ಚೈತನ್ಯ ನ್ಯೂಸ್ ೨೪, ನರೇಗಲ್ಲ ಮೇ.೨೪:
ಸ್ಥಳಿಯ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ೨೦೦೧ -೨೦೦೨ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅದ್ಯಯನ ಮಾಡಿದ್ದ ಹಳೆಯ ವಿದ್ಯಾರ್ಥಿನಿಯರು ಒಂದೆಡೆ ಸೇರಿ ಇದೇ ಮೇ. ೨೭ ಬುಧುವಾರ ಮುಂಜಾನೆ 9 ಘಂಟೆಗೆ ಗುರುವಂದನೆ ಹಾಗೂ ಸ್ನೇಹ ಸ್ಪಂದನವನ್ನು ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದಾರೆ
ಕಾರ್ಯಕ್ರಮದಲ್ಲಿ ಶ್ರೀ ಅನ್ನದಾನೇಶ್ವರ ಮಠದ ಪೀಠಾಧಿಪತಿ ಹಾಗೂ ಎಸ್ ಎ ವಿ ವಿ ಪಿ ಸಮೀತಿಯ ಅಧ್ಯಕ್ಷರಾದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಕಾರ್ಯಕ್ರಮವನ್ನು ಎಸ್ ಎ ವಿ ವಿ ಪಿ ಸಮೀತಿಯ ಪ್ರದಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹಾಗೂ ಸಮೀತಿಯ ಆಡಳಿತಾಧಿಕಾರಿ ಡಾ ಜಿ ಕೆ ಕಾಳೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಎಸ್ ಎನ್ ಹೂಲಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿನಿಯರು ನಿವೃತ್ತ ಮುಖ್ಯೋಪಾಧ್ಯಾಯಿನಿ ಎ ಎ ಭಾವಿಕಟ್ಟಿ, ಕನ್ನಡ ಭಾಷಾ ಶಿಕ್ಷಕ ಎ ಟಿ ಮಳ್ಳಳ್ಳಿ, ಆಂಗ್ಲಭಾಷಾ ಶಿಕ್ಷಕ ಬಿ ಡಿ ಎರಗೊಪ್ಪ, ಹಿಂದಿ ಶಿಕ್ಷಕ ಎಂ ಎಸ್ ಅತ್ತಾರ, ದೈಹಿಕ ಶಿಕ್ಷಕ ಕೆ ಸಿ ಜೋಗಿ , ಗಣಿತ ಹಾಗೂ ವಿಜ್ಞಾನ ಶಿಕ್ಷಕಿ ಎಸ್ ಎಫ್ ಧರ್ಮಾಯತ, ನಿವೃತ್ತ ಕಲಾ ಶಿಕ್ಷಕಿ ಆರ್ ಎಸ್ ಪಾಟೀಲ, ಸಮಾಜ ವಿಜ್ಞಾನ ಶಿಕ್ಷಕ ಎಸ್ ಶಿವಮೂರ್ತಿ ಯವರಿಗೆ ಗುರುವಂದನೆ ಸಲ್ಲಿಸಿ ಅವರಿಂದ ಆಶೀರ್ವಾದ ಪಡೆಯಲಿದ್ದಾರೆ.
ಕಾರ್ಯಕ್ರಮದಲ್ಲಿ ಕಲಾ ಶಿಕ್ಷಕ ಆರ್ ಎಂ ಶಿಳ್ಳಿನ, ಕಲಾ ಶಿಕ್ಷಕಿ ರೇಣುಕಾ ಗುಳಬಾಳ, ಹಿರಿಯ ನಿವೃತ್ತ ಸಹಾಯಕ ಶೇಷಣ್ಣ ಕುಲಕರ್ಣಿ, ಇನ್ನೋರ್ವ ಹಿರಿಯ ನಿವೃತ್ತ ಸಹಾಯಕ ಬಸನಗೌಡ ಹಿರೇವಡೆಯರ, ದ್ವಿತಿಯ ದರ್ಜೆ ಸಹಾಯಕ ಈರಣ್ಣ ಚುಳಕಿಮಠ, ಸಹಾಯಕ ಎಸ್ ಬಿ ಕುರುಡಗಿ, ಸಹಾಯಕಿ ಬಸಮ್ಮ ಅಸುಂಡಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ ಎಂದು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ