿಭಾಗಗಳಲ್ಲಿಯೂ ನಾಟಕ ಪ್ರೇಕ್ಷಕರ ಮನಸೂರೆಗೊಂಡು ಸ್ಥಳೀಯ ಶ್ರೀ ಕಟ್ಟಿಬಸವೇಶ್ವರ ಸಂಘದವರು ಕಳೆದೆರಡು ತಿಂಗಳಿನಿAದ ಪಟ್ಟಿದ್ದ ಶ್ರಮವನ್ನು ಸಾರ್ಥಕಗೊಳಿಸಿತು. ವಿಶಾಲವಾದ ಬಯಲಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಿಕ್ಕಿರಿದು ನೆರೆದಿದ್ದ ಜನ ಸಮೂಹವು ನಾಟಕದ ಪ್ರತಿ ಸನ್ನಿವೇಶವನ್ನೂ ಅನುಭವಿಸಿ, ಆನಂದಿಸಿ ಕಲಾವಿದರಿಗೆ ನೀಡುತ್ತಿದ್ದ ಪ್ರೋತ್ಸಾಹವು ಅನನ್ಯವಾಗಿತ್ತು.
ನರೇಗಲ್ಲ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಮಾತ್ರ ನಾವುಗಳು ಇಂತಹ ಸೊಗಡನ್ನು ಕಾಣಬಹುದು. ನಾಟಕಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಚಿಕ್ಕಂದಿನಿAದಲೂ ನನಗೆ ನಾಟಕಗಳೆಂದರೆ ಪಂಚಪ್ರಾಣ. ಉರುಸಿನ ನಿಮಿತ್ಯ, ಹಿಂದೂ-ಮುಸ್ಲಿA ಭಾವೈಕ್ಯತೆಯನ್ನು ಸಾರುವುದಕ್ಕಾಗಿ ಶ್ರೀ ಕಟ್ಟಿಬಸವೇಶ್ವರ ನಾಟ್ಯ ಸಂಘದವರು ಅಭಿನಯಿಸುತ್ತಿರುವ ಈ ನಾಟಕ ಯಶಸ್ವಿಯಾಗಲಿ. ಯಾವ ಗದ್ದಲ, ಗಲಾಟೆ ಇಲ್ಲದೆ ನಿಮ್ಮೂರಿನ ಕಲಾವಿದರು ಅಭಿನಯಿಸುತ್ತಿರುವ ಈ ನಾಟಕವನ್ನು ಪ್ರೋತ್ಸಾಹಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಲ್ಲನಗೌಡ ಪಾಯಪ್ಪಗೌಡ್ರ ಮಾತನಾಡಿ ನಮ್ಮ ಓಣಿಯ ಯುವಕರ ಉತ್ಸಾಹ ಹಿರಿಯರೆಲ್ಲರಿಗೂ ಆನಂದ ನೀಡಿತು. ಅವರನ್ನು ಪ್ರೋತ್ಸಾಹಿಸುವ ನಿರ್ಧಾರ ಮಾಡಿದೆವು. ಉರುಸಿನ ನಿಮಿತ್ಯ ನಾವು ನಾಟಕವನ್ನಾಡುತ್ತೇವೆ ಎಂದಾಗ ನಮಗಾದ ಸಂತೋಷಕ್ಕೆ ಪಾರವೇ ಇಲ್ಲ. ನಮ್ಮ ಓಣಿಯ ಯುವಕರು ಸಾಕಷ್ಟು ಶ್ರಮ ವಹಿಸಿ ನಾಟಕ ಪ್ರದರ್ಶಿಸಿಲು ಸಿದ್ಧರಾಗಿದ್ದಾರೆ. ಹಂಸಕ್ಷೀರ ನ್ಯಾಯದಂತೆ ನೀವುಗಳು ಪ್ರೋತ್ಸಾಹಿಸಿ ಎಂದರು.
ನ್ಯಾಯವಾದಿ ಉಮೇಶ ಸಂಗನಾಳಮಠ ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾದೇವಪ್ಪ ಬೇವಿನಕಟ್ಟಿ ನಿರೂಪಿಸಿದರು. ನಾಟಕದ ಗುರುಗಳಾದ ಶಂಕರ ರೊಟ್ಟಿಯವರು ಪ್ರಾರಂಭದಿAದಲೂ ಕೊನೆಯವರೆಗೂ ನಾಟಕವನ್ನು ಅಚ್ಚುಕಟ್ಟಾಗಿ ಮುನ್ನಡೆಸಿ ಎಲ್ಲರ ಮೆಚ್ಚುಗೆ ಪಡೆದರು. ವೇದಿಕೆಯ ಮೇಲೆ ಕಲ್ಮೇಶ ತೊಂಡಿಹಾಳ, ಶಂಕ್ರಣ್ಣ ದೊಡ್ಡಣ್ಣವರ, ಮುತ್ತಪ್ಪ ಮಾವಿನಕಾಯಿ, ಪರಪ್ಪ ಬೆಡಗಲ್ಲ, ಪ್ರಕಾಶ ಪಾಯಪ್ಪಗೌಡ್ರ, ಬಸವರಾಜ ಕಲಾಲಬಂಡಿ, ಉಮೇಶ ಕರಮುಡಿ, ಪ್ರಕಾಶ ಕೊತಬಾಳ, ವೀರಣ್ಣ ಗುಜಮಾಗಡಿ, ಫಕೀರಗೌಡ ಪಾಯಪ್ಪಗೌಡ್ರ, ಶಿವಣ್ಣ ಮುಗಳಿ, ಬಸವರಾಜ ಮಾಳವಾಡ, ಮಂಜುನಾಥ ಮಲ್ಲನಗೌಡ್ರ, ಪ್ರಾಚಾರ್ಯ ಅಡವಿ, ಅಶೋಕ ಬಾರಕೇರ, ಉಡಚಪ್ಪ ತಳವಾರ, ಮುತ್ತಪ್ಪ ಬಿಷ್ಟನಗೌಡ್ರ, ಶ್ರೀಕಾಂತ ಹೊಸಮನಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಇನ್ನೂ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
ಫೋಟೋ ಶೀರ್ಷಿಕೆ
13-ಎನ್ಆರ್ಜಿಎಲ್1-ಉರುಸಿನ ನಿಮಿತ್ಯ ಶ್ರೀ ಕಟ್ಟಿ ಬಸವೇಶ್ವರ ನಾಟ್ಯ ಸಂಘದವರು ಅಭಿನಯಿಸಿದ ಧರ್ಮದ ನುಡಿ ಬೆಂಕಿಯ ಕಿಡಿ ನಾಟಕವನ್ನು ಪಿಎಸ್ಐ ಐಶ್ವರ್ಯ ನಾಗರಾಳ ಉದ್ಘಾಟಿಸಿದರು.