Home Uncategorizedಭವಿಷ್ಯದ ಜೀವನಕ್ಕೆ ಕಂಪ್ಯೂಟ‌ರ್ ಶಿಕ್ಷಣ ಅವಶ್ಯಕ: ಚಂದ್ರಾಮ ಗ್ರಾಮಪುರೋಹಿತ

ಭವಿಷ್ಯದ ಜೀವನಕ್ಕೆ ಕಂಪ್ಯೂಟ‌ರ್ ಶಿಕ್ಷಣ ಅವಶ್ಯಕ: ಚಂದ್ರಾಮ ಗ್ರಾಮಪುರೋಹಿತ

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11:

ಇಂದಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ಮಕ್ಕಳ ಭವಿಷ್ಯದ ಜೀವನಕ್ಕೆ ಕಂಪ್ಯೂಟ‌ರ್ ಶಿಕ್ಷಣವನ್ನು ಪಡೆಯಲೇಬೇಕು ಎಂದು ಚಂದ್ರಾಮ ಗ್ರಾಮಪುರೋಹಿತ ಹೇಳಿದರು. ಪಟ್ಟಣದ ಕೆಜಿಎಂಎಸ್ ದ್ವಿಭಾಷಾ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಕಂಪ್ಯೂಟ‌ರ್ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಕಾರಿ ಶಾಲೆಯ ವಿದ್ಯಾರ್ಥಿಗಳು ಅನೇಕ ಸಂದರ್ಭಗಳಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಸೌಲಭ್ಯಗಳಲ್ಲಿ ಹಿಂದುಳಿಯುವ ಉದಾಹರಣೆಗಳಿವೆ. ಆದರೂ ಇಲ್ಲಿ ಮಕ್ಕಳು ಬೇಸಿಗೆ ವೇಳೆಯನ್ನು ವ್ಯರ್ಥ ಮಾಡದೆ ಕಂಪ್ಯೂಟ‌ರ್ ಶಿಕ್ಷಣವನ್ನು ಪಡೆದು ಭವಿಷ್ಯಕ್ಕೆ ತಯಾರಾಗಿರುವುದು ಸಂತಸದ ಸಂಗತಿ. ಇಂತಹ ಅವಕಾಶವನ್ನು ಒದಗಿಸಿದ ಶಾಲೆಯ ಗುರುಬಳಗ ಅಭಿನಂದನಾರ್ಹರು ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಎಂ.ಎಲ್. ಹೊಸಳ್ಳಿ ಮಾತನಾಡಿ, “ಬೇಸಿಗೆ ವೇಳೆಯಲ್ಲಿ ಮಕ್ಕಳಿಗೆ ಉಪಯುಕ್ತವಾದ ಚಟುವಟಿಕೆ ನೀಡಬೇಕೆಂದು ಸಿಬ್ಬಂದಿ ಚರ್ಚಿಸಿ, ಯುಥ್ ಫಾರ್ ಸೇವಾ ಸಂಸ್ಥೆಯಿಂದ ದೊರೆತ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಯಿತು. ಶಿಕ್ಷಕರ ಸಹಕಾರದಿಂದ ಇದು ಯಶಸ್ವಿಯಾಗಿದೆ” ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಬಿ. ಕುರಿ, ಡಿ.ವಿ. ಕಳ್ಳಿ, ಗುರುಮಾತೆಯರಾದ ವಿ.ಎಸ್. ದಿಂಡೂರ, ರೇವತಿ ಹುಬ್ಬಳ್ಳಿ ಉಪಸ್ಥಿತರಿದ್ದರು. ಶಿಕ್ಷಕ ಜೆ.ಎ. ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ