ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11:
ನಿಧನ ವಾರ್ತೆ ನರೇಗಲ್ಲ-
ಕೋಡಿಕೊಪ್ಪದ ಶ್ರೀ ಅನ್ನದಾನೇಶ್ವರ ಕಾಲೋನಿಯ ನಿವಾಸಿಗಳು ಹಾಗೂ ಶ್ರೀ ವೀರೇಶ್ವರ ಫರ್ಟಿಲೈಜರ್ ಮಾಲೀಕರಾದ ಶ್ರೀ ಆನಂದ ವೀರಯ್ಯ ಹುಯಿಲಗೋಳಮಠ (41) ಇವರು ಇಂದು ರವಿವಾರ ಸಂಜೆ ಅಕಾಲಿಕ ಹೃದಯಾಘಾತದಿಂದ ಲಿಂಗೈಕ್ಯರಾದರೆಂದು ತಿಳಿಸಲು ಅತ್ಯಂತ ವಿಷಾದವಾಗುತ್ತಿದೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಸಹೋದರ-ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯ ವಿವರ:
ಮೃತರ ಅಂತ್ಯಕ್ರಿಯೆಯು ಸೋಮವಾರ ಮೇ 11ರಂದು ಸಮಯ: 11ಕ್ಕೆ ನರೇಗಲ್ಲ ಪಟ್ಟಣದ ಗಜೇಂದ್ರಗಡ ರಸ್ತೆಯ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ.
