Home ಜಿಲ್ಲಾ ಸುದ್ದಿಗಳುವರುಣನ ಕೃಪೆಗಾಗಿ ಗುರ್ಜಿ ಸೇವೆ

ವರುಣನ ಕೃಪೆಗಾಗಿ ಗುರ್ಜಿ ಸೇವೆ

by Editor
0 comments

ಚೈತನ್ಯ ನ್ಯೂಸ್‌ 24 ಮುಳಗುಂದ: ಜೂ.23:
ಈ ಬಾರಿ ವರುಣದೇವ ನಮ್ಮ ಭಾಗದಲ್ಲಿ ಮುನಿಸಿಕೊಂಡಿದ್ದಾನೆ ಇಂದಿಗೂ ಒಮ್ಮೆಯೂ ಮಳೆ ಬರುತ್ತಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಚೌಡನಪೇಟಿ ಹಾಗೂ ಗಣೇಶನಗರ ಓಣಿಯ ಮಹಿಳೆಯರು ವರುಣನ ಕೃಪೆಗಾಗಿ ಗುರ್ಜಿ ಸೇವೆ ಮಾಡಿ ಮನೆ ಮನೆಗೆ ತೆರಳಿ ವೃತ ಆಚರಿಸಿದರು.
ಮಳೆಗಾಗಿ ಅಬ್ಬಿಕೆರೆಯ ದಡದಲ್ಲಿರುವ ಅನ್ನದಾನೇಶ್ವರ ದೇವಸ್ಥಾನದಲ್ಲಿ ೯ ದಿನಗಳಿಂದ ದೀಪ ಹಚ್ಚಿ ಕಾಲ ಕಾಲಕ್ಕೆ ಎಣ್ಣೆ ಹಾಕಿ ಅದು ನಂದದAತೆ ನೋಡಿಕೊಂಡು, ಪ್ರತಿ ದಿನ ತೊಯ್ದ ಬಟ್ಟೆಯಲ್ಲಿ ಮನೆ ಮನೆಗೆ ತೆರಳಿ ಗುರ್ಜಿ ಸೇವೆ ಮಾಡಿ ಪ್ರತಿ ಮನೆಗಳಿಂದ ಜೋಳದ ಭಿಕ್ಷೆ ಹಾಗೂ ರೊಟ್ಟಿ ಬಿಕ್ಷಾಟನೆ ಮಾಡಿ ಮಹಿಳೆಯರು ದೇವಸ್ಥಾನದಲ್ಲಿ ಕುಳಿತು ತಂದ ರೊಟ್ಟಿಯನ್ನೇ ತಿಂದು ವೃತ ಆಚರಣೆ ಮಾಡಲಾಗುತ್ತಿದೆ.
ಬಂದ ಜೋಳದಿಂದ ಕೊನೆಯ ದಿನ ಪರುವನ್ನು ಮಾಡಿ ಬಂದವರಿಗೆಲ್ಲ ಸಂಗಟಿ ಸಾರು ಊಟ ಹಾಕಿ ಎಲ್ಲರಿಗೂ ನೀರನ್ನು ಗೊಜ್ಜಿ ತೊಯ್ದ ಮಡಿ ಬಟ್ಟೆಯಲ್ಲಿ ವರುಣ ದೇವನನ್ನು ಬೇಡಿಕೊಳ್ಳುವರು. ಹೀಗೆ ಹಳೆಯ ಸಂಪ್ರದಾಯದ ಆಚರಣೆಗೂ ಮಳೆಯ ಮೋಡಗಳು ಕಾಣುತ್ತಿಲ್ಲ ಎಂದು ಮಹಿಳೆಯರು ಆತಂಕದಲ್ಲಿದ್ದಾರೆ. ಆದರೆ ವೃತದ ಕೊನೆಯ ದಿನ ಏನಾಗುತ್ತದೆಯೋ ಕಾಯ್ದು ನೋಡಬೇಕಿದೆ.
ಮುಳಗುಂದ: ಪಟ್ಟಣದ ಚೌಡನಪೇಟಿ ಹಾಗೂ ಗಣೇಶನಗರ ಓಣಿಯ ಮಹಿಳೆಯರು ವರುಣನ ಕೃಪೆಗಾಗಿ ಗುರ್ಜಿ ಸೇವೆ ಮಾಡಿ ಮನೆ ಮನೆಗೆ ತೆರಳಿ ವೃತ ಆಚರಿಸಿದರು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು