Home ಜಿಲ್ಲಾ ಸುದ್ದಿಗಳುಆಂಗ್ಲ ಮಾದ್ಯಮ ೮ನೇ ತರಗತಿ ಆರಂಭ

ಆಂಗ್ಲ ಮಾದ್ಯಮ ೮ನೇ ತರಗತಿ ಆರಂಭ

by Editor
0 comments

ಚೈತನ್ಯ ನ್ಯೂಸ್‌ ೨೪ ಮುಳಗು0ದ ಜೂ.೬:

ಪಟ್ಟಣದ ಸರಕಾರಿ ಪ್ರೌಡಶಾಲೆ(ಆರ್‌ಎಂಎಸ್‌ಎ) ಶಾಲೆಯಲ್ಲಿ ನೂತನವಾಗಿ ೮ನೇ ತರಗತಿ ಆಂಗ್ಲ ವಿಭಾಗವನ್ನು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ಉದ್ಘಾಟಿಸಿ ಮಾತನಾಡಿ ಇಂದು ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಆಂಗ್ಲ ಮಾದ್ಯಮ ತುಂಬಾ ಅವಶ್ಯಕವಾಗಿದ್ದು ೨೦೧೯/೨೦ನೇ ಸಾಲಿನಲ್ಲಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ ೧ರಲ್ಲಿ ಒಂದನೇ ತರಗತಿ ಪ್ರಾರಂಬಿಸುವ ಮೂಲಕ ಇಂದು ೨೦೨೬/೨೭ನೇ ಸಾಲಿನ ೮ನೇ ತರಗತಿಯನ್ನು ಸರಕಾರಿ ಪ್ರೌಡಶಾಲೆ(ಅರ್‌ಎಂಎಸ್‌ಎ) ಪ್ರಾರಂಭವಾಗುತ್ತಿದೆ. ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿದ್ದು, ಇದರ ಸದುಪಯೋಗವನ್ನು ಪಟ್ಟಣದ ಮಕ್ಕಳು ಪಡೆದುಕೊಳ್ಳಬೇಕು. ಆಂಗ್ಲ ಮಾಧ್ಯಮಕ್ಕೆ ಬೇಕಾಗುವ ಎಲ್ಲಾ ಸಂಪನ್ಮೂಲಗಳನ್ನು ಇಲಾಖೆ ಒದಗಿಸಲು ಸಿದ್ದವಿದೆ. ಸರಕಾರಿ ಪ್ರೌಡಶಾಲೆಯಲ್ಲಿ ಕೊಠಡಿ ಹಾಗೂ ವಿಶಾಲವಾದ ಆಟದ ಮೈದಾನ ಹೊಂದಿದೆ. ಸರಕಾರದ ಎಲ್ಲಾ ಯೋಜನೆಗಳು ಮಕ್ಕಳಿಗೆ ದೊರೆಯುತ್ತದೆ ಎಂದರು.
ಅಶೋಕ ಹುಣಶಿಮರದ ಮಾತನಾಡಿ ಮುಳಗುಂದ ಪಟ್ಟಣದ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಗತ್ಯವಿದ್ದು ಇದನ್ನು ಶಿಕ್ಷಣ ಇಲಾಖೆ ಪೂರೈಸಿದ್ದು, ಇಲಾಖೆಗೆ ಪಟ್ಟಣದ ಪರವಾಗಿ ದನ್ಯವಾದಗಳು, ಮಕ್ಕಳಿಗೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದಲ್ಲಿ ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಶಾಲಾ ಪ್ರಧಾನ ಗುರು ಎಸ್.ಎಚ್. ಪೂಜಾರ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಚ್. ಮಾನೇಗಾರ, ಹೊನ್ನಪ್ಪ ನೀಲಗುಂದ, ಎಸ್.ಎಸ್. ಅರಹುಣಸಿ, ಮಾಹಾಂತೇಶ ಕೆಂಚನಾಯ್ಕರ್, ಮಕಾಂದಾರ, ನೂರಹ್ಮದ ನಧಾಫ್, ವಿ.ಟಿ. ಅಂಗಡಿ. ಗೀತಾ ಪಾಟೀಲ, ಗೀತಾ ಕುಂದರಗಿ, ಎಸ್.ವಿ. ತಿಮ್ಮಾಪೂರ, ಬಸವರಾಜ ಗೌರಿಮನಿ, ಹಾಗೂ ವಿದ್ಯಾರ್ಥಿ/ನಿಯರು ಇದ್ದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು