Home ಕರ್ನಾಟಕದೇವಾಂಗ ಸಮುದಾಯದಿಂದ ಸಾಧಕರಿಗೆ ಸನ್ಮಾನ

ದೇವಾಂಗ ಸಮುದಾಯದಿಂದ ಸಾಧಕರಿಗೆ ಸನ್ಮಾನ

by Editor
0 comments

ಚೈತನ್ಯ ನ್ಯೂಸ್‌ 24 ಹನುಮಸಾಗರ ಜೂ.23:

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ದೇವಾಂಗ ಸಮೂದಾಯದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ ಹೇಳಿದರು.
ಅವರು ಪಟ್ಟಣ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ದೇವಾಂಗ ಸಮಾಜದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇವಾಂಗ ಸಮುದಾಯವು ಜನಸಂಖ್ಯೆಯಲ್ಲಿ ಸಣ್ಣದಾಗಿದ್ದರೂ ಸಮಾಜದ ಏಳಿಗೆಗಾಗಿ ನಿರಂತರವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಮಾಜದಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮಿಂದಾದ ಅಲ್ಪ ಕಾಣಿಕೆಯನ್ನು ನೀಡುವ ಮೂಲಕ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಶಿವಶಂಕರ ಚೆನ್ನಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಪರಸ್ಪರ ಹೊಂದಾಣಿಕೆ ಹಾಗೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಸಹಜ. ಅವುಗಳನ್ನು ಮರೆತು ಸಮಾಜದ ಪ್ರಗತಿಗೆ ಕೆ`ಜೋಡಿಸಬೇಕು ಎಂದರು.
ದೇವಾಂಗ ಸಮೂದಾಯದ ರುದ್ರಮುನಿಸ್ವಾಮಿ ದೇವಾಂಗಮಠ, ಉಪಾಧ್ಯಕ್ಷ ನಾರಾಯಣಪ್ಪ ಕೊಳ್ಳಿ, ಪ್ರಮುಖರಾದ ಉಮಾಪತಿ ಮಾಗಿ, ಹನುಮಂತ ಚಳಗೇರಿ, ಶಶಿಧರ ಸಕ್ರಿ, ಪ್ರಲ್ಹಾದಗೌಡ ಮೆದಿಕೇರಿ, ಮಂತ ಬಾದಾ, ಶಂಕರ ಸಕ್ರಿ, ರಾಮನಗೌಡ ಬಿಜ್ಜಲ, ಮಹೇಶ ಕಾಳಗಿ, ಶಿವಾನಂದ ತಿಮ್ಮಾಪೂರ, ಸುರೇಶ ಸಿನ್ನೂರ, ಶ್ರೀನಿವಾಸ ಕಂಟ್ಲಿ, ಶಂಕ್ರಪ್ಪ ಸಪ್ಪಂಡಿ, ಮಹೇಶ ಸಿನ್ನೂರ, ಮಂಜುನಾಥ ಸಿನ್ನೂರ, ಶಂಕರ ಹುಲಮನಿ, ವಸಂತ ಸಿನ್ನೂರ, ಏಕನಾಥ ಮೆದಿಕೇರಿ ಇದ್ದರು.
ಫೋಟೊ ಶಿರ್ಷಿಕೆ: ಹನುಮಸಾಗರದ ಬನಶಂಕರಿ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಾನಾ ಕ್ಷೇತ್ರಗಳಲ್ಲಿ ಸಾಧನೆ ನಿಮಿತ್ತ ಸಭೆಯನ್ನು ನಡೆಸಲಾಯಿತು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು