ಚೈತನ್ಯ ನ್ಯೂಸ್ 24 ಮುಳಗುಂದ ಜೂ.23:
ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದೆಂದು ಆಗ್ರಹಿಸಿ ಸ್ಥಳೀಯ ರೈತ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಹೆಸ್ಕಾಂ ಕಚೇರಿ ಶಾಖಾ ಅಧಿಕಾರಿ ಪ್ರವೀಣ ಅಸೂಟಿ ಅವರ ಮೂಲಕ ಕರ್ನಾಟಕ ವಿದ್ಯುಶಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಿದರೆ ಭವಿಷ್ಯದಲ್ಲಿ ವಿದ್ಯುತ್ ದರ ಹೆಚ್ಚಾಗುವ ಸಾಧ್ಯತೆ ಇದ್ದು, ಖಾಸಗಿ ಕಂಪನಿಗಳು ಲಾಭದಾಯಕ ಗ್ರಾಹಕರಿಗೆ ಮಾತ್ರ ಆದ್ಯತೆ ನೀಡುವ ಸಂಭವವಿದೆ. ವಿದ್ಯುತ್ ಖಾಸಗೀಕರಣದಿಂದ ಗ್ರಾಮೀಣ ಹಾಗೂ ಸಾಮಾನ್ಯ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ. ಜತೆಗೆ ಸರಕಾರಿ ವಿದ್ಯುತ್ ಸಂಸ್ಥೆಗಳ ಆದಾಯ ಕಡಿಮೆಯಾಗುತ್ತದೆ. ಸಾರ್ವಜನಿಕರ ಹಣದಿಂದ ನಿರ್ಮಿಸಲಾದ ವಿದ್ಯುತ್ ಜಾಲದ ಪ್ರಯೋಜನವನ್ನು ಖಾಸಗಿ ಕಂಪನಿಗಳು ಪಡೆದು ಲಾಭ ಪಡೆದುಕೊಳ್ಳುವುದು ಸರಿಯಲ್ಲ. ಅಷ್ಟೇ ಅಲ್ಲದೇ ಸರ್ಕಾರದಿಂದ ವಿಶೇಷವಾಗಿ ವಿವಿಧ ವರ್ಗದ ಗ್ರಾಹಕರಿಗೆ ಒದಗಿಸಿದ ಗೃಹಜ್ಯೋತಿ ಯೋಜನೆ, ನೇಕಾರರ ಕೈಮಗ್ಗಗಳಿಗೆ ನೀಡುವ ರಿಯಾಯತಿ, ರೈತರ ಕೃಷಿ ಪಂಪ ಸೆಟ್ಗಳಿಗೆ ನೀಡುವ ರಿಯಾಯತಿ ಮತ್ತು ಎಂ.ಎಸ್.ಎ0.ಇ ಕೈಗಾರಿಕೆಗಳಿಗೆ ನೀಡುವ ರಿಯಾಯತಿಗಳು ರದ್ದಾಗುತ್ತವೆ. ಅಷ್ಟೇ ಅಲ್ಲದೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ಅಭದ್ರತೆ ಉಂಟಾಗುತ್ತದೆ. ಆದ್ದರಿಂದ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆ ನೀಡುವ ಅರ್ಜಿಯನ್ನು ತಿರಸ್ಕರಿಸಬೇಕು ಇಲ್ಲದಿದ್ದರೇ ನಮ್ಮ ರೈತ ಸಂಘದಿAದ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ಶಂಕ್ರಯ್ಯ ಹಿರೇಮಠ, ಮಹಮ್ಮದ ಅಲಿ ಶೇಖ, ಮುತ್ತಪ್ಪ ಬಳ್ಳಾರಿ, ಕಿರಣ ಕುಲಕರ್ಣಿ, ದೇವರಾಜ ಸಂಗನಪೇಟಿ, ಗಂಗಪ್ಪ ವಿಜಾಪುರ, ಮಹಾಂತೇಶ ಹುಣಸಿಮರದ, ಮಹಾಂತೇಶ ಲಾಳಿ, ಮಹಾಂತೇಶ ಗುಂಜಳ, ದತ್ತಣ್ಣ ಯಳವತ್ತಿ, ಬಸವರಾಜ ಮಟ್ಟಿ, ಚನ್ನಪ್ಪ ಕಣವಿ, ದಾವಲಸಾಬ ನದ್ದೀಮುಲ್ಲಾ, ಪ್ರಭು ಸುಂಕದ, ಶಿವಯೋಗಿ ಕೋರಿ, ಶರಣಪ್ಪ ಮಸಳಿ, ಪ್ರಭು ಉಪ್ಪಲದಿನ್ನಿ, ಮಹಾಂತೇಶ ವೆಂಕಟಾಪೂರ, ಬಿ.ಎಲ್. ಜಾಧವ ಸೇರಿದಂತೆ ನೂರಾರು ರೈತರು ಸೇರಿದ್ದರು.
ಸರಕಾರ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದೆಂದು ಆಗ್ರಹಿಸಿ ಸ್ಥಳೀಯ ರೈತ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಹೆಸ್ಕಾಂ ಕಚೇರಿ ಶಾಖಾ ಅಧಿಕಾರಿ ಪ್ರವೀಣ ಅಸೂಟಿ ಅವರ ಮೂಲಕ ಕರ್ನಾಟಕ ವಿದ್ಯುಶಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.