Home ಜಿಲ್ಲಾ ಸುದ್ದಿಗಳುಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಸಂಕನೂರ ಗೆಲುವಿಗೆ ಅಬ್ಬಿಗೇರಿಯಲ್ಲಿ ಬಿರುಸಿನ ಮನೆಮನೆ ಪ್ರಚಾರ

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಸಂಕನೂರ ಗೆಲುವಿಗೆ ಅಬ್ಬಿಗೇರಿಯಲ್ಲಿ ಬಿರುಸಿನ ಮನೆಮನೆ ಪ್ರಚಾರ

ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಸಹೋದರ ಸುಭಾಷ್ ಸಂಕನೂರ ನೇತೃತ್ವದಲ್ಲಿ ಮತಯಾಚನೆ

by Editor
0 comments

ಚೈತನ್ಯ ನ್ಯೂಸ್‌ 24 ವಾರ್ತೆ ನರೇಗಲ್ಲ ಅ.16:

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಗೆಲುವಿಗಾಗಿ ನರೇಗಲ್ಲ ಬೂತ್ ವ್ಯಾಪ್ತಿಯ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಅವರ ಸಹೋದರ ಸುಭಾಷ್ ಸಂಕನೂರ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.

ಗ್ರಾಮದ ವಿವಿಧ ಬಡಾವಣೆಗಳಿಗೆ ತೆರಳಿದ ಸುಭಾಷ್ ಸಂಕನೂರ ಹಾಗೂ ಬಿಜೆಪಿ ಕಾರ್ಯಕರ್ತರು ಪದವೀಧರ ಮತದಾರರನ್ನು ಭೇಟಿಯಾಗಿ, ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಪರವಾಗಿ ಮತಯಾಚನೆ ಮಾಡಿದರು. ಚುನಾವಣೆಯಲ್ಲಿ ಸಂಕನೂರ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿ, ಮತದಾರರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದರು.

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯಕರ್ತರು ಸಂಘಟಿತವಾಗಿ ಶ್ರಮಿಸುತ್ತಿದ್ದು, ಅಬ್ಬಿಗೇರಿ ಗ್ರಾಮದಲ್ಲಿಯೂ ಮನೆಮನೆ ಪ್ರಚಾರದ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ನಡೆಸಿದರು.

ಈ ಸಂದರ್ಭದಲ್ಲಿ ಚಂದ್ರಗೌಡ ಪಾಟೀಲ, ಮಹದೇವಪ್ಪ ಯಾಳಗಿ, ಶಂಕರ ಇಟಗಿ, ಭರಮಪ್ಪ ಹನುಮನಾಳ, ಸುರೇಶ ನಾಯ್ಕರ್, ಸಂಗಪ್ಪ ನೀರಲೋಟಿ, ಮಲ್ಲಿಕಾರ್ಜುನಗೌಡ ಚನ್ನಪ್ಪಗೌಡ ವೀರಾಪುರ, ರವಿ ಯತ್ನಟ್ಟಿ, ಸಿದ್ದಪ್ಪ ಹರ್ದಾರಿ, ಸಚಿನ್‌ಗೌಡ ಪಾಟೀಲ ಹಾಗೂ ಅಶೋಕ ಬೇವಿನಕಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

You may also like

Leave a Comment

➤ ಮಾರನಬಸರಿಯಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮ   ➤ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಸಂಕನೂರ ಗೆಲುವಿಗೆ ಅಬ್ಬಿಗೇರಿಯಲ್ಲಿ ಬಿರುಸಿನ ಮನೆಮನೆ ಪ್ರಚಾರ   ➤ ಸಂಕನೂರ ಗೆಲುವಿಗೆ ಕಾರ್ಯಕರ್ತರೇ ಶಕ್ತಿ; ಪದವೀಧರರ ವಿಶ್ವಾಸವೇ ಶ್ರೀರಕ್ಷೆ! ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ   ➤ ದೇಶಸೇವೆಯ ಸಂಕಲ್ಪದೊಂದಿಗೆ ಯುವಕರು ಮುನ್ನಡೆಯಲಿ; ಗೃಹರಕ್ಷಕ ದಳದ ಸೇವಾ ಮನೋಭಾವ ಯುವಜನತೆಗೆ ಪ್ರೇರಣೆ!   ➤ ಜಾನುವಾರುಗಳ ಆರೋಗ್ಯವೇ ರೈತರ ಆರ್ಥಿಕ ಭದ್ರತೆಗೆ ಬುನಾದಿ!