Home ಕರ್ನಾಟಕಡಿಪ್ಲೋಮಾ ಇನ್ ವಾಸ್ತು ಪರೀಕ್ಷೆಯಲ್ಲಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದ ಚನ್ನೇಶ ಶಾಸ್ತ್ರಿಗಳು ಮಠದ

ಡಿಪ್ಲೋಮಾ ಇನ್ ವಾಸ್ತು ಪರೀಕ್ಷೆಯಲ್ಲಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದ ಚನ್ನೇಶ ಶಾಸ್ತ್ರಿಗಳು ಮಠದ

by Editor
0 comments

ಚೈತನ್ಯ ನ್ಯೂಸ್‌ 24 ಹಿರೇಕೆರೂರು ಜೂ.7:

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆಸಿದ ಡಿಪ್ಲೋಮಾ ಇನ್ ವಾಸ್ತು ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ವಾಸ್ತು ಸಲಹೆಗಾರರು ಹಾಗೂ ಧಾರ್ಮಿಕ ವಿದ್ವಾಂಸರಾದ ವೇ. ಚನ್ನೇಶ ಶಾಸ್ತ್ರಿಗಳು ಮಠದ ಅವರು ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ ಎಚ್‌ ಬಾಳನಗೌಡ್ರ ತಿಳಿಸಿದರು
ಇವರು ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನ ದಾವಣಗೆರೆ ಸಂಸ್ಥೆಯ ಮೂಲಕ ಪರೀಕ್ಷೆಗೆ ಹಾಜರಾಗಿದ್ದು, ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಸಂಸ್ಥೆ, ಗುರುಗಳು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಾಸ್ತುಶಾಸ್ತ್ರದ ಬಗ್ಗೆ ವಿಶೇಷ ಆಸಕ್ತಿ ಮತ್ತು ನಿರಂತರ ಅಧ್ಯಯನದ ಫಲವಾಗಿ ಈ ಸಾಧನೆ ಸಾಧ್ಯವಾಗಿದ್ದು, ಅವರ ಈ ಯಶಸ್ಸಿಗೆ ಗುರುಗಳು, ಕುಟುಂಬದವರು, ಸ್ನೇಹಿತರು, ಹಿತೈಷಿಗಳು ಹಾಗೂ ವಾಸ್ತುಶಾಸ್ತ್ರಾಸಕ್ತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವೇ. ಚನ್ನೇಶ ಶಾಸ್ತ್ರಿಗಳು ಮಠದ ಅವರು ವಾಸ್ತು, ಜ್ಯೋತಿಷ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಈ ಸಾಧನೆಯು ವಿದ್ಯಾರ್ಥಿಗಳಿಗೆ ಹಾಗೂ ವಾಸ್ತುಶಾಸ್ತ್ರ ಅಧ್ಯಯನ ಮಾಡುತ್ತಿರುವವರಿಗೆ ಪ್ರೇರಣೆಯಾಗಿದೆಎಂದರು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು