Home ಜಿಲ್ಲಾ ಸುದ್ದಿಗಳುಫ್ಲಾರಿನ್ ನೈಟಿಂಗೆಲ್ ಅವರ ಜನ್ಮದಿನದ ನೆನಪಿಗಾಗಿ ಮೇ 12ನೇ ತಾರೀಕಿನಂದು ಅಂತರಾಷ್ಟ್ರೀಯ ದಾದಿಯರ ದಿನ

ಫ್ಲಾರಿನ್ ನೈಟಿಂಗೆಲ್ ಅವರ ಜನ್ಮದಿನದ ನೆನಪಿಗಾಗಿ ಮೇ 12ನೇ ತಾರೀಕಿನಂದು ಅಂತರಾಷ್ಟ್ರೀಯ ದಾದಿಯರ ದಿನ

ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಸರ್ಕಾರಿ ಆಸ್ಪತ್ರೆಯ ದಾದಿಯರ ಸನ್ಮಾನ

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.15:

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ದಾದಿಯರ ದಿನದಂದು ನರೇಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎಲ್ಲಾ ನರ್ಸಸ್ ಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆಯ ದಾದಿ ಯಾದ ಜ್ಯೋತಿ ಬೀರೂರು ಕಾರ್ಯಕ್ರಮವನ್ನು ಉದ್ದೇಶಿಸಿ, ಆಧುನಿಕ ಶುಶ್ರೂಷ ಶಾಸ್ತ್ರದ ಜನನಿ ಆಗಿರುವ ಫ್ಲಾರಿನ್ ನೈಟಿಂಗೆಲ್ ಅವರ ಜನ್ಮದಿನದ ನೆನಪಿಗಾಗಿ ಮೇ 12ನೇ ತಾರೀಕಿನಂದು ಅಂತರಾಷ್ಟ್ರೀಯ ದಾದಿಯರ ದಿನ ಎಂದು ಈ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಹಗಲಿರಳು ಶ್ರಮಿಸುವ ರೋಗಿಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ದಾದಾ ದಾದಿಯರ ಸೇವೆಯನ್ನ ಗುರುತಿಸಿ ಗೌರವಿಸುತ್ತಿರುವ ಈಶ್ವರೀಯ ವಿಶ್ವ ವಿದ್ಯಾಲಯದ ಸೇವೆ ಶ್ಲಾಘನೀಯ ಎಂದು ಅವರು ಮಾತನಾಡಿದರು.   ಕಾರ್ಯಕ್ರಮದಲ್ಲಿ ದಾದಾ ದಾದಿಯರ ಸೇವಾ ಜೀವನದಲ್ಲಿ ಆಧ್ಯಾತ್ಮಿಕತೆಯ ಮಹತ್ವ ಮತ್ತು ಮೆಡಿಟೇಶನ್ ನ ಪ್ರಭಾವ ಎಷ್ಟು ಪ್ರಮುಖ ಪಾತ್ರ ಮಾಡುತ್ತದೆ ಎಂದು ಬ್ರಹ್ಮಕುಮಾರಿ ಸವಿತಕ್ಕನವ್ರು ವಿಸ್ತರಿಸಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆಯ ಮುತ್ತು ಮಣಿನಗರ್, ಸಂತೋಷ್ ಚುಂಚ, ಎಲ್ಲಮ್ಮ, ಸಂಗೀತ ಮುಚ್ಕಂಡಿ, ವಿಜಯಲಕ್ಷ್ಮಿ ಪೊಲೀಸ್ ಪಾಟೀಲ್, ರತ್ನ ಧರ್ಮಾಯತ್ ಹಾಗೂ ಈಶ್ವರೀಯ ವಿಶ್ವವಿದ್ಯಾಲಯದ ಸರ್ವ ದೈವಿ ಪರಿವಾರದವರು ಉಪಸ್ಥಿತರಿದ್ದರು

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು