Home ಜಿಲ್ಲಾ ಸುದ್ದಿಗಳುಚೈತನ್ಯ ನ್ಯೂಸ್‌ 24 ನರೇಗಲ್ಲ ಜೂ.28:

ಚೈತನ್ಯ ನ್ಯೂಸ್‌ 24 ನರೇಗಲ್ಲ ಜೂ.28:

by Editor
0 comments

ಚೈತನ್ಯ ನ್ಯೂಸ್‌ 24 ನರೇಗಲ್ಲ ಜೂ.28:

ನರೇಗಲ್ಲ ಪಟ್ಟಣದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ದತ್ತ ಮಂಗಲ ಭವನ ನಿರ್ಮಾಣಕ್ಕೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಂಕಲ್ಪ ಮಾಡಿ ಆದಷ್ಟು ಶೀಘ್ರವೇ ಕಾರ್ಯೋನ್ಮುಖರಾಗಲು ನಿರ್ಧರಿಸಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ಡಾ. ಜಿ. ಕೆ. ಕಾಳೆ ನರೇಗಲ್ಲದ ಜನತೆಗೆ ೨೦೦೭ರಲ್ಲಿ ಶ್ರೀ ಸಹಸ್ರ ಚಂಡಿಕಾ ಮಹಾಯಾಗವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ಅನುಭವವಿದೆ. ಶ್ರೀಗುರು ದತ್ತಾತ್ರೇಯ ಈ ದಿಶೆಯಲ್ಲಿ ಆಶೀರ್ವಾದ ಮಾಡಿ ಎಲ್ಲರೂ ಉದಾರ ದೇಣಿಗೆ ಕೊಡುವಂತೆ ಪ್ರೇರಣೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಈ ಕಾರ್ಯ ನಮ್ಮೆಲ್ಲರಿಂದ ಸಾಧ್ಯವಾಗುತ್ತದೆ ಎಂದರು.
ಕೋಟುಮಚಗಿಯ ಶ್ರೀಧರ ಕುಲಕರ್ಣಿ ಮಾತನಾಡಿ ನಾವೆಲ್ಲರೂ ಒಗ್ಗೂಡಲು ಶ್ರೀ ಗುರುದತ್ತ ಏನಾದರೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪ್ರೇರೇಪಿಸುತ್ತಾನೆ. ಅವನ ಆಜ್ಞೆಯಂತೆ ನಡೆದುಕೊಳ್ಳುವ ನಮಗೆ ಈ ಮಂಗಲ ಭವನ ನಿರ್ಮಾಣದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದರು.
ಅನಸೂಯಾ ಮಹಿಳಾ ಮಂಡಳದ ಅಧ್ಯಕ್ಷೆ ಭಾರತಿಬಾಯಿ ಗ್ರಾಮಪುರೋಹಿತ ಮಾತನಾಡಿ ನಾವು ಮಹಿಳೆಯರೂ ಸಹ ನಿಮ್ಮೊಂದಿಗೆ ಕೈಜೋಡಿಸಿ ನಮ್ಮಿಂದಾದಷ್ಟು ಹಣಕಾಸಿನ ಸಹಾಯವನ್ನು ನೀಡುತ್ತೇವೆ. ನಾವೆಲ್ಲರೂ ಒಮ್ಮನದಿಂದ ಈ ಮಂಗಲ ಭವನ ಬೇಗನೆ ನಿರ್ಮಾಣವಾಗಲು ಸಕಲ ರೀತಿಯ ಸಹಕಾರ ನೀಡುತ್ತೇವೆ ಎಂದರು.
ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮಾತನಾಡಿ ಈ ದೊಡ್ಡ ಕಾರ್ಯವನ್ನು ಹಮ್ಮಿಕೊಳ್ಳಲು ಶ್ರೀದತ್ತನೇ ನಮಗೆಲ್ಲರಿಗೂ ಪ್ರೇರಣೆ ನೀಡಿದ್ದಾನೆ. ಅವನ ಅನುಗ್ರಹದಿಂದ ಎಲ್ಲರ ಸಹಕಾರದೊಂದಿಗೆ ಮಂಗಲ ಭವನ ಕಾರ್ಯವನ್ನು ಬೇಗನೆ ಮುಗಿಸುವ ಸಂಕಲ್ಪವನ್ನಿAದು ಮಾಡೋಣ ಎಂದರು.
ದೇವಸ್ಥಾನದ ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ಮಾತನಾಡಿ ಇಲ್ಲಿನ ದತ್ತಾತ್ರೇಯ ಬಹಳಷ್ಟು ಜಾಗೃತನಾಗಿದ್ದಾನೆ. ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಸಾಧ್ಯವಾದಷ್ಟು ಸಾಂಪ್ರದಾಯಿಕ ಉಡುಪುಗಳೊಂದಿಗೆ ಬಂದು ದೇವಸ್ಥಾನದ ಪಾವಿತ್ರö್ಯತೆಯನ್ನು ಕಾಪಾಡಿರಿ. ನೀವಂದುಕೊAಡ ಈ ಕಾರ್ಯ ಶೀಘ್ರ ಫಲ ನೀಡಲಿ ಎಂದರು.
ವೇದಿಕೆಯ ಮೇಲೆ ಶೇಷಗಿರಿ ಕುಲಕರ್ಣಿ ಉಪಸ್ಥಿತರಿದ್ದರು. ಶ್ರೀಪಾದಭಟ್ಟ ಜೋಷಿ ಅಧ್ಯಕ್ಷೀಯ ನುಡಿಗಳನ್ನಾಡಿ ಮಂಗಲ ಭವನ ನಿರ್ಮಾಣಕ್ಕೆ ಕೆಲವಷ್ಟು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯನ್ನುದ್ದೇಶಿಸಿ ಡಾ. ಕೃಷ್ಣ ಕಾಳೆ, ಗುರುರಾಜ ಕುಲಕರ್ಣಿ, ಅರ್ಚನಾ ಕುಲಕರ್ಣಿ, ನಿಖಿತಾ ಗ್ರಾಮಪುರೋಹಿತ, ಮಂಜುನಾಥ ಹೆಗಡೆ, ಆನಂದ ಕುಲಕರ್ಣಿ, ಇನ್ನಿತರರು ಮಾತನಾಡಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಆನಂದ ಕಾಳೆ, ಅರುಣ ಗ್ರಾಮಪುರೋಹಿತ, ನಾಗೇಶಭಟ್ಟ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಂಗನಾಥ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ನಾಗರಾಜ ನಾಡಿಗೇರ, ಬಾಬುರಾವ ಕಾಳೆ, ಕಿರಣ ಕಾಳೆ, ಸಂಧ್ಯಾ ಕುಲಕರ್ಣಿ, ಪದ್ಮಾ ಕುಲಕರ್ಣಿ, ಡಾ. ಸಪ್ನಾ ಕಾಳೆ, ಶ್ವೇತಾ ಕಾಳೆ, ಅನಿತಾ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಜ್ಯೋತಿ ಕುಲಕರ್ಣಿ, ಪ್ರಿಯಾ ಕುಲಕರ್ಣಿ, ರೂಪಾ ಗ್ರಾಮಪುರೋಹಿತ, ರಾಜಶ್ರೀ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.
ಆದರ್ಶ ಕುಲಕರ್ಣಿ ನಿರೂಪಿಸಿದರು. ಶ್ರೀಪಾದ ಕುಲಕರ್ಣಿ ಸ್ವಾಗತಿಸಿದರು. ಅರುಣ ಕುಲಕರ್ಣಿ ವಂದಿಸಿದರು.
ಫೋಟೋ ಶೀರ್ಷಿಕೆ: ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗೌರವಾಧ್ಯಕ್ಷ ಡಾ. ಜಿ. ಕೆ. ಕಾಳೆ ಮಾತನಾಡಿದರು.

 

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ