ಚೈತನ್ಯ ನ್ಯೂಸ್ 24 ನರೇಗಲ್ಲ ಜೂ.12:
ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1988-89ರಿಂದ 1995-96ನೇ ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಶಿವಾನಂದ ಮುಳಗುಂದ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಬದುಕಿಗೆ ದಿಕ್ಕು ತೋರಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಿವೃತ್ತ ಶಿಕ್ಷಕರ ಸನ್ಮಾನ, ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಗದಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಉದ್ಘಾಟಿಸಲಿದ್ದು, ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಚಂದ್ರಾಮ ಗ್ರಾಮಪುರೋಹಿತ ಅಧ್ಯಕ್ಷತೆ ವಹಿಸಲಿದ್ದಾರೆ. ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಫಣಿಬಂದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
‘ಜ್ಞಾನ ದೀಪಗಳು’ ಕಾರ್ಯಕ್ರಮದಡಿ ಧಾರವಾಡದ ನಿವೃತ್ತ ಉಪನಿರ್ದೇಶಕ ಸಂಜೀವ ಬಿಂಗೇರಿ, ರೋಣ ಅಕ್ಷರ ದಾಸೋಹದ ನಿವೃತ್ತ ಸಹಾಯಕ ನಿರ್ದೇಶಕ ವೀರಪ್ಪ ಬಸಪ್ಪ ಸಂಗನಾಳ, ನಿವೃತ್ತ ಶಿಕ್ಷಕಿ ಕುಸುಮವ್ವ ಭೀಮನಗೌಡ್ರ, ನಿವೃತ್ತ ಶಿಕ್ಷಕರಾದ ಶರಣಬಸಪ್ಪ ಬೂದಿಹಾಳ, ಅಂದಾನಪ್ಪ ಅಣಗೌಡರ, ಎಂ.ಎಸ್. ಧಡೇಸೂರಮಠ, ನಿಂಗನಗೌಡ ಚಿಕ್ಕನಗೌಡ್ರ, ಬಸವನಗೌಡ ಗೌಡರ, ಸಿ.ಬಿ. ಹಿರೇಮಠ, ನಿವೃತ್ತ ಶಿಕ್ಷಕಿ ಎಂ.ಪಿ. ಬಸರೀಗಿಡದ, ಮುಖ್ಯ ಶಿಕ್ಷಕಿ ಗೀತಾ ಗುಜ್ಜಲ ಹಾಗೂ ಶಿಕ್ಷಕಿ ಮಲ್ಲವ್ವ ಸಕ್ರೋಜಿ ಅವರನ್ನು ಸನ್ಮಾನಿಸಲಾಗುವುದು.

ಮುಖ್ಯ ಶಿಕ್ಷಕರಾದ ಆರ್.ವಿ. ಪಾಟೀಲ, ಎಂ.ಎಲ್. ಹೊಸಳ್ಳಿ, ಎಸ್.ಬಿ. ನಿಡಗುಂದಿ, ಎಸ್‌ಡಿಎಂಸಿ ಅಧ್ಯಕ್ಷರಾದ ತಿಮ್ಮರೆಡ್ಡಿ ಬಂಡಿವಡ್ಡರ ಹಾಗೂ ಆನಂದ ಕೊಟಗಿ, ಪ.ಪಂ. ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ, ಹೆಸ್ಕಾಂ ಶಾಖಾಧಿಕಾರಿ ವಿರೂಪಾಕ್ಷ ಸರ್ವಿ, ಆರೋಗ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ, ಪಿಎಸ್ಐ ಐಶ್ವರ್ಯ ನಾಗರಾಳ, ಕಾನಿಪ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿ, ಪ್ರಾಚಾರ್ಯೆ ಜಯಶ್ರೀ ಮುತಗಾರ, ಪ್ರಾಚಾರ್ಯ ಎಸ್.ಜಿ. ಗುಳಗಣ್ಣವರ ಹಾಗೂ ದಾನಿ ಚಂದ್ರಶೇಖರ ಸೋಮನಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹಾಗೂ ಪತ್ರಕರ್ತ ಅರುಣ ಕುಲಕರ್ಣಿ ಮಾತನಾಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಳೆಯ ವಿದ್ಯಾರ್ಥಿ ವಿರೂಪಾಕ್ಷ ಸಂಗನಾಳ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಗೀತ ಸೇವೆಯನ್ನು ಹರೀಶ ಬೊಮ್ಮನಹಳ್ಳಿ ಹಾಗೂ ಗೀತಾ ಭೋಪಳಾಪೂರ ನಡೆಸಿಕೊಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೈಲಾರಪ್ಪ ಗೋಡಿ, ಶಿವಾನಂದ ಪದ್ಮಸಾಲಿ, ಉಮೇಶ್ ಪಾದಗಟ್ಟಿ, ಶಿವಪ್ಪ ತಳವಾರ, ವಿರೂಪಾಕ್ಷಪ್ಪ ಸಂಗನಾಳ, ಪ್ರಸನ್ನಕುಮಾರ ಗಚ್ಚಿನಮಠ, ಬಸವರಾಜ ಕುಷ್ಟಗಿ ಹಾಗೂ ಮಬೂಸಾಬ ಎಂ. ಉಪಸ್ಥಿತರಿದ್ದರು.