by Editor
0 comments
ಅಬ್ಬಿಗೇರಿಯಲ್ಲಿ ಶ್ರೀ ಬಯಲು ಬಸವೇಶ್ವರ ರಥೋತ್ಸವ ವಿಜೃಂಭಣೆ: ಸಾವಿರಾರು ಭಕ್ತರ ಭಾಗಿ
ಚೈತನ್ಯ ನ್ಯೂಸ್‌ 24 ಕನ್ನಡ, ನರೇಗಲ್ಲ ಸ.೭:
​ಸಮೀಪದ ಅಬ್ಬಿಗೇರಿಯಲ್ಲಿ ಪ್ರಸಿದ್ಧ ಶ್ರೀ ಬಯಲು ಬಸವೇಶ್ವರ (ಕಂಠಿ ಬಸವೇಶ್ವರ) ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು  ಕೃಷ್ಣಪಕ್ಷದ ಪುನರ್ವಸು ನಕ್ಷತ್ರದ ಶುಭ ಯೋಗದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಗಳಿಂದ ನೆರವೇರಿತು.
​ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಬಯಲು ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕಗಳನ್ನು ನೆರವೇರಿಸಲಾಯಿತು. ಗ್ರಾಮದ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ ಸಾವಿರಾರು ಧರ್ಮಪ್ರಿಯರು ಸ್ವಾಮಿಯ ದರ್ಶನ ಪಡೆದು ಧನ್ಯತೆ ಅನುಭವಿಸಿದರು.
​ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ ಹಾಗೂ ಸ್ವಾಮಿಯ ಪಲ್ಲಕ್ಕಿ ಉತ್ಸವವು ಸಕಲ ವಾದ್ಯಮೇಳಗಳೊಂದಿಗೆ ಅತ್ಯಂತ ವೈಭವದಿಂದ ಜರುಗಿತು. ಕಳಸ ಮತ್ತು ಪಲ್ಲಕ್ಕಿ ಮೆರವಣಿಗೆಯ ನಂತರ, ಗ್ರಾಮದ ಗುರು-ಹಿರಿಯರ ಸಮ್ಮುಖದಲ್ಲಿ ಬಯಲು ಬಸವೇಶ್ವರನ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ಎಳೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ರಥೋತ್ಸವ ಸಾಗುವ ಹಾದಿಯುದ್ದಕ್ಕೂ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
​ಈ ವೈಭವೋಪೇತ ರಥೋತ್ಸವದಲ್ಲಿ ಅಬ್ಬಿಗೇರಿ ಸೇರಿದಂತೆ ನರೇಗಲ್, ಕೋಡಿಕೊಪ್ಪ, ಕೋಚಲಾಪುರ, ಸವಡಿ, ಜಕ್ಕಲಿ, ರೋಣ, ಬೂದಿಹಾಳ, ತೋಟಗಂಟಿ ಹಾಗೂ ಮಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಬಾಬುಗೌಡ ಪಾಟೀಲ, ಬಸವರಾಜ ಪಲ್ಲೇದ, ವಿನಾಯಕ ಜೋಶಿ, ಹೂವಪ್ಪ ಪೂಜಾರ, ನಾಗರಾಜ ಪೂಜಾರ, ಉಮೇಶ ಕಮ್ಮಾರ, ಸಚೀನ ಬಡಿಗೇರ,ಬಸವರಾಜ ಹೂಲಗೇರಿ, ಪ್ರಭುಗೌಡ ಪಾಟೀಲ, ಬಸನಗೌಡ ಮುನೇನಕೋಪ್ಪ, ಶಿವಾನಂದ ಗುಗ್ಗರಿ, ಸಂತೋಷ ಪಾಟೀಲ,  ಹರ್ಷ ಹರದಾರಿ, ಸಂಗಮೇಶ ವೀರಾಪೂರ, ಮಹೇಶ ಗಡ್ಡದ, ಬಸವರಾಜ ಹನಮನಾಳ, ಕಳಕಪ್ಪ ಮಡಿವಾಳರ, ರವಿ ಪಟ್ಟಣಶೆಟ್ಟಿ, ರಾಮಣ್ಣ ಡಂಬಳ, ಮಹೇಶ ಬಡಿಗೇರ, ಶಶಿ ಬಡಿಗೇರ, ದೇವೆಂದ್ರಗೌಡ ಪಾಟೀಲ, ಗಣೇಶ ಹೂಗಾರ,ಮಂಜುನಾಥ ಪೂಜಾರ,ರೇಣಮ್ಮ ಪೂಜಾರ, ಮುಂತಾದವರು ರಥೋತ್ಸವದನೇತೃತ್ವ ವಹಿಸಿದ್ದರು.

You may also like

Leave a Comment

ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.      ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು