Home ಕರ್ನಾಟಕಸಾಧನೆಗೆ ಮೊದಲು ಪ್ರಯತ್ನ ಬೇಕು: ಕಲ್ಲನಗೌಡರ

ಸಾಧನೆಗೆ ಮೊದಲು ಪ್ರಯತ್ನ ಬೇಕು: ಕಲ್ಲನಗೌಡರ

by Editor
0 comments

ಚೈತನ್ಯ ನ್ಯೂಸ್ 24 ಮುಳಗುಂದ: ಮೇ.27:

 

ಸಾಧನೆಗೆ ಮೊದಲು ಪ್ರಯತ್ನ ಬೇಕು. ಪ್ರಯತ್ನವೇ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸತತ ಅಧ್ಯಯನ, ಪರಿಶ್ರಮ ಯಾರು ಮಾಡುತ್ತಾರೆ ಅವರು ಯಶಸ್ಸನ್ನ ಕಾಣುತ್ತಾರೆ ಎಂದು ಆರ್.ಎನ್. ದೇಶಪಾಂಡೆ ಪದವಿ ಕಾಲೇಜಿನ ಪ್ರಾ. ಡಾ. ಆರ್.ಎಂ.ಕಲ್ಲನಗೌಡರ ತಿಳಿಸಿದರು.
ಪಟ್ಟಣದ ಕುರಬಗೇರಿ ಓಣಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬೀರಲಿಂಗೇಶ್ವರ ಸೇವಾ ಸಮಿತಿಯಿಂದ ಸೋಮವಾರ ಹಾಲುಮತ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಮಾತನಾಡಿದ ಅವರು, ಹಾಲುಮತ ಸಮಾಜದವರು ನಿಸರ್ಗದ ಅಧ್ಯಯನಶೀಲರು. ಒಂದು ಸಮಾಜ ಜಾಗೃತಿಯಾದಲ್ಲಿ ಆ ಸಮಾಜ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬದಲಾದಂತೆ ಹುದ್ದೆಗಳು ಕಡಿತಗೊಳ್ಳುತ್ತವೆ ಎಂಬ ಭಯ ಎಲ್ಲರಲ್ಲೂ ಇರುತ್ತೇ ಆದರೆ, ಆ ಭಯ ಬೇಡ ಮನುಷ್ಯನಿಲ್ಲದೆ ಯಾವುದೇ ತಂತ್ರಜ್ಞಾನ ನಡೆಯುದಿಲ್ಲ. ವಿದ್ಯಾರ್ಥಿಗಳು ಯಾವಾಗಲೂ ಕ್ರೀಯಾಶೀಲರಾಗಿರಬೇಕು. ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದವನು ಜೀವನದಲ್ಲಿ ಎಲ್ಲೂ ಸೋಲನ್ನ ಅನುಭವಿಸುವುದಿಲ್ಲ. ಜ್ಞಾನಕ್ಕಿಂತ ಜಗತ್ತಲ್ಲೇ ಯಾವುದು ದೊಡ್ಡದಿಲ್ಲ. ಜೀವನದಲ್ಲಿ ಮೌಲ್ಯಗಳನ್ನ, ಕೌಶಲ್ಯಗಳನ್ನ ಅಳವಡಿಸಿಕೊಳ್ಳಿ ಎಂದರು.
ಸಾನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ, ಇಂದಿನ ಅರಿವಿಲ್ಲದ ವೇಗದಲ್ಲಿ ನಾವು ಜೀವನ ನಡೆಅಉತ್ತಿದ್ದೇವೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸಾಧನೆ ಕಡೆ ಗಮನ ಹರೆಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಪಡೆದುಕೊಂಡು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡು ನಿಮ್ಮ ಭವಿಷ್ಯವನ್ನ ಉಜ್ವಲವಾಗಿ ರೂಪಿಸಿಕೊಳ್ಳಬೇಕು ಎಂದರು. ಡಾ. ಎಸ್.ಸಿ.ಚವಡಿ ಮಾತನಾಡಿ, ಮಕ್ಕಳು ಹಿರಿಯರನ್ನ ಗೌರವಿಸಬೇಕು. ಓದುವ ಹವ್ಯಾಸವನ್ನ ರೂಢಿಸಿಕೊಳ್ಳಬೇಕು. ಇಂದಿನ ಬದಲಾದ ದಿನಮಾನಗಳಲ್ಲಿ ನೀವು ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಾ ಹೋಗಬೇಕು. ಅದಕ್ಕೆ ಶಿಕ್ಷಣ ಒಂದೇ ಮಾರ್ಗ, ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಿ ಎಂದರು.
ಈ ವೇಳೆ ನಿವೃತ್ತ ಆರ್ ಟಿಓ ಅಧಿಕಾರಿ ಬಿ.ಡಿ. ಹರ್ತಿ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾದ ಸಾಧಕರನ್ನ ಸನ್ಮಾನಿಸಿ, ಗೌರವಿಸಲಾಯಿತು.
ಸಮಾಜದ ಗುರುಗಳಾದ ಫಕ್ಕೀರಯ್ಯ ಅಮೋಘಿಮಠ, ಮುಖಂಡರಾದ ಮಹಾಂತೇಶ ನೀಲಗುಂದ, ಮಲ್ಲಪ್ಪ ಕುಂದಗೋಳ, ಬಸವರಾಜ ಬಡ್ನಿ, ಬಿ.ವಿ.ಸುಂಕಾಪುರ, ಅಶೋಕ ಹುಣಸಿಮರದ, ಸೇರಿದಂತೆ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ಎಚ್೨೫-ವಿಡಿಕೆ೨
ಪಟ್ಟಣದ ಕುರಬಗೇರಿ ಓಣಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬೀರಲಿಂಗೇಶ್ವರ ಸೇವಾ ಸಮಿತಿಯಿಂದ ಸೋಮವಾರ ಹಾಲುಮತ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಾ. ಎಸ್.ಸಿ. ಚವಡಿ ಉದ್ಘಾಟಿಸಿದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು