Home ಜಿಲ್ಲಾ ಸುದ್ದಿಗಳು ಪ್ರತಿಯೊಬ್ಬರೂ ಮನೆಯಲ್ಲಿ ಗ್ರಂಥಾಲಯವೆಂಬ ದೀಪವನ್ನು ಬೆಳಗಿಸಿ ಜ್ಞಾನಾರ್ಜನೆಗೆ ಪುಸ್ತಕ ಅತ್ಯವಶ್ಯಕ : ಡಾ.ಮಾನಸ

 ಪ್ರತಿಯೊಬ್ಬರೂ ಮನೆಯಲ್ಲಿ ಗ್ರಂಥಾಲಯವೆಂಬ ದೀಪವನ್ನು ಬೆಳಗಿಸಿ ಜ್ಞಾನಾರ್ಜನೆಗೆ ಪುಸ್ತಕ ಅತ್ಯವಶ್ಯಕ : ಡಾ.ಮಾನಸ

by Editor
0 comments
ನರೇಗಲ್ಲ: ಇವತ್ತಿನ ದಿನಮಾನಗಳಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ದೇವರಿಗೆ ಪ್ರಾತಿನಿಧ್ಯ ಕೊಟ್ಟಂತೆ ಗ್ರಂಥಾಲಯಕ್ಕೆ ಕೊಡುವುದು ಅವಶ್ಯವಾಗಿದೆ ಅದಕ್ಕಾಗಿ ಪ್ರತಿಯೊಬ್ಬರು ಮನೆಯಲ್ಲಿ ಗ್ರಂಥಾಲಯವೆಂಬ ದೀಪವನ್ನು ಬೆಳಗಿಸಿ ಜ್ಞಾನಾರ್ಜನೆಗೆ ಮುಂದಾದರೆ ಮನೆಗೊಂದು ಗ್ರಂಥಾಲಯದ ಕನಸು ನನಸಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷಡಾ. ಮಾನಸ ಹೇಳಿದರು.
ಸ್ಥಳೀಯ ಈಶ್ವರೀಯ ವಿವಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ, ಬೀಚಿ ಬಳಗ, ಶರಣ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಜಾನಪದ ಪರಿಷತ್, ನಿರಂತರ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜ್ಞಾನ ದಾಹದ ದಾರಿಯಲ್ಲಿ ಸಾಗಿರುವ ಪುಸ್ತಕ ಪ್ರಾಧಿಕಾರವು ಜನಸಾಮಾನ್ಯರಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು  ಮುಖ್ಯವಾಗಿ ಎಲ್ಲರೂ ಮನೆಯಲ್ಲಿ ಗ್ರಂಥಾಲಯ ಎಂಬ ದೀಪವನ್ನು ಬೆಳಗಿಸಿದರೆ ಪುಸ್ತಕದಲ್ಲಿ ಇರುವ ವಿಷಯಗಳಿಂದ ಎಲ್ಲರ ಜ್ಞಾನಾರ್ಜನೆಗೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ ಅದರಿಂದ ಮನೆಗಳಲ್ಲಿ ಗ್ರಂಥಾಲಯಗಳ  ಮಾಡುತ್ತಿದೆ ನಿರ್ಮಾಣ ಮಾಡುವ ಮೂಲಕ ಮನೆಗೊಂದು ಗ್ರಂಥಾಲಯ ಅನುಷ್ಠಾನ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸುವುದು ಮುಖ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಡಾ. ಮಾನಸ ಅವರು ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು.
ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸುತ್ತಿರುವ ಪ್ರಾಧಿಕಾರದ ನಿರ್ಧಾರ ಅಭಿನಂದಾರ್ಹ ಎಂದರು.
 ಈ ಸಂದರ್ಭದಲ್ಲಿ ಎಂ.ಎಸ್. ಧಡೇಸೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಕು. ಸವಿತಕ್ಕ, ಕಾಶಿನಾಥ ಸಾಲಿಮಠ ಮಾತನಾಡಿದರು. ಬೀಚಿ ಬಳಗದ ಅಧ್ಯಕ್ಷಶಿವಯೋಗಿ ಜಕ್ಕಲಿ.ನಿರಂತರ ಪ್ರಕಾಶನದ ಎ.ಎಸ್.ಮಕಾನದಾರ,ದೊಡ್ಡಯ್ಯ ಅರವಟಗಿಮಠ.ಕಲ್ಲಯ್ಯ ಹಿರೇಮಠ,ಭರಮಪ್ಪ ತಾಳಿ, ಗುರುಪಾದಪ್ಪಬೆಲ್ಲದ, ಸುರೇಶ ಹಳ್ಳಿಕೇರಿ, ವಿರುಪಾಕ್ಷಯ್ಯ ಅಣ್ಣಿಗೇರಿ, ಮಲ್ಲಿಕಾರ್ಜುನ ವೀರಾಪೂರ, ಸಂಗಯ್ಯ ಪ್ರಭುಸ್ವಾಮಿಮಠ, ಬಸವರಾಜ ಕಲಾಲಬಂಡಿ, ವೀರಭದ್ರಪ್ಪ ಕೆರಿಯವರ ಇತರರಿದ್ದರು. ಶಿಕ್ಷಕ ವಿ ಏ ಕುಂಬಾರ ನಿರೂಪಿಸಿದರು. ಮಹಾದೇವಪ್ಪ ಬೇವಿನಕಟ್ಟಿ ಸ್ವಾಗತಿಸಿದರು. ರವಿ ದೇವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳಕಪ್ಪ ಕಳಕಣ್ಣವರ ವಂದಿಸಿದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು