Home ಕರ್ನಾಟಕರೇಣುಕಾಚಾರ್ಯರ ಯುಗಮಾನೋತ್ಸವ ಹಾಲೇವಾಡಿಮಠದಲ್ಲಿ ರಂಭಾಪುರಿ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ

ರೇಣುಕಾಚಾರ್ಯರ ಯುಗಮಾನೋತ್ಸವ ಹಾಲೇವಾಡಿಮಠದಲ್ಲಿ ರಂಭಾಪುರಿ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ

by Editor
0 comments

ಚೈತನ್ಯ ನ್ಯೂಸ್ 24 ಲಕ್ಷೇಶ್ವರ ಮೇ.10:

ಪಟ್ಟಣದ ಹಾಲೇವಾಡಿ ಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರದ ರಚಿತ ಮಹೋತ್ಸವ ಮತ್ತು ಯುಗ ಮಾನೋತ್ಸವ ಕಾರ್ಯಕ್ರಮದ ನಿಮಿತ್ಯವಾಗಿ ಹಾಲೇವಾಡಿ ಮಠದಲ್ಲಿ ಜಗದ್ಗುರು ವೀರ ಸಿಂಹಾ ಸ ನಾ ದೀ ಶ್ವರ’ ರಂಭಾಪುರಿ ಪೀಠದ তো. ವೀರ ಸೋಮೇಶ್ವರ ಜಗದ್ಗುರುಗಳು ಲೋಕ ಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಅಲೆವಾಡಿ ಮಠದ ವಂಶಸ್ಥರು, ಪಟ್ಟಣದ ಭಕ್ತಾದಿಗಳು ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು. ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕಲಾ ತಂಡಗಳಿಂದ ಜಗದ್ಗುರು ರೇಣುಕಾಚಾರ್ಯರ ಮತ್ತು ವಿಶ್ವಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು. ಯುದ್ದಕ್ಕೂ ವಿವಿಧ ಕಲಾತಂಡಗಳಿಂದ ಮೆರವಣಿಗೆಯು ವಿಜೃಂಭಣೆಯಿಂದ ಸಾಗಿತು. ಅಪಾರಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಮೆರವಣಿಗೆಯು ಸೋಮೇಶ್ವರ ತೇರಿನ ಮನೆ ಆವರಣದ ಮುಂಭಾಗದಲ್ಲಿ ಹಾಕಿರುವ ಭವ್ಯ ವೇದಿಕೆಗೆ ಆಗಮಿಸಿ ಸಂಪನ್ನಗೊಂಡಿತು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು