Home ಕರ್ನಾಟಕಹನುಮನಾಳ ಗ್ರಾಮದಲ್ಲಿ ನೂತನ ದಿ ಲಕ್ಷ್ಮೀ ಅರ್ಬನ್ ಬ್ಯಾಂಕ್ ಆರಂಭ

ಹನುಮನಾಳ ಗ್ರಾಮದಲ್ಲಿ ನೂತನ ದಿ ಲಕ್ಷ್ಮೀ ಅರ್ಬನ್ ಬ್ಯಾಂಕ್ ಆರಂಭ

by Editor
0 comments

ಚೈತನ್ಯ ನ್ಯೂಸ್‌ 24 ಹನುಮಸಾಗರ ಜೂ.23:

 

ಹಣದ ವ್ಯವಹಾರಗಳು ಆಗಿದ್ದರಿಂದ ಗ್ರಾಹಕರಲ್ಲಿ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸಬೇಕು ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು.

ಅವರು ಸಮೀಪದ ಹನುಮನಾಳ ಗ್ರಾಮದಲ್ಲಿ ಶುಕ್ರವಾರ ಗಜೇಂದ್ರಗಡ ಪಟ್ಟಣದ ದಿ ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ಹ್ ಬ್ಯಾಂಕ್‌ನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರನ್ನು ಆರ್ಕಷಿಸಲು ಬ್ಯಾಂಕಿನ ಸೇವೆಗಳ ಬಗ್ಗೆ ಜನರಿಗೆ ತಿಳಿಸಬೇಕು. ವ್ಯಾಪಾರಿಗಳಿಗೆ, ರೈತರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಬ್ಯಾಂಕಿನ ಸೇವೆಗಳು ಲಭ್ಯಯವಾಗಬೇಕು. ಇದರಿಂದ ಹೆಚ್ಚಿನ ಖಾತೆಯನ್ನು ತೆರೆಯಲು ಸಾದ್ಯಯವಾಗುತ್ತದೆ. ಸ್ಥಳೀಯರೊಂದಿಗೆ ಉತ್ತಮ ಒಡನಾಡವನ್ನು ಹೊಂದಬೇಕು ಸಾಲ, ಠೇವಣಿ, ವಿಮೆ, ಡಿಜಿಟಲ್ ಬ್ಯಾಂಕಿಗ್ ಸೇವೆಗಳ ಮಾಹಿತಿ ಜನರಿಗೆ ದೊರೆಯುವಂತೆ ಮಾಡಬೇಕು ಎಂದರು.

ಈ ವೇಳೆ ಬ್ಯಾಂಕಿನ ಅಧ್ಯಕ್ಷ ಸುರೇಶ ಚನ್ನಿ, ಉಪಾಧ್ಯಕ್ಷ ಸಿದ್ಧಪ್ಪ ಬಂಡಿ, ನಿರ್ದೇಶಕರಾದ ಎಸ್.ಎಸ್.ಪಟ್ಟೇದ, ಪಿ.ಎಸ್.ಕಡ್ಡಿ, ಪಿ.ಬಿ.ಮ್ಯಾಗೇರಿ, ವ್ಹಿ.ಎಸ್.ನಂದಿಹಾಳ, ಡಾ.ಬಿ.ವ್ಹಿ.ಕಂಬಳ್ಯಾಳ, ಪಿ.ವಾಯ್.ತಳವಾರ, ಎಸ್.ಕೆ.ಕನಕೇರಿ, ಆರ್.ಪಿ.ಹೂಲಿ, ಎಸ್.ಯು.ಮೆಣಸಗಿ, ಆರ್.ಬಿ.ನಿಡಗುಂದಿ, ಕೆ.ಎಸ್.ಸಜ್ಜನರ, ಆರ್.ವಾಯ್.ಮರಿಯಣ್ಣವರ, ನಾನಾ ಶಾಖೆಗಳ ವ್ಯವಸ್ಥಾಪಕರಾದ ರಾಜಶೇಖರ ಹೊಸಂಗಡಿ, ಪ್ರದೀಪ ಮ್ಯಾಗೇರಿ, ನಾಗರಾಜ ಹೊಸಂಗಡಿ, ಸಿದ್ಧಪ್ಪ ರೊಟ್ಟಿ, ಈರಣ್ಣ ಗಜೇಂದ್ರಗಡ, ಮಹೇಶ ಜಕ್ಕಲಿ, ಗುಂಡಪ್ಪ ಕೊತಬಾಳ, ತೆವರಪ್ಪ ಚಿಕ್ಕನಾಳ ಇದ್ದರು.

ಫೋಟೊ ಶಿರ್ಷಿಕೆ : ಹನುಮಸಾಗರ ಸಮೀಪದ ಹನುಮನಾಳ ಗ್ರಾಮದಲ್ಲಿ ಶುಕ್ರವಾರ ದಿ ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ಹ್ ಬ್ಯಾಂಕ್‌ನ ಶಾಖೆಯನ್ನು ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

 

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು