Home ಸಿನಿಮಾ / ಮನರಂಜನೆನಾಟಕಗಳು ಸಮಾಜಕ್ಕೆ ಸಂದೇಶವನ್ನು ಸಾರುವ ಮೂಲಗಳು:ಉಮೇಶ ಸಂಗನಾಳಮಠ:

ನಾಟಕಗಳು ಸಮಾಜಕ್ಕೆ ಸಂದೇಶವನ್ನು ಸಾರುವ ಮೂಲಗಳು:ಉಮೇಶ ಸಂಗನಾಳಮಠ:

 ಆಧುನಿಕ ಯುಗದಲ್ಲಿ ಕಣ್ಮರೆಯಾಗುತ್ತಿರುವ ನಾಟಕ ದೊಡ್ಡಾಟದಂತ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಮುಂದಾದ ಕಟ್ಟಿಬಸವೇಶ್ವರ ಯುವಕ ಸಂಘ: 

by Editor
0 comments

ಚೈತನ್ಯ ನ್ಯೂಸ್ ೨೪ ನರೇಗಲ್ಲ ಮೇ.೭:
ಇಂದಿನ ಯುವ ಪೀಳಿಗೆ ಆಧುನಿಕತೆಗೆ ಮಾರುಹೋಗಿ ಸಾಂಪ್ರದಾಯಕ ಕಲೆಗಳಾದ ನಾಟಕ ಬಯಲಾಟ ಸಂಗೀತ , ಸಾಹಿತ್ಯ ಮುಂತಾದ ಕಲೆಗಳು ಮಾಯವಾಗುತ್ತಿವೆ. ಅಂತಹ ಕಲೆಗಳಿಗೆ ಮತ್ತೆ ಜೀವತುಂಬುವ ಉದ್ದೇಶದಿಂದ ಹಾಗೂ ಯುವಜನತೆಗೆ ನಾಟಕದಲ್ಲಿರುವ ಸಂಬAದ ಮಾನವೀಯ ಮೌಲ್ಯ ಮುಂತಾದವುಗಳನ್ನು ಪರಿಚಯಿಸುವ ಉದ್ದೇಶದಿಂದ ಸ್ಥಳೀಯ ರೆಹಮಾನ ಶಾವಲಿ ಶರಣರ ಉರುಸಿನ ಅಂಗವಾಗಿ ಮೇ.೧೧ ರ ರಾತ್ರಿ ೧೦.೩೦ಕ್ಕೆ ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ಸಾಮಾಜಿಕ, ಕ್ರಾಂತಿಕಾರಿ ನಾಟಕವನ್ನು ಆಯೋಜಿಸಲಾಗಿದೆ ಎಂದು ಓಣಿಯ ಮುಖಂಡ ಹಾಗೂ ನ್ಯಾಯವಾದಿ ಉಮೇಶ ಸಂಗನಾಳಮಠ ತಿಳಿಸಿದರು.


ಅವರು ಸ್ಥಳೀಯ ಕಟ್ಟಿಬಸವೇಶ್ವರ ಯುವಕ ಸಂಘದಿAದ ಆಯೋಜಿಸಿರುವ ನಾಟಕದ ಪ್ರಚಾರಾರ್ಥವಾಗಿ ತಾಲೀಮು ಕೋಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಓಣಿಯ ಸಮಸ್ತ ದೈವದ ಒಕ್ಕೋರಿಲಿನ ಅಭಿಪ್ರಾಯದ ಮೇರೆಗೆ ಹವ್ಯಾಸಿ ಯುವ ಕಲಾವಿದರು ನಾಟಕವಾಡಲು ಮುಂದಾಗಿದ್ದು, ಇದಕ್ಕೆ ಶಂಕರ ರೊಟ್ಟಿ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ, ಓಣಿಯ ಹಿರಿಯರು ಬೆಂಗಾವಲಾಗಿ ನಿಂತಿದ್ದರೆ ಯುವಪಡೆ ನಾಟಕದ ಕಾರ್ಯವೈಖರಿಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಮತ್ತೊರ್ವ ಮುಖಂಡ ಹಾಗೂ ನಿವೃತ್ತ ಗಣೀತ ಶಿಕ್ಷಕ ಮಲ್ಲನಗೌಡ ಪಾಯಪ್ಪಗೌಡ್ರ ಮಾತನಾಡಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆ ಮತ್ತೆ ಉಳಿಸಿ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆಯೊAದಿಗೆ ನಾಟಕವನ್ನು ಪ್ರಾರಂಭಿಸಿದ್ದು, ಯುವ ಪೀಳಿಗೆ ತಮ್ಮ ಸಮಯವನ್ನು ಅನ್ಯ ದುಷ್ಚಟಗಳಿಗೆ ಬಳಸದೇ ಕಲೆಗಾಗಿ ಮೀಸಲಿಟ್ಟು, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಲಿ ಎಂಬ ಸದುದ್ದೇಶದಿಂದ ಇಲ್ಲಿ ಕಲೆಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು
ಈ ಸಂದರ್ಭದಲ್ಲಿ ನಾಟಕದ ಭಿತ್ತಿಪತ್ರಗಳನ್ನು ಮುಖಂಡರು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ ಪಂ ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಪರಪ್ಪ ಬೆಡಗಲ್ಲ, ಮುತ್ತಪ್ಪ ಮಾವಿನಕಾಯಿ, ಮಲ್ಲಪ್ಪ ಮಾರನಬಸರಿ, ಫಕೀರಗೌಡ ಪಾಯಪ್ಪಗೌಡ್ರ, ತರಬೇತುದಾರ ಶಂಕರ ರೊಟ್ಟಿ, ಸಂಚಾಲಕ ಮಹದೇವಪ್ಪ ಬೇವಿನಕಟ್ಟಿ, ವೀರಣ್ಣ ಗುಜಮಾಗಡಿ, ಮುತ್ತಪ್ಪ ಬಿಷ್ಟನಗೌಡ್ರ, ಶಿವು ಮುಗಳಿ , ಬಸವರಾಜ ಮಾಳವಾಡ, ಶ್ರೀಕಾಂತ ಹೊಸಮನಿ, ಅಶೊಕ ಬಾರಕೇರ, ಮಂಜುನಾಥ ಮಲ್ಲನಗೌಡ್ರ ಸೇರಿದಂತೆ ಹಲವಾರು ಗಣ್ಯಮಾನ್ಯರು ಹಾಗೂ ಓಣಿಯ ಸಮಸ್ತ ಯುವಕರು ಉಪಸ್ಥಿತರಿದ್ದರು.

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ