Home ಜಿಲ್ಲಾ ಸುದ್ದಿಗಳುಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ 

ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ 

ರಾತ್ರಿ 10ರೊಳಗೆ ವಿಸರ್ಜನೆ ಕಡ್ಡಾಯ; ಅನುಮತಿ ಇಲ್ಲದೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ :

by Editor
0 comments
ಚೈತನ್ಯ ನ್ಯೂಸ್‌ 24 ಕನ್ನಡ, ನರೇಗಲ್ಲ ಸ. 6:
 ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಶಿಸ್ತುಬದ್ಧವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬಾರಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಗಣೇಶ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಡಿಜೆಗೆ ಸಂಪೂರ್ಣ ನಿಷೇಧ ಹೆರಲಾಗಿದೆ ಎಂದು ಸ್ಥಳೀಯ ಪಿ ಎಸ್ ಐ ಐಶ್ವರ್ಯ ನಾಗರಾಳ ತಿಳಿಸಿದರು.
 ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ 6 ಘಂಟೆಗೆ ಹಮ್ಮಿಕೊಂಡಿದ್ದ ಜಿಣೇಶೋತ್ಸವದ ಶಾಂತಿಸಭೆನ್ನದ್ದೇಶಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದ್ದು, ನಿಯಮ ಮೀರಿ ಡಿಜೆ ಬಳಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅತಿಯಾದ ಶಬ್ದದಿಂದ ಸಾರ್ವಜನಿಕರು, ವೃದ್ಧರು, ಮಕ್ಕಳು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಧ್ವನಿವರ್ಧಕಗಳ ಬಳಕೆಯಲ್ಲಿಯೂ ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ರಾತ್ರಿ 10ರೊಳಗೆ ವಿಸರ್ಜನೆ ಕಡ್ಡಾಯ
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯನ್ನು ಅನಗತ್ಯವಾಗಿ ವಿಳಂಬ ಮಾಡದೆ ರಾತ್ರಿ 10 ಗಂಟೆಯೊಳಗೆ ಕಡ್ಡಾಯವಾಗಿ ವಿಸರ್ಜನೆ ಪೂರ್ಣಗೊಳಿಸಬೇಕು. ವಿಸರ್ಜನೆ ಹೆಸರಿನಲ್ಲಿ ತಡರಾತ್ರಿವರೆಗೆ ಮೆರವಣಿಗೆ, ಅತಿಯಾದ ಧ್ವನಿವರ್ಧಕ ಬಳಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳಿಗೆ ಅವಕಾಶವಿಲ್ಲ.
ಮೆರವಣಿಗೆಯನ್ನು ನಿಗದಿತ ಮಾರ್ಗದಲ್ಲಿಯೇ ನಡೆಸಬೇಕು. ಸಂಚಾರಕ್ಕೆ ಅಡ್ಡಿಯಾಗದಂತೆ ಆಯೋಜಕರು ಸ್ವಯಂಸೇವಕರನ್ನು ನಿಯೋಜಿಸಿ ಪೊಲೀಸ್ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸುವುದು ಅಗತ್ಯವಾಗಿದೆ.
 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ–ಸಂಸ್ಥೆಗಳು ಹಾಗೂ ಯುವಕ ಮಂಡಳಿಗಳು ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿಗಳನ್ನು ಮುಂಚಿತವಾಗಿಯೇ ಪಡೆದುಕೊಳ್ಳಬೇಕು. ವಿಶೇಷವಾಗಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಇಲಾಖೆಯಿಂದ ಅಗತ್ಯ ಅನುಮತಿ ಹಾಗೂ ಪಟ್ಟಣ ಪಂಚಾಯತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಸಾರ್ವಜನಿಕ ರಸ್ತೆ, ವೃತ್ತ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್ ನಿರ್ಮಿಸುವಾಗ, ಬ್ಯಾನರ್ ಕಟ್ಟುವಾಗ  ಸುರಕ್ಷತೆ ಮತ್ತು ಸಂಚಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು.
ಪೆಂಡಾಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಕಳಪೆ ತಂತಿ, ಅಸುರಕ್ಷಿತ ಸಂಪರ್ಕ ಹಾಗೂ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದನ್ನು ತಪ್ಪಿಸಬೇಕು. ವಿದ್ಯುತ್ ಅವಘಡಗಳಿಗೆ ಅವಕಾಶವಾಗದಂತೆ ಆಯೋಜಕರು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಎಂದರು.
 ಈ ವೇಳೆ ರಘುನಾಥ್ ಕೊಂಡಿ ಮಾತನಾಡಿ     ಗಣೇಶೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಾಮರಸ್ಯದ ಹಬ್ಬವಾಗಬೇಕು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ, ಹಾಡು, ಭಾಷಣ ಅಥವಾ ಪ್ರಚೋದನಕಾರಿ ವರ್ತನೆಗೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚೋದನಕಾರಿ ಸಂದೇಶ, ವಿಡಿಯೊ ಹಾಗೂ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಯುವಕರು ಎಚ್ಚರ ವಹಿಸಬೇಕು.
ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಾಗುವಾಗ ಸಂಘಟಕರು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಣ್ಣ ಘಟನೆಗೂ ಕೋಮು ಬಣ್ಣ ನೀಡದೆ, ಸಮಸ್ಯೆ ಎದುರಾದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರುವ ಮೂಲಕ ಶಾಂತಿ ಕಾಪಾಡಲು ಸಹಕರಿಸಬೇಕು ಎಂದರು.
ಈ ವೇಳೆ ಮುಖಂಡ ಮಂಜುನಾಥ್ ಹೆಗಡೆ ಮಾತನಾಡಿ  ಗಣೇಶೋತ್ಸವದ ಸಂಭ್ರಮ ಎಂದರೆ ಕೇವಲ ಅಬ್ಬರದ ಮೆರವಣಿಗೆ ಅಥವಾ ಕಿವಿಗಡಚಿಕ್ಕುವ ಸಂಗೀತವಲ್ಲ. ಪರಿಸರ ಸ್ನೇಹಿ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ದೇಶಭಕ್ತಿ ಗೀತೆ, ಮಕ್ಕಳಿಗೆ ಸ್ಪರ್ಧೆಗಳು, ಆರೋಗ್ಯ–ರಕ್ತದಾನ ಶಿಬಿರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ಸವಕ್ಕೆ ಅರ್ಥಪೂರ್ಣ ಸ್ವರೂಪ ನೀಡಬಹುದಾಗಿದೆ.
ನಿಯಮ ಪಾಲನೆಯೊಂದಿಗೆ ಸಂಭ್ರಮಿಸಿ, ಸೌಹಾರ್ದದೊಂದಿಗೆ ಗಣಪತಿಯನ್ನು ಬೀಳ್ಕೊಡಿ ಎಂಬ ಸಂದೇಶದೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಆಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಉತ್ಸವ ಯಾವುದೇ ಅಹಿತಕರ ಘಟನೆಗಳಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಳ್ಳಲು ಸಾಧ್ಯ. ಎಂದರು
 ಈ ಸಂದರ್ಭದಲ್ಲಿ ಮುಖಂಡ ಸಂತೋಷ್ ಮಂಣ್ಣೋಡ್ಡರ್, ಪ  ಪಂ ಉಪಾಧ್ಯಕ್ಷ ಕುಮಾರಸ್ವಮಿ ಕೊರಧಾನ್ಯಮಠ ಮಾತನಾಡಿದರು.
 ಈ ಸಂದರ್ಭದಲ್ಲಿ ಮಂಜುನಾಥ್ ಬಿ. ಎಸ್ ಎಸ್ ಮನ್ನೊಡ್ಡರ್, ರುದ್ರೇಶ್ ಕೋಟಗಿ, ನಿಂಗರಾಜ್ ಕೆಂಗಾರ, ಬಸಪ್ಪ ಜೂಟ್ಲಾ, ಎಸ್ ಸಿ ಸಂಗನಾಳಮಠ, ಬಸವರಾಜ ವಂಕಲಕುಂಟಿ, ವೀರಣ್ಣ ಗುಜಮಾಗಡಿ, ಶ್ರೀಕಾಂತ ಹೊಸಮನಿ, ಮುತ್ತುರಾಜ ಮೇಟಿ, ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ವಿಜಯಕುಮಾರ್ ಗೋಧಿಗನೂರ್, ಚಂದ್ರು ದೊಡ್ಡಮನಿ, ಬಿ ಎಸ್ ಮಾಯಮ್ಮನವರ, ಎಂ ಆರ್ ಬಾರಕೇರ, ಎಸ್ ಬಿ ಸವಡಿ, ಎಸ್ ವಿ ಅಲಬಾಗಿಲ  ಎಂ ಬಂಗಾರಿ, ಮಂಜುನಾಥ್ ಮಾದರ ಕೆ ಕೆ ದಾಸರ, ವಿ ವಿ ಚೆಕರಡ್ಡಿ ಸೇರಿದಂತೆ ಹಲವಾರು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

You may also like

Leave a Comment

ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.      ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು