ಚೈತನ್ಯ ನ್ಯೂಸ್ ೨೪ ನರೇಗಲ್ಲ ಅ.೧೬:
ಬದುಕು ಎಂದರೆ ಬರೀ ಸುಖದ ಪಯಣವಲ್ಲ; ನೋವು, ಸಂಕಟ, ಕಹಿ ಅನುಭವಗಳ ನಡುವೆಯೂ ನಗುತ್ತ ಮುನ್ನಡೆಯುವುದೇ ನಿಜವಾದ ಜೀವನ. ಕೆಲವೊಮ್ಮೆ ಒಂದು ಸಣ್ಣ ನಗು ಮನದ ಭಾರ ಇಳಿಸಿದರೆ, ಹಾಸ್ಯದ ಮಾತು ಸಮಾಜದ ಕಹಿಯನ್ನು ಅನಾವರಣಗೊಳಿಸುತ್ತದೆ. ಇಂತಹ ಹಾಸ್ಯದ ಪದರುಗಳನ್ನು ಬೀಚಿಯವರ ಸಾಹಿತ್ಯದಲ್ಲಿ ಕಾಣಬಹುದು ಎಂದು ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಹೇಳಿದರು.
ಪಟ್ಟಣದ ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಬೀಚಿ ಬಳಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ‘ಬೀಚಿ ಜೀವನ ಮತ್ತು ನ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬೀಚಿಯವರ ಸಾಹಿತ್ಯ ಕೇವಲ ಮನರಂಜನೆಯ ಸಾಧನವಲ್ಲ; ಅದರ ಹಿಂದೆ ಸಮಾಜದ ವೈರುಧ್ಯಗಳು, ಮಾನವನ ವಿಚಿತ್ರ ನಡವಳಿಕೆಗಳು ಹಾಗೂ ಬದುಕಿನ ದೈನಂದಿನ ಚಿತ್ರಣ ಅಡಗಿದೆ. ದೈನಂದಿನ ಘಟನೆಗಳು, ದಾಂಪತ್ಯ ಜೀವನದ ಸನ್ನಿವೇಶಗಳು, ರಾಜಕಾರಣಿಗಳ ಭಾಷಣ ಮತ್ತು ಚುನಾವಣಾ ರಾಜಕೀಯದ ವೈಖರಿಯನ್ನು ಹಾಸ್ಯದ ಮೂಲಕ ಕಟ್ಟಿಕೊಡುವ ಅವರ ಬರಹಗಳು ಓದುಗರನ್ನು ನಗಿಸುವುದರ ಜತೆಗೆ ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತವೆ ಎಂದರು.

ಕಾಲೇಜಿನ ಪ್ರಾಚಾರ್ಯೆ ಡಾ. ಕಸ್ತೂರಿ ಬಿ. ದಳವಾಯಿ ಮಹಿಳಾ ಹಾಸ್ಯ ಸಾಹಿತ್ಯ ಕುರಿತು ಮಾತನಾಡಿ, ಬದುಕಿನಲ್ಲಿ ಎಷ್ಟೇ ನೋವು-ಸಂಕಟಗಳಿದ್ದರೂ ಮುಖದಲ್ಲಿ ಮಂದಸ್ಮಿತ ಉಳಿಸಿಕೊಳ್ಳುವುದು ಒಂದು ದೊಡ್ಡ ಕಲೆ. ನಗು ಕೇವಲ ಮುಖದ ಮೇಲಿನ ಭಾವನೆಯಲ್ಲ; ಅದು ಮನಸ್ಸಿನ ಉಲ್ಲಾಸ, ಬದುಕಿನ ಚೈತನ್ಯ ಹಾಗೂ ಸಂಬAಧಗಳನ್ನು ಬೆಸೆಯುವ ಸುಂದರ ಭಾಷೆ ಎಂದರು.
ಹಾಸ್ಯ ಲೇಖಕಿ ಟಿ. ಸುನಂದಮ್ಮನವರ ಹಾಸ್ಯ ಸಾಹಿತ್ಯವನ್ನು ಪ್ರಸ್ತಾಪಿಸಿದ ಅವರು, ದೈನಂದಿನ ಬದುಕಿನ ಸಾಮಾನ್ಯ ಘಟನೆಗಳಲ್ಲಿಯೇ ಹಾಸ್ಯದ ಬೀಜ ಅಡಗಿರುತ್ತದೆ ಎಂದರು. ಮಹಿಳೆಯರ ಬದುಕು, ಸಂಸಾರದ ಅನುಭವಗಳು ಹಾಗೂ ಕುಟುಂಬದ ಸನ್ನಿವೇಶಗಳನ್ನು ಹಾಸ್ಯದ ಮೂಲಕ ಕಟ್ಟಿಕೊಡುವ ಸಾಹಿತ್ಯದ ವೈಶಿಷ್ಟ್ಯವನ್ನು ವಿವರಿಸಿದರು.

ವಿದ್ಯಾರ್ಥಿನಿ ಪೂಜಾ ಶಿವಣ್ಣವರ ಪ್ರಾರ್ಥಿಸಿದರು. ಡಯಟ್ನ ನಿವೃತ್ತ ಉಪನ್ಯಾಸಕ ಕೆ.ಪಿ. ಸಾಲಿಮಠ ನಾಡಗೀತೆ ಹಾಡಿದರು.
ಬೀಚಿ ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ಬಳಗದ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ವೇದಿಕೆಯ ಮೇಲಿದ್ದರು. ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಯ್ಯಪ್ಪ ಪೂಜಾರ ಸ್ವಾಗತಿಸಿದರು. ಅಧ್ಯಾಪಕ ಎಸ್.ಎಸ್. ಹೊನ್ನೂರು ನಿರೂಪಿಸಿದರು. ಮಹಾದೆವಪ್ಪ ಬೇವಿನಕಟ್ಟಿ ವಂದಿಸಿದರು.
ಬೀಚಿ ಬಳಗದ ದೊಡ್ಡಯ್ಯ ಅರವಟಿಗಿಮಠ, ಗುರುಪಾದಪ್ಪ ಬೆಲ್ಲದ, ಭರಮಪ್ಪ ತಾಳಿ, ಡಾ. ರಾಜೇಂದ್ರ ಗಚ್ಚಿನಮಠ, ಭಾರತಿ ಶಿರ್ಸಿ, ಚಂದ್ರಶೇಖರ ಕೇಸರಿ, ಎಸ್. ಜಿ. ಗುಳಗಣ್ಣವರ, ಎಸ್.ಕೆ. ಪಾಟೀಲ, ಶಿವಾನಂದ ಗೋಗೇರಿ, ಸಂಗಯ್ಯ ಪ್ರಭುಸ್ವಾಮಿಮಠ, ರಾಚಯ್ಯ ಮಠದ, ವೀರಭದ್ರಪ್ಪ ಕುಂಬಾರ ಸೇರಿದಂತೆ ಸಾಹಿತ್ಯಾಸಕ್ತರು, ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫೊಟೋ ಶೀರ್ಷಿಕೆ
೧೬ ನರೇಗಲ್ಲ ಅ.೧: ಬೀಚಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗಣ್ಯರು ಬೀಚಿ ಸಾಹಿತ್ಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.