Home ಕರ್ನಾಟಕಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ

ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ

by Editor
0 comments

ಚೈತನ್ಯ ನ್ಯೂಸ್‌ 24 ಶ್ರೀ  ರಂಬಾಪುರಿ ಪೀಠ, ಬಾಳೆಹೊನ್ನೂರು ಜೂ.30:

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೬-ಜುಲೈ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತೆ ಇರುತ್ತದೆ.
ದಿನಾಂಕ ೧ರಂದು ಬೆಳಿಗ್ಗೆ ೧೧ ಗಂಟೆಗೆ ಹೊನ್ನಾಳಿಯಲ್ಲಿ ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಸಮಾರಂಭ, ಸಂಜೆ ೭ ಗಂಟೆಗೆ ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಧರ್ಮ ಸಮಾರಂಭ, ೩ ರಂದು ಬೆಂಗಳೂರಿನಲ್ಲಿ ಇಷ್ಟಲಿಂಗ ಮಹಾಪೂಜಾ ಧರ್ಮ ಸಂದೇಶ, ೫ರಂದು ದೇವರಹಿಪ್ಪರಗಿ ತಾಲೂಕ ಯಾಳವಾರದಲ್ಲಿ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ, ೬ರಂದು ಕಲಬುರ್ಗಿಯಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೯ರಂದು ಚಿಕ್ಕಮಗಳೂರಿನಲ್ಲಿ ಶ್ರೀ ಈಶ್ವರ ದೇವಸ್ಥಾನ ಕಳಸಾರೋಹಣ ಸಮಾರಂಭ, ೧೦ರಂದು ತರೀಕೆರೆ ತಾಲೂಕ ಮುಂಡ್ರೆ ಗ್ರಾಮದಲ್ಲಿ ಶಿವಗಣಾರಾಧನಾ ಶ್ರದ್ಧಾಂಜಲಿ ಸಮಾರಂಭ, ೧೨ರಂದು ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದಲ್ಲಿ ಲಿಂ. ಶ್ರೀ ಎಸ್.ಆರ್.ಕಾಶಪ್ಪನವರ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ, ೧೩ರಂದು ಅಜ್ಜಂಪುರ ತಾಲೂಕ ಬುಕ್ಕಾಂಬುಧಿಯಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಧರ್ಮ ಸಂದೇಶ ಅನುಗ್ರಹಿಸುವರು.

ದಿನಾಂಕ ೧೫ರಿಂದ ೧೯ರ ವರೆಗೆ ಬೆಂಗಳೂರು ಮಹಾನಗರದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ, ೨೦ರಂದು ಬೆಂಗಳೂರು ಜೆ.ಪಿ.ನಗರದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ, ೨೧ರಂದು ಗದಗ ನಗರದಲ್ಲಿ ಶ್ರೀ ಕಾಶೀ ಜಗದ್ಗುರುಗಳ ಆಷಾಢ ಮಾಸ ಪೂಜಾ ಮಂಗಲ ಸಮಾರಂಭ, ೨೩ ಮತ್ತು ೨೪ರಂದು ಲಿಂಗಸುಗೂರು ತಾಲೂಕ ದೇವರಭೂಪುರದಲ್ಲಿ ನೂತನ ರಥದ ಉದ್ಘಾಟನೆ ಹಾಗೂ ಧರ್ಮ ಸಮಾರಂಭ, ೨೬ರಂದು ಕೊಪ್ಪಳ ತಾಲೂಕ ಹುಲಿಗಿ ಗ್ರಾಮದಲ್ಲಿ ಇಷ್ಟಲಿಂಗ ಮಹಾಪೂಜಾ-ಧರ್ಮ ಸಮಾರಂಭ, ೨೭ರಂದು ರೋಣ ತಾಲೂಕ ಕೌಜಗೇರಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಹಿರೇಮಠದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೨೯ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು.
ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಧರ್ಮಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ವಿನಂತಿಸಿದ್ದಾರೆ.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ