79
ಚೈತನ್ಯ ನ್ಯೂಸ್ 24 ರಂಬಾಪುರಿ ಪೀಠ, ಬಾಳೆಹೊನ್ನೂರು ಜೂ.30:

ಮನುಷ್ಯ ಜೀವನದಲ್ಲಿ ಆಸೆಗಳಿಗಾಗಿ ಬದುಕಬಾರದು. ಆದರ್ಶಗಳಿಗಾಗಿ ಬದುಕಬೇಕು. ಜೀವನದಲ್ಲಿ ಗುರಿಯಿರಬೇಕೇ ಹೊರತು ಮತ್ತೊಬ್ಬರ ಬಗ್ಗೆ ಉರಿ ಇರಬಾರದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಮಾಡಿದ ಸಹಾಯ ಗಳಿಸಿದ ವಿಶ್ವಾಸ ಬೆಳೆಸಿದ ಸ್ನೇಹ ಹಂಚಿದ ಪ್ರೀತಿ ಹಾಗೂ ಉಳಿಸಿಕೊಂಡ ನಂಬಿಕೆ ಕೊನೆಯತನಕ ಇರುತ್ತವೆ. ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಹೂವು ಅರಳುತ್ತವೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಎಷ್ಟೋ ನೋವುಗಳು ತುಂಬಿದ್ದರೂ ಮುಖದಲ್ಲಿ ಯಾವಾಗಲೂ ನಗು ತುಂಬಿರಬೇಕು. ಸತ್ಯ ನಿಸ್ವಾರ್ಥ ಮತ್ತು ಆಂತರಿಕ ಪರಿಶುದ್ಧತೆ ಈ ಮೂರು ಶ್ರೇಷ್ಠ ಗುಣಗಳು ಯಾರಲ್ಲಿವೆಯೋ ಅಂಥವರನ್ನು ಯಾವ ಶಕ್ತಿಯೂ ಅಲುಗಾಡಿಸಲಾಗದು. ವೀರಶೈವ ಧರ್ಮ ಸಂಹಿತೆಯಲ್ಲಿ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಸಕಲರ ಬಾಳ ಬದುಕಿನಲ್ಲಿ ಹೊಸ ಶಕ್ತಿ ತುಂಬಿ ತರುತ್ತವೆ. ಸಕಲರ ಶ್ರೇಯೋಭಿವೃದ್ಧಿಗೆ ಧರ್ಮ ಮತ್ತು ಧರ್ಮಾಚರಣೆ ಅವಶ್ಯಕವೆಂದರು.

ರಾಜೇಶ್ವರ ಶ್ರೀಗಳು ರಾಜೇಶ್ವರ, ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು ಹಳ್ಳಿಖೇಡ, ಕಮಠಾಣ ರಾಚೋಟೇಶ್ವರ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಹುಡುಗಿ ವಿರಕ್ತಮಠದ ಚನ್ನಮಲ್ಲ ಶ್ರೀಗಳು, ಹುಡುಗಿ ಹಿರೇಮಠದ ಸೋಮೇಶ್ವರ ಶ್ರೀಗಳು, ಮಹಾರಾಷ್ಟçದ ವಿರೂಪಾಕ್ಷ ಶ್ರೀಗಳು, ಕಂಠಾಣ ಕಾಶೀನಾಥ ಶ್ರೀಗಳು, ಮಾವನೂರು ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪೌರ್ಣಿಮೆ ಅಂಗವಾಗಿ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.