ಚೈತನ್ಯ ನ್ಯೂಸ್ 24 ಗಜೇಂದ್ರಗಡ ಮೇ. 10:
ಗದಗ ನಗರದ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಬಿ. ಎಫ್. ದಂಡಿನ ಅವರ ಧರ್ಮಪತ್ನಿ, ಜಿಪಂ. ಮಾಜಿ ಉಪಾಧ್ಯಕ್ಷರು ಹಾಗೂ ಭಾರತ ಅಹಾರ ನಿಗಮದ ರಾಜ್ಯ ನಿರ್ದೇಶಕರಾದ ರವಿ ದಂಡಿನ ರವರ ಮಾತೃಶ್ರೀಯವರಾದ ಶ್ರೀಮತಿ ಶಕುಂತಲಾಬಾಯಿ. ಬಿ. ದಂಡಿನ (83) ಅವರು ರವಿವಾರ ಸಾಯಂಕಾಲ 5-15ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದವೆನಿಸುತ್ತೆವೆ.
.ಮೃತರ ಅಂತಿಮ ಯಾತ್ರೆಯು ಸೋಮವಾರ ಬೆಳಿಗ್ಗೆ 12 ಗಂಟೆಗೆ ನಗರದ ರಾಜೀವಗಾಂದಿ ನಗರದ ಕನಕದಾಸ ಶಿಕ್ಷಣ ಸಮಿತಿಯ ಆವರಣದಲ್ಲಿ ಜರುಗಲಿದೆ.
ಮೃತರು ಪತಿ, ಇರ್ವರು ಪತ್ರರು, ಮೂವರು ಪತ್ರಿಯರು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.