Home ಜಿಲ್ಲಾ ಸುದ್ದಿಗಳುಜನಪರ ಆಡಳಿತದ ಮೇಲೆ ದೇಶದ ಜನತೆ ಮತ್ತೊಮ್ಮೆ ವಿಶ್ವಾಸ: ಮಲ್ಲಾಪೂರ

ಜನಪರ ಆಡಳಿತದ ಮೇಲೆ ದೇಶದ ಜನತೆ ಮತ್ತೊಮ್ಮೆ ವಿಶ್ವಾಸ: ಮಲ್ಲಾಪೂರ

by Editor
0 comments

ಚೈತನ್ಯ ನ್ಯೂಸ್ ೨೪ ಗಜೇಂದ್ರಗಡ ಮೇ.೭:
ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಸಾಧಿಸಿದ ಐತಿಹಾಸಿಕ ಹಾಗೂ ಭರ್ಜರಿ ವಿಜಯಕ್ಕಾಗಿ ಬಿಜೆಪಿ ರೋಣ ಮಂಡಳದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ರೋಣಮಂಡಳದ ಅಧ್ಯಕ್ಷ ಉಮೇಶ ಮಲ್ಲಾಪೂರಮಾತನಾಡಿ, ಕೇಂದ್ರ ಸರ‍್ಕಾರದ ಅಭಿವೃದ್ಧಿಪರ ದೃಷ್ಟಿಕೋನ ಮತ್ತು ಪ್ರಧಾನಮಂತ್ರಿ ಅವರ ದಿಟ್ಟ ನಾಯಕತ್ವ, ಜನಪರ ಆಡಳಿತದ ಮೇಲೆ ದೇಶದ ಜನತೆ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಪಶ್ಚಿಮ ಬಂಗಾಳದ ಜನರು ಬಿಜೆಪಿ ಬೆಂಬಲಿಸುವ ಮೂಲಕ ದುರಾಡಳಿತಕ್ಕೆ ತಕ್ಕ ಉತ್ತರ ನೀಡಿ, ಬದಲಾವಣೆಯ ಪರ‍್ವ ಸೃಷ್ಟಿಸಿದ್ದಾರೆ. ದೇಶದ ಭದ್ರತೆಗೆ ಪ್ರಧಾನಿ ನರೇಂದ್ರ ಮೋದಿಯೇ ಸೂಕ್ತ ಎಂದು ಜನರು ತಿರ‍್ಮಾನಿಸಿದ್ದಾರೆ. ಭಾರತೀಯ ಜನಸಂಘದ ಸ್ಥಾಪಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ರಾಷ್ಟ್ರಭಕ್ತಿಯ ತತ್ವಗಳು ಹಾಗೂ ಏಕತಾ ಸಂದೇಶ ಇಂದು ಬಿಜೆಪಿಯ ಈ ವಿಜಯಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿವೆ ಎಂದರು. ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಹಿರಿಯ ಮುಖಂಡ ಅಶೋಕ ವನ್ನಾಲ ಮಾತನಾಡಿದರು. ಪ್ರದಾನ ಕಾರ್ಯದರ್ಶಿ ಬಾಳಾಜಿರಾವ ಬೋಲ್ಡ್, ರವಿ ಶಿಂಗ್ರಿ, ಯಮನೂರಪ್ಪ ತಿರಕೋಜಿ,ಡಿ.ಜಿ.ಕಟ್ಟಿಮನಿ, ಶ್ರೀನಿವಾಸ ಸವದಿ, ಜೀನಪ್ಪ ಗೋಗಿ, ವಿನಾಯಕ ಜರತಾರಿ, ಮಹಾಂತೇಶ ಪೂಜಾರ, ಮುತ್ತಣ್ಣ ಕಾಜಗಾರ, ಲಕ್ಷ್ಮಣ ಬಂಕದ, ಯು.ಆರ್.ಚನ್ನಮ್ಮನವರ, ಅಂದಪ್ಪ ಅಂಗಡಿ, ಶಂಕರ ಇಂಜನಿ ಸೇರಿದಂತೆ ಅನೇಕರು ಇದ್ದರು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು